ಕನ್ನಡ ಅಕ್ಟೋಬರ್ ಚಟುವಟಿಕೆ – ಆಕ್ಟಿಝೆನ್‌ಶಿಪ್
ತರಗತಿಯ ಉದ್ದೇಶಗಳು
1. ಆಕ್ಟಿಝನ್‌ಶಿಪ್ ಅನ್ನು ವ್ಯಾಖ್ಯಾನಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
2. ಆಕ್ಟಿಝನ್ ಆಗಿ ವ್ಯಕ್ತಿಯ ಜವಾಬ್ದಾರಿಯನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
ನಿರೀಕ್ಷಿತ ಫಲಿತಾಂಶಗಳು
1. ಆಕ್ಟಿಝನ್‌ಶಿಪ್ ಮತ್ತು ಆಕ್ಟಿಝನ್ ಆಗಿ ವ್ಯಕ್ತಿಯ ಜವಾಬ್ದಾರಿಯನ್ನು ತಮ್ಮದೇ ಮಾತುಗಳಲ್ಲಿ ವಿವರಿಸಲು ವಿದ್ಯಾರ್ಥಿಗಳು ಸಾಧ್ಯವಾಗುತ್ತದೆ.
ಕೌಶಲ್ಯಗಳು ಮತ್ತು ಮೌಲ್ಯಗಳು
ಕೌಶಲ್ಯಗಳು - ವಿಶ್ಲೇಷಣಾತ್ಮಕ ಚಿಂತನೆ, ಸಹಯೋಗ, ಮತ್ತು ಸಂವಹನ.
ಮೌಲ್ಯಗಳು - ಜವಾಬ್ದಾರಿ, ಬದ್ಧತೆ
ಸೆಶನ್ಗಳ ಅವಲೋಕನ
ಕ್ರ. ಸಂ | ತರಗತಿಯ ವಿವರಗಳು | ಬೇಕಾದ ಅಂದಾಜು ಸಮಯ |
1 | ಹಂತ 1: ಪರಿಚಯ
ಹಂತ 2: ಚರ್ಚೆ ಹಂತ 3: ವಿವರಣೆ |
45 ನಿಮಿಷಗಳು |
ಬೇಕಾದ ಸಾಮಗ್ರಿಗಳು
ಪೆನ್ ನುಗಳು, ಹಾಳೆಗಳು,ನೋಟ್‌ಬುಕ್ ಗಳು
ಚಟುವಟಿಕೆಯ ಹಂತಗಳು
ಸೆಷನ್ 1: 45 ನಿಮಿಷಗಳ ಸೆಶನ್‌ನ ಹಂತ 1-3
ಹಂತ 1 - ಪರಿಚಯ
ಬೇಕಾದ ಅಂದಾಜು ಸಮಯ:(10-12 ನಿಮಿಷ)
1. ಪರಿಚಯ ಸೆಕ್ಷನ್‌ನಲ್ಲಿ ತರಗತಿಗೆ ಥೀಮ್ ಬಗ್ಗೆ ಪರಿಚಯಿಸಿ.
2. ಕೊಟ್ಟಿರುವ ಸಮಸ್ಯೆ ವಿಷಯವನ್ನು ವಿದ್ಯಾರ್ಥಿಗಳಿಗೆ ಓದಿ ಹೇಳಿ.
ನಗರವೊಂದರ ಸಾರ್ವಜನಿಕ ಉದ್ಯಾನವನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಸದ ರಾಶಿಯನ್ನು ಹಾಕಲಾಗಿದ್ದು, ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡಿದೆ ಮತ್ತು ಪರಿಹಾರದ ಅಗತ್ಯವಿದೆ. ಉದ್ಯಾನವನದಲ್ಲಿ ಸರಿಯಾದ ಕಸ ವಿಲೇವಾರಿ ಸ್ಥಳ ಇರುವುದಿಲ್ಲ. ಉದ್ಯಾನದ ಸುತ್ತಲಿರುವ ಎಲ್ಲರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಆದರೂ ಅವರು ಅದೇ ಉದ್ಯಾನವನದಲ್ಲಿ ಕಸವನ್ನು ಎಸೆಯುತ್ತಾರೆ.
3. ವಿದ್ಯಾರ್ಥಿಗಳಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ.
- ಕೊಟ್ಟಿರುವ ಪರಿಸ್ಥಿತಿಯಲ್ಲಿ ತಪ್ಪು ಯಾರದ್ದು ಎಂಬುದು ನಿಮ್ಮ ಅನಿಸಿಕೆಯಾಗಿದೆ? ಯಾಕೆ?
