ಕನ್ನಡ ಆಗಸ್ಟ್ ಚಟುವಟಿಕೆ – ಅಣಕು ಚುನಾವಣೆ
ನಿರೀಕ್ಷಿತ ಫಲಿತಾಂಶಗಳು
· ACTiZENS ಕ್ಲಬ್‌ನ ಪದಾಧಿಕಾರಿಗಳನ್ನು ಪ್ರಜಾತಾಂತ್ರಿಕವಾಗಿ ಚುನಾಯಿಸುವುದು.
· ಕ್ರಿಯೆ, ಚಟುವಟಿಕೆ ಮತ್ತು ಪಾಲ್ಗೊಳ್ಳುವಿಕೆಯ ಮೂಲಕ ಕಾರ್ಯವಿಧಾನವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವಂತೆ ಮಾಡಲು ಅಣಕು ಸಂಪೂರ್ಣ ಚುನಾವಣೆ ಪ್ರಕ್ರಿಯೆ ನಡೆಸುವುದು.
· ಭಾರತದಂತಹ ಪ್ರಜಾತಾಂತ್ರಿಕ ದೇಶದಲ್ಲಿ ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಅರ್ಥಮಾಡಿಸುವುದು.
ಬೇಕಾದ ಸಾಮಗ್ರಿಗಳು
ಖಾಲಿ ಹಾಳೆಗಳು, ರಟ್ಟಿನ ಪೆಟ್ಟಿಗೆ, ಬಾಕ್ಸ್ ಕವರ್ ಮಾಡಲು ಚಾರ್ಟ್ ಪೇಪರ್ /ಬಣ್ಣದ ಪೇಪರ್ (ಐಚ್ಛಿಕ), ಅಂಟು, ಕತ್ತರಿಗಳು, ರೂಲರ್, ಪೆನ್ಸಿಲ್‌ಗಳು, ಇರೇಸರ್‌ಗಳು ಮತ್ತು ಸ್ಕೆಚ್ ಪೆನ್.
ಸೆಶನ್ನ ಅವಲಕೋನ
ಕ್ರ. ಸಂ. | ಚುಟವಟಿಕೆ ಪ್ರಕ್ರಿಯೆ | ತೆಗೆದುಕೊಳ್ಳುವ ಸಮಯ |
ಅವಧಿ 1 | ಚಟುವಟಿಕಾ ಪೂರ್ವ ಯೋಜನೆ
ಶಿಕ್ಷಕರು ನಿರ್ದೇಶಿತ ಹಂತಗಳಾದ 1, 2 ಮತ್ತು 3 ಅನ್ನು ಅನುಸರಿಸಬೇಕು ಗಮನಿಸಿ: ಶಿಕ್ಷಕರು ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಭಾಗಿಸಬಹುದು ಮತ್ತು ಮತಪೆಟ್ಟಿಗೆಗಳು, ಮತದಾರರ ಪಟ್ಟಿ ರಚನೆ ಇತ್ಯಾದಿ ಕಾರ್ಯ/ ಚಟುವಟಿಕೆಗಳನ್ನು ಪ್ರತಿ ಗುಂಪಿಗೆ ಹಂಚಬಹುದು, ಪ್ರತಿಯೊಂದು ಕಾರ್ಯ /ಚಟುವಟಿಕೆಯನ್ನು ನೀಡಲಾದ ಸಮಯದೊಳಗೆ ಪೂರ್ಣಗೊಳಿಸಬೇಕು. |
45 ನಿಮಿಷ |
ಅವಧಿ 2 | ತರಗತಿಯ ಮುಖ್ಯ ಚಟುವಟಿಕೆ
ಶಿಕ್ಷಕರು ಹಂತಗಳಾದ 4, 5, 6 ಮತ್ತು 7 ಅನ್ನು ಪರಾಮರ್ಶಿಸಬೇಕು |
45 ನಿಮಿಷ |
ಚಟುವಟಿಕಾ ಪೂರ್ವ ಯೋಜನೆ
ಅವಧಿ 1
ಬೇಕಾಗುವ ಸಮಯ -45 ನಿಮಿಷಗಳು
ಹಂತ 1- ವೀಡಿಯೋ ವೀಕ್ಷಣೆ
ಹಂತ 2- ಶೋಧನಾತ್ಮಕ ಪ್ರಶ್ನೆಗಳು
ಹಂತ 3- ಚಟುವಟಿಕೆಯ ವಿವರಣೆ
ನಾವೀಗ ಪ್ರಾರಂಭಿಸೋಣ!
