ಕನ್ನಡ ಸೆಪ್ಟೆಂಬರ್ ಚಟುವಟಿಕೆ – ಸಮಗ್ರತೆಯ ಭಾವಚಿತ್ರ
ಉದ್ದೇಶಗಳು
- ಪ್ರಾಮಾಣಿಕತೆ ಮತ್ತು ಜವಾಬ್ದಾರಿಯ ಸಂದರ್ಭದಲ್ಲಿ ಸಮಗ್ರತೆಯ ಅರ್ಥವನ್ನು ವ್ಯಾಖ್ಯಾನಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
- ಜವಾಬ್ದಾರಿಯುತ ನಾಗರಿಕರಾಗುವುದು ಎಂದರೆ ಏನರ್ಥ ಎಂಬುದನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ.
ಫಲಿತಾಂಶಗಳು
- ಸ್ವಂತ ಮಾತುಗಳಲ್ಲಿ ಸಮಗ್ರತೆಯ ಕುರಿತು ತಾವು ತಿಳಿದಿರುವುದನ್ನು ವಿವರಿಸಲು ಸಾಧ್ಯವಾಗುತ್ತದೆ.
- ಜವಾಬ್ದಾರಿಯುತ ನಾಗರಿಕರಾಗುವುದರ ಅರ್ಥವೇನೆಂದು ವಿದ್ಯಾರ್ಥಿಗಳು ವಿವರಿಸುತ್ತಾರೆ.
ಕೌಶಲ್ಯಗಳು ಮತ್ತು ಮೌಲ್ಯಗಳು
ಕೌಶಲ್ಯಗಳು - ಸಂವಹನ, ಸಮಸ್ಯೆ ಪರಿಹಾರ ಮತ್ತು ಸೃಜನಶೀಲತೆ
ಮೌಲ್ಯಗಳು - ಸಮಗ್ರತೆ
ತರಗತಿಗಳ ಅವಲೋಕನ
ಕ್ರ. ಸಂ | ತರಗತಿಯ ವಿವರಗಳು | ಬೇಕಾದ ಅಂದಾಜು ಸಮಯ |
1 | ಹಂತ 1: ಪರಿಚಯ
ಹಂತ 2: ಸಮಗ್ರತೆಯ ಭಾವಚಿತ್ರ |
45 ನಿಮಿಷಗಳು |
2 | ಹಂತ 3: ಪ್ರಸ್ತುತಿ
ಹಂತ 4: ಚಟುವಟಿಕೆಯ ವಿವರಣೆ |
45 ನಿಮಿಷಗಳು |
ಬೇಕಾದ ಸಾಮಗ್ರಿಗಳು
ನೋಟ್‌ಬುಕ್, ಪೆನ್ನುಗಳು, ಚಾರ್ಟ್ ಪೇಪರ್/ಖಾಲಿ A4 ಗಾತ್ರದ ಪೇಪರ್ /ಖಾಲಿ ಪೇಪರ್‌ಗಳು
ಚಟುವಟಿಕೆಯ ಹಂತಗಳು
ತರಗತಿ 1: 45 ನಿಮಿಷಗಳ ಸೆಶನ್‌ನ ಹಂತ 1-4
ಹಂತ 1 - ಪರಿಚಯ
ಸಮಯ: (15 ನಿಮಿಷ)
1. ಈ ಸಣ್ಣ ಘಟನೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿ.