- ನಿಮ್ಮ ಪ್ರಕಾರ ಹೆಚ್ಚಿನ ಜನರು ಏನು ಮಾಡುತ್ತಾರೆ?
ಹಂತ 2 - ಚರ್ಚೆ
ಬೇಕಾದ ಅಂದಾಜು ಸಮಯ: 30 ನಿಮಿಷಗಳು.
1. ವಿದ್ಯಾರ್ಥಿಗಳಿಗೆ ಈ ವಿಷಯದ ಬಗ್ಗೆ ನಾವು ಚರ್ಚೆ ಮಾಡೋಣ ಎಂದು ಹೇಳಿ– “ನಾಗರಿಕರು ತಮ್ಮಷ್ಟಕ್ಕೆ ತಾವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು”. ಗುಂಪು ಎ “ಪರವಾಗಿ” ಇರುತ್ತದೆ, ಗುಂಪು ಬಿ “ವಿರೋಧವಾಗಿ” ಇರುತ್ತದೆ.
ಗಮನಿಸಿ:ತರಗತಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದರೆ, ಶಿಕ್ಷಕರು “ಪರವಾಗಿ” ಮಾತನಾಡುವ ಎರಡು ಗುಂಪುಗಳು ಮತ್ತು “ವಿರೋಧವಾಗಿ” ಮಾತನಾಡುವ ಎರಡು ಗುಂಪುಗಳನ್ನು ರಚಿಸಬಹುದು.
2. ಅನುಬಂಧ 1 ರಲ್ಲಿ ಕೊಟ್ಟಿರುವಂತೆ ತರಗತಿಯ ಪ್ರತಿ ಗುಂಪು/ಬದಿಗೆ ಸೂಚನೆಗಳನ್ನು ಹಸ್ತಾಂತರಿಸಿ. ಚರ್ಚಿಸುವ ವಿಷಯಕ್ಕೆ ತಯಾರಾಗಲು ಅವರಿಗೆ 10 ನಿಮಿಷಗಳನ್ನು ನೀಡಲಾಗುತ್ತದೆ ಎಂದು ತಿಳಿಸಿ.
ಗಮನಿಸಿ: ಸೆಶನ್‌ಗೆ ಮೊದಲು ಶಿಕ್ಷಕರು ಸೂಚನೆ ಕಾರ್ಡ್‌ಗಳ ಲಿಖಿತ/ಮುದ್ರಿತ ಪ್ರತಿಯನ್ನು ಸಿದ್ಧಪಡಿಸಬೇಕು.
3. ಕೆಳಗೆ ಕೊಟ್ಟಿರುವ ಚರ್ಚೆಯ ನಿಯಮಗಳನ್ನು ಅನುಸರಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿ:
a. ಒಂದು ತಂಡವು ವಿಷಯವನ್ನು ಹೇಳಿದಾಗ ಇನ್ನೊಂದು ತಂಡವು ಅದನ್ನು ಆಲಿಸಬೇಕು.
b. ಒಂದು ತಂಡವು ವಿಷಯವನ್ನು ಹೇಳಿದಾಗ, ಅದೇ ವಿಷಯದ ಬಗ್ಗೆ ಪ್ರತಿಕ್ರಿಯೆ ಮಾಡಬೇಕು. ಆ ಸಂದರ್ಭದಲ್ಲಿ ಮತ್ತೊಂದು ತಂಡವು ಸಂಬಂಧವಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು.
4. ವಿಷಯದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಲು ತಂಡಕ್ಕೆ ಹೇಳಿ. ಶಿಕ್ಷಕರು ಯಾದೃಚ್ಛಿಕವಾಗಿ ತಂಡವನ್ನು ಆಯ್ಕೆ ಮಾಡಿ ಚರ್ಚೆಯನ್ನು ಮೊದಲು ಪ್ರಾರಂಭಿಸಲು ಹೇಳಬೇಕು.
ಗಮನಿಸಿ: ಚರ್ಚೆಯ ಸಂದರ್ಭದಲ್ಲಿ ಮಾತುಕತೆ ಮತ್ತು ಅದರ ಧ್ಯೇಯವು ಸ್ಥಳೀಯ ಅಧಿಕಾರಿಗಳ ಸಹಯೋಗಗಳ ಸುತ್ತ ಕೇಂದ್ರೀಕೃತವಾಗಿದೆ ಎಂಬುದನ್ನು ಶಿಕ್ಷಕರು ಖಚಿತಪಡಿಸಿಕೊಳ್ಳಬೇಕು.