ಹಂತ 1- ವೀಡಿಯೋ ವೀಕ್ಷಣೆ
ಚುನಾವಣೆಗಳ ಕುರಿತಾದ ಕಿರು ವೀಡಿಯೋವನ್ನು ಶಿಕ್ಷಖರು ತೋರಿಸಬಹುದು. ಆ ವೀಡಿಯೋದ ಲಿಂಕ್ ಇಲ್ಲಿ ಕೆಳಗಿದೆ:
ಭಾರತದ ಚುನಾವಣಾ ವ್ಯವಸ್ಥೆ |ಸಮಾಜ ಅಧ್ಯಯನ ಟ್ಯುಟೋರಿಯಲ್
ಹಂತ 2- ಶೋಧನಾತ್ಮಕ ಪ್ರಶ್ನೆಗಳು
ಮುಂದಿನ ಹಂತದಲ್ಲಿ, ಪ್ಲೇ ಮಾಡಿದ ವೀಡಿಯೋದ ಆಧಾರದಲ್ಲಿ ಕೆಲವು ಶೋಧನಾತ್ಮಕ ಪ್ರಶ್ನೆಗಳನ್ನು ಕೇಳಿ. ಆ ಕೆಲವು ಪ್ರಶ್ನೆಗಳು ಹೀಗಿರಲಿ:
· ಭಾರತದಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಯಾರು ಅರ್ಹರಾಗಿದ್ದಾರೆ?
· ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಯಾರು ಅರ್ಹರಾಗಿದ್ದಾರೆ?
· ಪ್ರತ್ಯಕ್ಷ ಚುನಾವಣೆ ಮತ್ತು ಪರೋಕ್ಷ ಚುನಾವಣೆಯ ನಡುವಿನ ವ್ಯತ್ಯಾಸ ಏನು?
ಹಂತ 3- ಚಟುವಟಿಕೆಯ ವಿವರಣೆ
ಕೆಳಗೆ ನೀಡಲಾದ ಚಟುವಟಿಕೆಯನ್ನು ತರಗತಿಗೆ ವಿವರಿಸಿ:
● ವಿವಿಧ ಪದಾಧಿಕಾರಿಗಳ ಹುದ್ದೆಗೆ (ಆಕ್ಟಿಝೆನ್ಸ್(ACTiZENS) ಕ್ಲಬ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷನಂತಹ) ಅಭ್ಯರ್ಥಿಗಳನ್ನು ನಾಮನಿರ್ದೇಶನಗೊಳಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿ. ಸ್ವತಃ ತಮ್ಮನ್ನು ನಾಮನಿರ್ದೇಶನಗೊಳಿಸಲು ಅಭ್ಯರ್ಥಿಗಳಿಗೂ ಅವಕಾಶವಿದೆ.
● ತರಗತಿಯೆದುರು ತಮ್ಮ ಉಮೇದುವಾರಿಕೆಯ ಕುರಿತು ಸಂಕ್ಷಿಪ್ತವಾಗಿ ಮಾತನಾಡುವಂತೆ ಅಭ್ಯರ್ಥಿಗಳಿಗೆ ಹೇಳಿ.
● ಮತದಾರರ ನೋಂದಣಿ – ಮತದಾರರ ಪಟ್ಟಿಯನ್ನು ಮುಂಚಿತವಾಗಿ ತಯಾರಿಸಿ ಮತ್ತು ಮತ್ತು ಚುನಾವಣಾ ದಿನಾಂಕವನ್ನು ಘೋಷಿಸಿ.