ಮನುಗೆ ಪರೀಕ್ಷೆಗೆ ತಯಾರಿ ನಡೆಸಲು ಸಾಧ್ಯವಾಗದ ಕಾರಣ, ಕಾಪಿ ಮಾಡಲು ಚೀಟಿಗಳನ್ನು ಬರೆದುಕೊಳ್ಳಲು ನಿರ್ಧರಿಸಿದ. ಪರೀಕ್ಷೆಯ ದಿನ, ಕಾಣೆಯಾಗಿದ್ದ ಅವನ ಹೊಸ ಎರೇಸರ್ ಅನ್ನು ಸಹಪಾಠಿ ರಾಣಿ ಅವನಿಗೆ ತಂದುಕೊಟ್ಟಳು. ಅವನು ಬಹಳ ಆಶ್ಚರ್ಯದಿಂದ ಇದನ್ನೇಕೆ ಹಿಂತಿರುಗಿಸುತ್ತಿರುವೆ ಎಂದು ಕೇಳಿದ. ಆಗ ರಾಣಿ ನಡೆದ ಕಥೆ ಹೇಳಿದಳು. ಇದು ಮೇಜಿನ ಕೆಳಗೆ ಬಿದ್ದಿತ್ತು ಮತ್ತು ನಾನಿದನ್ನು ಎತ್ತಿಟ್ಟುಕೊಂಡಿದ್ದೆ. ಈ ಘಟನೆಯ ಕುರಿತು ತಾಯಿಗೆ ಹೇಳಿದಾಗ, ನಾವು ಇತರರ ವಸ್ತುಗಳನ್ನು ಅವರಿಗೆ ತಿಳಿಸದೆ ತೆಗೆದುಕೊಳ್ಳಬಾರದು. ಏಕೆಂದರೆ ಅದು ಸತ್ಯಸಂಧ ನಡವಳಿಕೆಯಲ್ಲ ಎಂದು ಅವರು ಹೇಳಿದರು. ಹಾಗಾಗಿ ನಿನ್ನ ಸ್ನೇಹಿತೆಯಾಗಿ ಇದನ್ನು ಹಿಂತಿರುಗಿಸುವುದು ನನ್ನ ಕರ್ತವ್ಯ ಎಂದಳು. ಆಗ ಮನು ತಾನು ಏನು ಮಾಡಲು ಹೊರಟಿದ್ದೇನೆ ಎಂದು ಯೋಚಿಸತೊಡಗಿದ. ತನ್ನದು ತಪ್ಪಾದ ಮತ್ತು ಅಪ್ರಾಮಾಣಿಕ ನಡೆಯಾಗಿದೆ ಎಂಬುದನ್ನು ಅರಿತುಕೊಂಡು ಪರೀಕ್ಷೆಯಲ್ಲಿ ಕಾಪಿ ಮಾಡದಿರಲು ನಿರ್ಧರಿಸಿದ. ಒಬ್ಬ ವಿದ್ಯಾರ್ಥಿಯಾಗಿ ತಾನು ತನ್ನ ದೈನಂದಿನ ಜೀವನದಲ್ಲಿ ಸತ್ಯಸಂಧನಾಗಿರುತ್ತೇನೆ ಮತ್ತು ಪರೀಕ್ಷೆಗಳಿಗೆ ತಯಾರಾಗುವ ತನ್ನ ಜವಾಬ್ದಾರಿಯನ್ನು ಪೂರೈಸುತ್ತೇನೆ ಎಂದು ತನಗೆ ತಾನು ವಾಗ್ದಾನ ನೀಡುತ್ತಾನೆ.
2. ವಿದ್ಯಾರ್ಥಿಗಳಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ:
A. ಮನು ತಪ್ಪು ಮಾಡದಂತೆ/ಪ್ರಚೋದನೆಗೆ ಒಳಗಾಗದಂತೆ ನಿಲ್ಲಿಸಿದ್ದು ಯಾವುದು?
B. ಮನು ಯಾವ ಮೌಲ್ಯ ಅಥವಾ ನಂಬಿಕೆಯನ್ನು ಅಭ್ಯಾಸ ಮಾಡಿಕೊಂಡ?
ಶಿಕ್ಷಕರು ಈ ಪ್ರಶ್ನೆಗಳ ಮೂಲಕ ಪ್ರಾಮಾಣಿಕತೆ/ಸರಿಯಾದ ಕೆಲಸ ಮಾಡುವುದು/ಸತ್ಯಸಂಧತೆ/ಇತರರ ವಸ್ತುಗಳನ್ನು ತೆಗೆದುಕೊಳ್ಳದಿರುವುದು, ಶಿಕ್ಷಕರಿಗೆ ವಿಧೇಯರಾಗಿರುವುದು, ನೀಡಲಾದ ಸೂಚನೆಗಳನ್ನು ಪಾಲಿಸುವುದು, ಪರಸ್ಪರ ಸಹಾಯ ಮಾಡುವುದು, ತರಗತಿಯ ನಿಯಮಗಳನ್ನು ಪಾಲಿಸುವುದು, ಪರೀಕ್ಷೆಗಳಿಗೆ ಸರಿಯಾಗಿ ತಯಾರಾಗುವುದು, ಇತ್ಯಾದಿ ಉತ್ತಮ ಅಭ್ಯಾಸಗಳ ಮೌಲ್ಯಗಳನ್ನು ತಿಳಿಸಬೇಕು.