ಹಂತ 3 - ವಿವರಣೆ
ಬೇಕಾದ ಅಂದಾಜು ಸಮಯ: (5-7 ನಿಮಿಷ)
ಈ ಕೆಳಗಿನ ಪ್ರಶ್ನೆಗಳನ್ನು ವಿದ್ಯಾರ್ಥಿಗಳಲ್ಲಿ ಕೇಳಿ ಚರ್ಚೆಯನ್ನು ಮುಗಿಸಿ.
- ಕೊಟ್ಟಿರುವ ಚಟುವಟಿಕೆಯಿಂದ ನೀವೇನು ಕಲಿತಿರಿ?
- ನಿಮ್ಮ ಪ್ರಕಾರ ಆಕ್ಟಿಝನ್ ಯಾರು?
- ನಮ್ಮ ದೈನಂದಿನ ಜೀವನದಲ್ಲಿ ಜಾಗೃತ, ಮಾಹಿತಿಯುಕ್ತ ಮತ್ತು ಸಕ್ರಿಯ ನಾಗರಿಕರಾಗಲು ನಾವು ಹೇಗೆ ಅಭ್ಯಾಸ ಮಾಡಬಹುದು?
ರಿಫ್ಲೆಕ್ಷನ್ ಶೀಟ್‌ಗಳು ಮತ್ತು ಪ್ರತಿಕ್ರಿಯೆ ಫಾರ್ಮ್‌ಗಳು
ಪ್ರತಿಕ್ರಿಯೆ ಫಾರ್ಮ್‌ಗಳನ್ನು ದಯವಿಟ್ಟು ಶಿಕ್ಷಕರು ಭರ್ತಿ ಮಾಡಿ ಮತ್ತು ರಿಫ್ಲೆಕ್ಷನ್ ಶೀಟ್‌ಗಳನ್ನು ಭರ್ತಿ ಮಾಡಲು ವಿದ್ಯಾರ್ಥಿಗಳಿಗೆ ಹೇಳಿ.
ರಿಫ್ಲೆಕ್ಷನ್ ಶೀಟ್ (ವಿದ್ಯಾರ್ಥಿಗಳು ಭರ್ತಿ ಮಾಡಬೇಕು)
ಉಲ್ಲೇಖ ವಿಭಾಗ
ಅನುಬಂಧ 1 – ಸೂಚನೆ ಕಾರ್ಡ್‌ಗಳು
ಸೂಚನೆಗಳು: -
ಇವರಿಗೆ: (ಗುಂಪು ಎ)
1. ಉದ್ಯಾನದಲ್ಲಿನ ಕಸದ ರಾಶಿಯ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು. ಯಾಕೆಂದರೆ ಇದು ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಹಾನಿಕರ ಪರಿಣಾಮ ಉಂಟುಮಾಡುತ್ತದೆ. ಅಲ್ಲದೇ ಕೆಟ್ಟ ವಾಸನೆಗೂ ಕಾರಣವಾಗಿದೆ. ನಾಗರಿಕರು ಇದರಿಂದ ತೊಂದರೆಗೊಳಗಾದ ಕಾರಣ ಅವರು ಕ್ರಮವಹಿಸಬೇಕು.
2. ಅನೇಕ ಕೀಟಗಳು, ನೊಣಗಳು, ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಮತ್ತು ಬೀದಿ ಪ್ರಾಣಿಗಳು ಕಸದ ರಾಶಿಯತ್ತ ಬರುತ್ತವೆ. ಉದ್ಯಾನ ಬಳಸುವ ಅಥವಾ ಹತ್ತಿರದಲ್ಲಿರುವ ಜನರು ಅಸ್ವಸ್ಥಗೊಳ್ಳುತ್ತಾರೆ.
3. ಆ ಸ್ಥಳದಲ್ಲಿ ಕಸವಿಲೇವಾರಿ ಅಥವಾ ತ್ಯಾಜ್ಯ ನಿರ್ವಹಣೆಗೆ ಯಾವುದೇ ವ್ಯವಸ್ಥೆ ಇಲ್ಲ ಆದ್ದರಿಂದ ಪ್ರಭಾವಕ್ಕೊಳಗಾದ ಜನರು ಕಸ ವಿಲೇವಾರಿಯನ್ನು ನಿರ್ವಹಿಸಲು ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಹೆಚ್ಚು ಕಸದ ಬುಟ್ಟಿಗಳಿಗೆ ವ್ಯವಸ್ಥೆ ಮಾಡಬೇಕು ಅಥವಾ ಕಸವನ್ನು ಒಟ್ಟುಗೂಡಿಸಬೇಕು.