● ಮತಪೆಟ್ಟಿಗೆ ಮತ್ತು ಅಭ್ಯರ್ಥಿಗಳ ಹೆಸರುಗಳನ್ನು ಉಲ್ಲೇಖಿಸಿದ ಮತಪತ್ರವನ್ನು ತಯಾರಿಸಿ.
● ಯಾರಿಗೆ ಮತ್ತು ಯಾಕೆ ಮತ ಚಲಾಯಿಸಲು ಬಯಸುತ್ತೀರಿ ಎಂಬುದನ್ನು ಯೋಚಿಸಿ ಮತದಾನದ ದಿನದಂದು ಸಿದ್ಧರಾಗಿ ಬರುವಂತೆ ವಿದ್ಯಾರ್ಥಿಗಳಿಗೆ ಹೇಳಿ,
A.ಮಾದರಿ ಮತ ಪತ್ರ
ಪ್ರತಿಯೊಂದು ಪದಾಧಿಕಾರಿ ಹುದ್ದೆಗೆ ತರಗತಿಯ ಗಾತ್ರದ ಪ್ರಕಾರ ಮತಪತ್ರಗಳನ್ನು ತಯಾರಿಸಲು 2-3 ವಿದ್ಯಾರ್ಥಿಗಳಿಗೆ/ಒಂದು ಗುಂಪಿಗೆ ಜವಾಬ್ದಾರಿಯನ್ನು ನೀಡಿ. ಒಂದೋ ಪ್ರಿಂಟೌಟ್‌ಗಳನ್ನು ತೆಗೆದುಕೊಳ್ಳಿ ಅಥವಾ ಪೇಪರ್ ಮತ್ತು ಪೆನ್ ಬಳಸಿಕೊಂಡು ಕೈಯಾರೆ ಸಿದ್ಧಪಡಿಸಲಿ.
ಮಾದರಿಯನ್ನು ಇಲ್ಲಿ ಕೆಳಗೆ ನೀಡಲಾಗಿದೆ:
B.ಮಾದರಿ ಮತದಾರರ ನೋಂದಣಿ ಕಾರ್ಡ್
ಸಣ್ಣ ಕಾಗದದ ಹಾಳೆಯೊಂದನ್ನು ಬಳಸಿಕೊಂಡು ‘ಮತದಾರರ ನೋಂದಣಿ ಕಾರ್ಡ್’ ಸಿದ್ಧಪಡಿಸುವಂತೆ/ಪ್ರಿಂಟ್ ತೆಗೆಯುವಂತೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಹೇಳಿ. ಮತದಾನಕ್ಕಾಗಿ ನೋಂದಾಯಿಸಲು, ಪ್ರತಿಯೊಬ್ಬ ವಿದ್ಯಾರ್ಥಿಯು ಅಣಕು ಮತದಾರರ ನೋಂದಣಿ ಕಾರ್ಡ್ ಭರ್ತಿ ಮಾಡಬೇಕು, ಅದರಲ್ಲಿ ಅವರು ತಮ್ಮ ಹೆಸರು, ತರಗತಿ ಕೊಠಡಿ, ತರಗತಿ ಹಾಗೂ ತಾವು ಸೇರಿಸಲು ಬಯಸುವ ಯಾವುದೇ ಇತರೆ ಮಾಹಿತಿಯನ್ನು ಬರೆಯಬೇಕು. ಈ ಪ್ರಕ್ರಿಯೆಯು ಚುನಾವಣೆಯ ದಿನದಂದು ಮತ ಚಲಾಯಿಸುವುದಕ್ಕಿಂತ ತುಂಬಾ ಮುನ್ನ ವಯಸ್ಕರು ಅಧಿಕೃತವಾಗಿ ತಮ್ಮನ್ನು ಹೇಗೆ ನೋಂದಾಯಿಸಿಕೊಳ್ಳುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ಅರಿಯುತ್ತಾರೆ.