ಮೇಲೆ ನೀಡಲಾದ ಪರಿಚಯದ ಸಹಾಯದಿಂದ ಶಿಕ್ಷಕರು ಚಟುವಟಿಕೆಯನ್ನು ನೀಡುತ್ತಾರೆ.
ಹಂತ 2: ಸಮಗ್ರತೆಯ ಭಾವಚಿತ್ರ
ಬೇಕಾದ ಅಂದಾಜು ಸಮಯ: (30 ನಿಮಿಷಗಳು)
1. ಶಿಕ್ಷಕರು ತರಗತಿಯನ್ನು 4 ಗುಂಪುಗಳಾಗಿ ವಿಂಗಡಿಸುತ್ತಾರೆ. ಅನುಬಂಧ 1 ರಲ್ಲಿ ನೀಡಿರುವಂತೆ ಪ್ರತಿ ಗುಂಪಿಗೆ ಒಂದು ಸಮಸ್ಯೆ ಕಾರ್ಡ್ ಅನ್ನು ನೀಡುತ್ತಾರೆ.
ಗಮನಿಸಿ: ಗುಂಪಿನ ಗಾತ್ರವು ದೊಡ್ಡದಾಗಿದ್ದರೆ, ಹೆಚ್ಚುವರಿ ಸಮಸ್ಯೆ ಕಾರ್ಡ್‌ಗ ಳು ಲಭ್ಯವಿದ್ದು, ಶಿಕ್ಷಕರು 6 ಗುಂಪುಗಳನ್ನು ಸಹ ಮಾಡಬಹುದು.
2. ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ಚರ್ಚಿಸಲು ಹೇಳಿ ಮತ್ತು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವಂತೆ ತಿಳಿಸಿ
a. ಈ ಸಂದರ್ಭದಲ್ಲಿ ನೀವೇನು ಮಾಡುತ್ತೀರಿ? (ಆಯ್ಕೆ)
b. ಈ ಸಂದರ್ಭದಲ್ಲಿ ಪ್ರಾಮಾಣಿಕತೆಯನ್ನು ತೋರಿಸುವ ಯಾವ ಕಾರ್ಯವನ್ನು ನೀವು ಮಾಡುತ್ತೀರಿ? (ಸತ್ಯಸಂಧತೆ)
c. ನಿಮ್ಮ ಜವಾಬ್ದಾರಿಯಾಗಿ ನೀವೇನು ಮಾಡಬೇಕು? (ಜವಾಬ್ದಾರಿ)
d. ಈ ಸಮಸ್ಯೆಯನ್ನು ಪರಿಹರಿಸಲು ನೀವೇಕೆ ಏನನ್ನಾದರೂ ಮಾಡಬೇಕು? (ಏಕೆ ಕ್ರಮ ತೆಗೆದುಕೊಳ್ಳಬೇಕು?)
e. ಈ ಸಮಸ್ಯೆಯನ್ನು ನೀವು ಹೇಗೆ ಪರಿಹರಿಸುತ್ತೀರಿ? (ಪರಿಹಾರ)
3. ಸಮಸ್ಯೆಯನ್ನು ಓದಿದ ನಂತರ, ಅವರು ಪ್ರಶ್ನೆಗಳ ಕುರಿತು ಯೋಚಿಸುತ್ತಾರೆ ಮತ್ತು ಕೆಳಗೆ ತೋರಿಸಿರುವ ಭಾವಚಿತ್ರದಂತೆ ವ್ಯಕ್ತಿಯ ಗುಣಲಕ್ಷಣಗಳಾಗಿ ಪ್ರತಿಕ್ರಿಯೆಗಳನ್ನು ಪ್ರಸ್ತುತಪಡಿಸುತ್ತಾರೆ. ಶಿಕ್ಷಕರು ಈ ಉದಾಹರಣೆಗಳನ್ನು ತೋರಿಸಬಹುದು.
ಉದಾಹರಣೆ: ಸಮಗ್ರತೆಯ ಭಾವಚಿತ್ರ
4. ನೀಡಲಾದ ಸೂಚನೆಯಂತೆ ಗುಂಪುಗಳು ಚಟುವಟಿಕೆಯನ್ನು ಮಾಡುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಶಿಕ್ಷಕರು ತರಗತಿಯಲ್ಲಿ ತಿರುಗಾಡುತ್ತಾರೆ.