4. ನಾಗರಿಕರು ಕಸ ಸಂಗ್ರಹಿಸುವವರನ್ನು ಭೇಟಿ ಮಾಡಿ ನಿಯಮಿತವಾಗಿ ಕಸ ಸಂಗ್ರಹಿಸಲು ಬರುವಂತೆ ತಿಳಿಸಬೇಕು. ಇದೊಂದು ಗಂಭೀರ ಸಮಸ್ಯೆಯಾದ್ದರಿಂದ ಕಸ ಸಂಗ್ರಹಿಸುವವರಿಗೆ ಎರಡು ಬಾರಿ ಬರುವುದಕ್ಕೆ ಹಣ ಪಾವತಿಸಬೇಕು.
5. ನಾಗರಿಕರು ಜವಾಬ್ದಾರಿಯುತರಾಗಿ ಕಸವನ್ನು ಎಸೆಯಬೇಕು. ಅವರು ಸರಿಯಾದ ಸ್ಥಳದಲ್ಲಿ ಕಸ ಎಸೆಯಬೇಕು ಮತ್ತು ಕಸದ ಬುಟ್ಟಿ ತುಂಬಿದ್ದರೆ ಅದರಲ್ಲಿ ಮತ್ತಷ್ಟು ಕಸವನ್ನು ತುಂಬಬಾರದು. ಇದರ ಅಡ್ಡ ಪರಿಣಾಮಗಳ ಬಗ್ಗೆ ಅವರು ಜಾಗೃತರಾಗಿರಬೇಕು.
6. ನಾಗರಿಕರು ಕಸ ಉತ್ಪಾದನೆಯನ್ನು ಕಡಿಮೆ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ಉದಾಹರಣೆಗೆ, ಮನೆಯಲ್ಲಿ ಸಾಮಾನುಗಳನ್ನು ತುಂಬಿಸಿಡಲು ಬಾಟಲಿಗಳನ್ನು ಬಳಸುವುದು.
7. . ಸಮಸ್ಯೆಯನ್ನು ಪರಿಹರಿಸುವುದು ಅತ್ಯವಶ್ಯ ಮತ್ತು ಜನರು ತಮ್ಮ ಕಾರ್ಯಗಳಿಗೆ ಮತ್ತು ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಜವಾಬ್ದಾರರಾಗಿರುತ್ತಾರೆ.
8. ಉದ್ಯಾನವು ಸಾರ್ವಜನಿಕ ಸ್ಥಳ ಮತ್ತು ಜನರು ಅದನ್ನು ಬಳಸುತ್ತಾರೆ, ಹಾಗಾದರೆ, ಅಧಿಕಾರಿಗಳು ಅದನ್ನೇಕೆ ಸ್ವಚ್ಛಗೊಳಿಸಬೇಕು. ಜನರು ಅದನ್ನು ಸ್ವಚ್ಛವಾಗಿ ಹಾಗೂ ಕಸ ಮುಕ್ತವಾಗಿ ಇರಿಸಬೇಕು ಮತ್ತು ಅವರು ಅದನ್ನು ಆನಂದಿಸಬಹುದು ಮತ್ತು ಅದರ ಕುರಿತು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು.
ವಿರೋಧ: (ಗುಂಪು ಬಿ)
1. ಕಸವನ್ನು ನಿರ್ವಹಿಸುವುದು ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವಾಗಿದ್ದು, ಕಸ ನಿರ್ವಹಣೆಗೆ ನಾಗರಿಕರು ಕೈಜೋಡಿಸುವುದು ಅವರ ಕರ್ತವ್ಯ. ಸಮಸ್ಯೆಯನ್ನು ಪರಿಶೀಲನೆಯಲ್ಲಿಡಲು ಇಬ್ಬರೂ ಜೊತೆಯಾಗಿ ನಿರಂತರವಾಗಿ ಕಾರ್ಯ ನಿರ್ವಹಿಸಬೇಕು.
2. ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ, ಉದ್ಯಾನವನ್ನು ಬಳಸುವ ಮತ್ತು ಸುತ್ತ ಮುತ್ತಲು ವಾಸಿಸುವ ಜನರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಇಬ್ಬರ ಸಹಯೋಗದಿಂದ ಸಮಸ್ಯೆ ಬಗೆಹರಿದು ಸೊಳ್ಳೆಗಳು ಮತ್ತು ಇತರ ಕೀಟಗಳ ಉತ್ಪತ್ತಿಯಿಂದ ಉಂಟಾಗುವ ಕೆಟ್ಟ ಪರಿಣಾಮವನ್ನು ತಡೆಗಟ್ಟಬಹುದು.