ಮಾದರಿಯನ್ನು ಇಲ್ಲಿ ಕೆಳಗೆ ನೀಡಲಾಗಿದೆ:
C.ಮತದಾರರ ಪಟ್ಟಿ
ಶಿಕ್ಷಕರು ಎಲ್ಲಾ ಮತದಾರರ ನೋಂದಣಿ ಕಾರ್ಡ್‌ಗಳನ್ನು ಸಂಗ್ರಹಿಸುತ್ತಾರೆ ಮತ್ತು ಮತದಾರರ ಪಟ್ಟಿ ತಯಾರಿಸುತ್ತಾರೆ. ಪ್ರತಿ ವಿದ್ಯಾರ್ಥಿಯ ಹೆಸರಿನ ಎದುರು ಖಾಲಿ ಸ್ಥಳ ಬಿಡಿ, ಅವರಿಗೆ ಮತಪತ್ರವನ್ನು ನೀಡುವ ಮುನ್ನ ಅಲ್ಲಿ ಸಹಿ ತೆಗೆದುಕೊಳ್ಳಬೇಕಾಗಿರುತ್ತದೆ. ಒಂದು ಚುನಾವಣಾ ಆವೃತ್ತಿಯಲ್ಲಿ ಕೇವಲ ಒಂದು ಬಾರಿಯಷ್ಟೇ ಜನರು ಮತ ಚಲಾಯಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಈ ಪ್ರಕ್ರಿಯೆಯು ತಿಳಿಸುತ್ತದೆ.
ಮಾದರಿಯನ್ನು ಇಲ್ಲಿ ಕೆಳಗೆ ನೀಡಲಾಗಿದೆ:
D.ಮತ ಪೆಟ್ಟಿಗೆ
ವಿದ್ಯಾರ್ಥಿಗಳ ಒಂದು ಗುಂಪು ಶೂ ಬಾಕ್ಸ್ ಅಥವಾ ಕಾರ್ಡ್‌ಬೋರ್ಡ್ ಬಾಕ್ಸ್ ಅನ್ನು ಉಪಯೋಗಿಸಿಕೊಂಡು ಮತ ಪೆಟ್ಟಿಗೆಯನ್ನು ತಯಾರಿಸಬಹುದು, ಆ ಪೆಟ್ಟಿಗೆಯ ಮೇಲ್ಭಾಗದಲ್ಲಿ ಸಣ್ಣದಾಗಿ ಉದ್ದವಾಗಿ ರಂಧ್ರ ಮಾಡಲಿ. ವಿದ್ಯಾರ್ಥಿಗಳಿಗೆ ಬೇಕೆನಿಸಿದರೆ, ಬಣ್ಣದ ಪೇಪರ್‌ನಿಂದ ಆ ಪೆಟ್ಟಿಗೆಯನ್ನು ಕವರ್ ಮಾಡಬಹುದು ಮತ್ತು ಅದಕ್ಕೆ "ಮತ ಪೆಟ್ಟಿಗೆ – ಆಕ್ಟಿಝೆನ್ಸ್(ACTiZENS) ಕ್ಲಬ್” ಎಂಬುದಾಗಿ ಹೆಸರಿಸಬಹುದು.
ತರಗತಿ ಚಟುವಟಿಕೆ
ಅವಧಿ 1
ಬೇಕಾಗುವ ಸಮಯ -45 ನಿಮಿಷಗಳು
ಹಂತ 4- ಮತ ಪೆಟ್ಟಿಗೆ ಸಿದ್ಧಪಡಿಸುವುದು.
ಹಂತ 5- ರಹಸ್ಯ ಮತಪತ್ರದೊಂದಿಗೆ ಮತದಾನ ಪ್ರಕ್ರಿಯೆ ಆರಂಭ.