ಹೋಮ್‌ವರ್ಕ್: (ಐಚ್ಛಿಕ)
ವಿದ್ಯಾರ್ಥಿಗಳು ತಮ್ಮ ಭಾವಚಿತ್ರವನ್ನು ಇನ್ನಷ್ಟು ಸುಂದರಗೊಳಿಸಬಹುದು ಮತ್ತು ಮುಂದಿನ ತರಗತಿ ವರೆಗೆ ಹೋಮ್‌ವರ್ಕ್ ಆಗಿ /ವಿರಾಮದ ಸಮಯದಲ್ಲಿ ಪರಸ್ಪರ ಚರ್ಚಿಸಲು ಬಯಸಿದರೆ ಇನ್ನಷ್ಟು ಪಾಯಿಂಟ್‌ಗಳನ್ನು ಸೇರಿಸಬಹುದು. (ಐಚ್ಛಿಕ)
ಗಮನಿಸಿ: ಚಟುವಟಿಕೆಯ ದಿನದಂದು ಪೂರ್ಣಗೊಳಿಸಿದ ಹೋಮ್‌ವರ್ಕ್ ಅನ್ನು ತರುವ ಸಲುವಾಗಿ ಮುಂದಿನ ತರಗತಿ ದಿನಾಂಕವನ್ನು ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿ.
ಹೋಮ್‌ವರ್ಕ್ ನೀಡದಿದ್ದರೆ ಶಿಕ್ಷಕರು ಭಾವಚಿತ್ರವನ್ನು ಸಂಗ್ರಹಿಸಿ ಮುಂದಿನ ತರಗತಿಯಲ್ಲಿ ಬಳಸಲು ಇರಿಸಬಹುದು/ಪ್ರದರ್ಶಿಸಬಹುದು.
ತರಗತಿ 2: 45 ನಿಮಿಷಗಳ ತರಗತಿ ಹಂತ 5-8
ಹಂತ 3 – ಭಾವಚಿತ್ರದ ಪ್ರಸ್ತುತಿ (30 ನಿಮಿಷಗಳು)
1. ತಮ್ಮ ಸಮಗ್ರತೆಯ ಭಾವಚಿತ್ರವನ್ನು ಪ್ರಸ್ತುತಪಡಿಸಲು ಪ್ರತಿ ಗುಂಪನ್ನು ಆಹ್ವಾನಿಸಿ. ಪ್ರತಿ ಪ್ರಸ್ತುತಿಗೆ 5 ನಿಮಿಷಗಳ ಸಮಯಾವಕಾಶವನ್ನು ನೀಡಿ.
2. ಇತರ ವಿದ್ಯಾರ್ಥಿಗಳು ಗುಂಪಿನೊಂದಿಗೆ ಕೇಳಲು ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಆ ಗುಂಪು ಪ್ರಸ್ತುತಿಯನ್ನು ಪೂರ್ಣಗೊಳಿಸಿದ ನಂತರ ಅವಕಾಶ ನೀಡಿ. ಪ್ರಸ್ತುತಿಯ ನಡುವೆ ಪ್ರಶ್ನೆ ಕೇಳುವುದನ್ನು ತಪ್ಪಿಸಿ.
3. ಗುಂಪುಗಳ ಪ್ರಸ್ತುತಿಯ ನಂತರ ಶಿಕ್ಷಕರು ಬೋರ್ಡ್‌ನಲ್ಲಿ ಬರೆಯಬಹುದು ಅಥವಾ ಲಭ್ಯವಿರುವ ಸಮಯ ಮತ್ತು ಸಂಪನ್ಮೂಲಗಳ ಪ್ರಕಾರ ಚರ್ಚೆಯ ವಿಷಯವನ್ನು ಮೌಖಿಕವಾಗಿ ಸಾರಾಂಶ ಮಾಡಬಹುದು (ಉಲ್ಲೇಖಕ್ಕಾಗಿ ಕೆಳಗಿನ ಚಿತ್ರದಲ್ಲಿ ಕೆಲವನ್ನು ನೀಡಲಾಗಿದೆ)
ಹಂತ 4 - ಚಟುವಟಿಕೆಯ ವಿವರಣೆ (10 ನಿಮಿಷಗಳು)
ಚಟುವಟಿಕೆಯನ್ನು ವಿವರಿಸಲು ವಿದ್ಯಾರ್ಥಿಗಳಿಗೆ ಈ ಕೆಳಗಿನ ಪ್ರಶ್ನೆಯನ್ನು ಕೇಳಿ:
1. ಈ ಚಟುವಟಿಕೆಯಿಂದ ನೀವು ಏನನ್ನು ಕಲಿತಿದ್ದೀರಿ? (1-2 ಪ್ರತಿಕ್ರಿಯೆಗಳನ್ನು ತೆಗೆದುಕೊಳ್ಳಿ)
2. ಸಮಗ್ರತೆಯನ್ನು ಹೊಂದಿರುವ ವ್ಯಕ್ತಿಗಳ ಕೆಲವು ಗುಣಲಕ್ಷಣಗಳು ಯಾವುವು?