3. ಕೇವಲ ನಾಗರಿಕರ ಕಾರ್ಯವು ತಾತ್ಕಾಲಿಕ ಪರಿಹಾರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಿದರೆ ಸಮಸ್ಯೆಯನ್ನು ಉತ್ತಮವಾಗಿ ಪರಿಹರಿಸಬಹುದು. ಅಧಿಕಾರಿಗಳು ಕಸವನ್ನು ಬೇರ್ಪಡಿಸಲು ವಿವಿಧ ವಿಧಗಳ ಕಸದ ಬುಟ್ಟಿಗಳನ್ನು ವ್ಯವಸ್ಥೆಗಳಿಸುವುದು, ಹೆಚ್ಚುವರಿ ಕಸದಬುಟ್ಟಿಗಳನ್ನು ವ್ಯವಸ್ಥೆಗೊಳಿಸುವುದು ಇತ್ಯಾದಿಗಳನ್ನು ಮಾಡಬಹುದು.
4. ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಹಯೋಗದೊಂದಿಗೆ ಕಸ ಸಂಗ್ರಹಿಸುವವರು ನಿಯಮಿತವಾಗಿ ಬರುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬಹುದು. ಕಸದ ಸಂಗ್ರಹಣೆಯನ್ನು ದಿನಕ್ಕೆ ಎರಡು ಬಾರಿ ಮಾಡಬೇಕಾದ ಅಗತ್ಯವನ್ನು ಅಧಿಕಾರಿಗಳ ಗಮನಕ್ಕೆ ತಂದು ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಬಹುದು.
5. ಅಧಿಕಾರಿಗಳು ಮತ್ತು ನಾಗರಿಕರು ಜೊತೆಗೂಡಿ ಜಾಗೃತಿ ಸಂದೇಶಗಳನ್ನು ಹರಡಬೇಕು. ಉದ್ಯಾನ ಆವರಣವನ್ನು ಕಸಮುಕ್ತವಾಗಿಡಲು ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಕಟ್ಟಬೇಕಾದ ದಂಡಗಳ ಬಗ್ಗೆ ಅವರು ನಿರ್ಧರಿಸಬಹುದು.
6. ತಾಜ್ಯಗಳನ್ನು ಕಡಿಮೆ ಮಾಡುವುದು, ಮರುಬಳಕೆ, ಸ್ವಚ್ಛತೆ ಅಭಿಯಾನ ಇತ್ಯಾದಿ ಜಾಗೃತ್ ಅಭಿಯಾನಗಳನ್ನು ನಡೆಸಲು ಅಧಿಕಾರಿಗಳೊಂದಿಗೆ ನಾಗರಿಕರು ಪಾಲ್ಗೊಳ್ಳಬಹುದು.
7. ಸಂಬಂಧಪಟ್ಟ ಅಧಿಕಾರಿಗಳು ಜನರ ಒಳಿತಿಗಾಗಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಮತ್ತು ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆದರೆ ಇದರೊಂದಿಗೆ ನಾಗರಿಕರು ಕೂಡಾ ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು. ಆದ್ದರಿಂದ ಸಮಸ್ಯೆ ಬಗೆಹರಿಯಲು ಇಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ಪೂರೈಸಬೇಕು,
8. ಸಮಸ್ಯೆಗಳು ಮತ್ತೆ ಮತ್ತೆ ಉದ್ಭವಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಲು ಅಧಿಕಾರಿಗಳು ಮತ್ತು ನಾಗರಿಕರು ಮುಂದಾಗಿ ಬಂದು ತೊಡಗಿಸಿಕೊಳ್ಳಬೇಕು. ಅಧಿಕಾರಿಗಳು ವ್ಯವಸ್ಥೆಗಳನ್ನು ಮತ್ತು ಕಾರ್ಯವಿಧಾನಗಳನ್ನು ಹೊಂದಿಸಬೇಕು ಮತ್ತು ನಾಗರಿಕರು ಅವುಗಳು ಅನುಸರಿಸಲ್ಪಡುತ್ತಿವೆ ಎಂಬುದನ್ನು ಖಾತ್ರಿಪಡಿಸಲು ನೆರವಾಗಬೇಕು.