ಹಂತ 6- ಮತಗಳ ಎಣಿಕೆ ಮತ್ತು ತಾಳೆ ನೋಡುವುದು ಮತ್ತು
ಹಂತ 7- ಚುನಾವಣಾ ಫಲಿತಾಂಶ ಪ್ರಕಟಣೆ.
ನಾವೀಗ ಚಟುವಟಿಕೆಯನ್ನು ಆರಂಭಿಸೋಣ!
ಹಂತ 4- ಮತ ಪೆಟ್ಟಿಗೆ ಸಿದ್ಧಪಡಿಸುವುದು
ತರಗತಿಯ ಒಂದು ಮೂಲೆಯಲ್ಲಿ ಮತಪೆಟ್ಟಿಗೆಯನ್ನು ಇಡಿ ಮತ್ತು ಮತಪತ್ರಗಳನ್ನು ಎಲ್ಲಾ ಕ್ಲಬ್ ಸದಸ್ಯರಿಗೆ (ವಿದ್ಯಾರ್ಥಿಗಳಿಗೆ) ಹಂಚಿ.
ಹಂತ 5- ಗೌಪ್ಯ ಮತಪತ್ರ
ಒಂದು ಬಾರಿಗೆ ಒಬ್ಬ ವಿದ್ಯಾರ್ಥಿಯಂತೆ ಗೌಪ್ಯವಾಗಿ ಮತಪತ್ರದೊಂದಿಗೆ ಮತ ಚಲಾಯಿಸಬೇಕು. ಪ್ರತಿ ವಿದ್ಯಾರ್ಥಿಯು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹುಡುಕಿ ಅದರ ಎದುರು ಸಹಿ ಮಾಡಬೇಕು. ಆ ವಿದ್ಯಾರ್ಥಿಗೆ ಬಳಿಕ ಮತ ಚಲಾಯಿಸಲು ಮತಪತ್ರವನ್ನು ನೀಡಲಾಗುತ್ತದೆ.
ಮತಪತ್ರವನ್ನು ಗೌಪ್ಯವಾಗಿ ಓದಿ ಭರ್ತಿ ಮಾಡಲು ವಿದ್ಯಾರ್ಥಿಗಳಿಗೆ ಖಾಸಗಿ ಸ್ಥಳವಿರಲಿ. ಇದಕ್ಕಾಗಿ ಮೂಲೆಯಲ್ಲಿ ಕೆಲವು ಡೆಸ್ಕ್‌ಗಳನ್ನು ಜೋಡಿಸಿದರೆ ಸಾಕು. ಇನ್ನಷ್ಟು ಪರಿಣಾಮಕಾರಿಯಾಗಲು, ನೀವು ಮತದಾನ ಬೂತ್ ಅನ್ನು ಕೂಡಾ ಮಾಡಬಹುದು, ಅಲ್ಲಿ ವಿದ್ಯಾರ್ಥಿ ಮತ್ತಷ್ಟು ಖಾಸಗಿಯಾಗಿ ಮತಪತ್ರವನ್ನು ಭರ್ತಿ ಮಾಡಬಹುದು — ಫ್ರಿಜ್ ಅನ್ನು ಪ್ಯಾಕ್ ಮಾಡಲು ಬಳಸುವ ಕಾರ್ಡ್‌ಬೋರ್ಡ್ ಬಾಕ್ಸ್ ಅನ್ನು ಬೂತ್ ಆಗಿ ಮಾಡಬಹುದು. ಇದು ಗೌಪ್ಯ ಮತಪತ್ರ ಹಾಗೂ ತಾವು ಬಯಸುವ ಅಭ್ಯರ್ಥಿಗೆ ಮತ ಚಲಾಯಿಸಲು ಅವರಿಗೆ ಅವಕಾಶವಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ನೆನಪಿಸಿ — ಯಾವುದೇ ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸಬೇಕು (ಮತ ಚಲಾಯಿಸಬಾರದು) ಎಂದು ಯಾರೂ ಕೂಡಾ ಯಾರ ಮೇಲೆಯೂ ಒತ್ತಡ ಹೇರುವಂತಿಲ್ಲ! ವಿದ್ಯಾರ್ಥಿಗಳು ತಮ್ಮ ಫಾರ್ಮ್ ಅನ್ನು ಭರ್ತಿ ಮಾಡಿದ ಬಳಿಕ, ಮತಪೆಟ್ಟಿಗೆಯಲ್ಲಿ ಮತಪತ್ರವನ್ನು ಹಾಕಬಹುದು.