3. ಜವಾಬ್ದಾರಿಯುತ ವ್ಯಕ್ತಿಯಾಗಿರುವುದು ಏಕೆ ಮುಖ್ಯ?
4. ಜವಾಬ್ದಾರಿಯುತ ವ್ಯಕ್ತಿಯು ಸಮಾಜ/ರಾಷ್ಟ್ರಕ್ಕೆ ಹೇಗೆ ಕೊಡುಗೆ ನೀಡಬಹುದು?
ಹೋಮ್‌ವರ್ಕ್: (ಐಚ್ಛಿಕ)
ನಿಮ್ಮ ದೈನಂದಿನ ಜೀವನದಲ್ಲಿ, ಅಂದರೆ ಮನೆಯಲ್ಲಿ, ಶಾಲೆಯಲ್ಲಿ ಅಥವಾ ನಿಮ್ಮ ಸಮುದಾಯದಲ್ಲಿ ನೀವು ಪ್ರಾಮಾಣಿಕತೆ ಮತ್ತು ಜವಾಬ್ದಾರಿಯನ್ನು ಹೇಗೆ ಪ್ರದರ್ಶಿಸಬಹುದು. ವಿದ್ಯಾರ್ಥಿಗಳು ಸರಳವಾದ ಲಿಸ್ಟ್‌ಗಳು/ಪೋಸ್ಟರ್‌ಗಳು/ರೆಕಾರ್ಡ್ ವೀಡಿಯೋಗಳನ್ನು ರಚಿಸಬಹುದು ಮತ್ತು ಅವುಗಳನ್ನು ಅಪ್‌ಲೋಡ್ ಮಾಡಬಹುದು.
ರಿಫ್ಲೆಕ್ಷನ್ ಶೀಟ್‌ಗಳು ಮತ್ತು ಪ್ರತಿಕ್ರಿಯೆ ಫಾರ್ಮ್‌ಗಳು
ಪ್ರತಿಕ್ರಿಯೆ ಫಾರ್ಮ್‌ಗಳನ್ನು ದಯವಿಟ್ಟು ಶಿಕ್ಷಕರು ಭರ್ತಿ ಮಾಡಿ ಮತ್ತು ರಿಫ್ಲೆಕ್ಷನ್ ಶೀಟ್‌ಗಳನ್ನು ಭರ್ತಿ ಮಾಡಲು ವಿದ್ಯಾರ್ಥಿಗಳಿಗೆ ಹೇಳಿ.
ರಿಫ್ಲೆಕ್ಷನ್ ಶೀಟ್ (ವಿದ್ಯಾರ್ಥಿಗಳು ಭರ್ತಿ ಮಾಡಬೇಕು)
ಉಲ್ಲೇಖ ವಿಭಾಗ / ಅನುಬಂಧ
ಅನುಬಂಧ 1 – ಸಮಸ್ಯೆ ಕಾರ್ಡ್‌ಗಳು
ತರಗತಿಯ ಗಾತ್ರವು ದೊಡ್ಡದಾಗಿದ್ದರೆ, ಶಿಕ್ಷಕರು ಹೆಚ್ಚುವರಿ ಕಾರ್ಡ್‌ಗಳಲ್ಲಿ ಯಾವುದೇ ನಾಲ್ಕನ್ನು ಆಯ್ಕೆಯನ್ನು ಮಾಡಬಹುದು, ಮತ್ತು ಹೆಚ್ಚು ಗುಂಪುಗಳನ್ನು ಮಾಡಬೇಕು.