ಫಲಿತಾಂಶ ಹಾಳೆಯ ಮಾದರಿಯನ್ನು ಇಲ್ಲಿ ಕೆಳಗೆ ನೀಡಲಾಗಿದೆ:
ಹಂತ 6- ಮತ ಎಣಿಕೆ ಮತ್ತು ತಾಳೆ ನೋಡುವುದು
ನೀವು ಪ್ರತಿ ಮತಪತ್ರವನ್ನು ಎಣಿಸಿದಂತೆ, ಬೋರ್ಡ್‌ನಲ್ಲಿರುವ (ಮೇಲಿನ ತರಗತಿಯಲ್ಲಿನ ವಿದ್ಯಾರ್ಥಿಗಳಿಗೆ, ಮತಗಳ ಶೇಕಡಾವಾರನ್ನೂ ನೀವು ಲೆಕ್ಕಹಾಕಬಹುದು) ಮತಗಳೊಂದಿಗೆ ತಾಳೆ ನೋಡಿ. ನೀವು ಎಣಿಕೆ ಮುಗಿಸಿದ ಬಳಿಕ, ವಿದ್ಯಾರ್ಥಿಗಳ ಸಂಖ್ಯೆ ಮತ್ತು ಮತಪತ್ರಗಳ ಸಂಖ್ಯೆ ಸಮವಾಗಿದೆ ಎಂಬುದನ್ನು ಖಾತ್ರಿಪಡಿಸಿ. ಅಧ್ಯಧಿಕ ಸಂಖ್ಯೆಯ ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತನೆಂದು ಘೋಷಿಸಬೇಕು. ಸಮಬಲವಾದರೆ, ನೀವು ಇನ್ನೊಂದು ಸುತ್ತಿನ ಮತದಾನ ನಡೆಸಬಹುದು ಅಥವಾ ಶಿಕ್ಷಕರು ತಮ್ಮ ಮತ ಚಲಾಯಿಸಬಹುದು.
ಹಂತ 7- ಚುನಾವಣಾ ಫಲಿತಾಂಶಗಳ ಪ್ರಕಟಣೆ
ಮತದಾನದ ಪ್ರಾಮುಖ್ಯತೆ ಮತ್ತು ಪರಿಣಾಮವನ್ನು ವಿದ್ಯಾರ್ಥಿಗಳಿಗೆ ತೋರಿಸಲು, ಫಲಿತಾಂಶಗಳನ್ನು ಪ್ರಕಟಿಸುವಾಗ ಪರಿಣಾಮಕಾರಿಯಾಗಿರುವಂತೆ ಮಾಡಿ. ವಿಜೇತರು ಮತ್ತು ಆಕ್ಟಿಝೆನ್ಸ್(ACTiZENS) ಕ್ಲಬ್‌ನ ಪದಾಧಿಕಾರಿಗಳನ್ನು ಪ್ರಕಟಿಸಿ ಮತ್ತು ಕಾರ್ಯಕ್ರಮದ ಮೂಲಕ ಹೊಸದಾಗಿ ಚುನಾಯಿತರಾದ ಸದಸ್ಯರು ಹಾಗೂ ಪದಾಧಿಕಾರಿಗಳಿಗೆ ಬ್ಯಾಡ್ಜ್‌ಗಳನ್ನು ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಕ್ಲಬ್ ಅನ್ನು ಉದ್ಘಾಟಿಸಿ.
ಪ್ರತಿಫಲನ ಹಾಳೆಯನ್ನು ಭರ್ತಿ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿ.