KLE ಕನ್ನಡ ಮಾಧ್ಯಮ ಶಾಲೆಗಳ ನವೆಂಬರ್ ಚಟುವಟಿಕೆ – ನಾವು ಒಂದು ಸಮುದಾಯ.
ನಿರೀಕ್ಷಿತ ಉದ್ದೇಶಗಳು
- ವಿದ್ಯಾರ್ಥಿಗಳು ನಮ್ಮ ಸಮಾಜದಲ್ಲಿರುವ ಪರಸ್ಪರ ಅವಲಂಬನೆಯನ್ನು ಗುರುತಿಸಲು ಸುಲಭವಾಗುತ್ತದೆ.
ನಿರೀಕ್ಷಿತ ಫಲಿತಾಂಶಗಳು
- ನಾವು ಇತರರ ಮೇಲೆ ಪರಸ್ಪರ ಹೇಗೆ ಅವಲಂಬಿತರಾಗಿದ್ದೇವೆ ಹಾಗೂ ತಮ್ಮ ಸ್ವಂತ ಬದುಕಿನಲ್ಲಿ ಅದರ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳು ವಿವರಿಸುತ್ತಾರೆ.
ಕೌಶಲ್ಯಗಳು ಮತ್ತು ಮೌಲ್ಯಗಳು
- ಕೌಶಲ್ಯಗಳು – ಸಕ್ರಿಯ ಆಲಿಸುವಿಕೆ ಮತ್ತು ತಾರ್ಕಿಕ ಚಿಂತನೆ
- ಮೌಲ್ಯಗಳು: ವೈವಿಧ್ಯತೆ
ಸೆಶನ್ಗಳ ಅವಲೋಕನ
ಕ್ರ. ಸಂ | ತರಗತಿಯ ವಿವರಗಳು | ಬೇಕಾದ ಅಂದಾಜು ಸಮಯ |
1 | ಹಂತ 1: ಪರಿಚಯ
ಹಂತ 2: ಚಟುವಟಿಕೆ ಹಂತ 3: ವಿವರಣೆ |
45 ನಿಮಿಷಗಳು |
ಬೇಕಾದ ಸಾಮಗ್ರಿಗಳು
3-4 ನೂಲಿನ ಉಂಡೆಗಳು (ಇದನ್ನು ನೀವು ಪುನರ್ಬಳಕೆ ಮಾಡಬಹುದು), ಹೆಸರಿನ ಟ್ಯಾಗ್‌ಗಳು
ಚಟುವಟಿಕೆಯ ಹಂತಗಳು
ಸೆಷನ್ 1: 45 ನಿಮಿಷಗಳ ಸೆಶನ್‌ನ ಹಂತ 1-2
ಹಂತ 1 - ಪರಿಚಯ
ಸಮಯ: 8-10 ನಿಮಿಷಗಳು
1. ಚಟುವಟಿಕೆಯ ಆರಂಭದಲ್ಲಿಯೇ ಫಲಿತಾಂಶ/ಉದ್ದೇಶವನ್ನು ಬಹಿರಂಗಪಡಿಸದಂತೆ ಶಿಕ್ಷಕರಿಗೆ ಸೂಚಿಸಲಾಗಿದೆ.
2. ನಮ್ಮ ಸಮಾಜದ ಭಾಗವಾಗಿ ತಾವು ಕಾಣುವ ರೈತರು, ಮಕ್ಕಳು, ಶಿಕ್ಷಕರು, ಪಾಲಕರು, ಚಾಲಕರು, ಮನೆ ಸ್ವಚ್ಛಗೊಳಿಸುವವರು, ಅಜ್ಜ-ಅಜ್ಜಿಯರು, ನಿರ್ಮಾಣ ಕೆಲಸಗಾರರು, ಇತ್ಯಾದಿ ಜನರ ಪಟ್ಟಿಯನ್ನು ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳುವ ಮೂಲಕ ಚಟುವಟಿಕೆಯನ್ನು ಪ್ರಾರಂಭಿಸಿ.
3. ಪ್ರತಿ ವಿದ್ಯಾರ್ಥಿಗೆ ಒಂದು ಪಾತ್ರವನ್ನು ನೀಡಿ ಮತ್ತು ಅದನ್ನು ಹೆಸರಿನ ಟ್ಯಾಗ್ ಆಗಿ ಬರೆಯುವಂತೆ ಹೇಳಿ. ವಿದ್ಯಾರ್ಥಿಗಳು ಅದನ್ನು ಧರಿಸಬೇಕು.
4. ಶಿಕ್ಷಕರು ಈ ಚಟುವಟಿಕೆಯನ್ನು ನಿರ್ವಹಿಸಲು 8-10 ವಿದ್ಯಾರ್ಥಿಗಳ ಗುಂಪನ್ನಾಗಿ ವಿಂಗಡಿಸಬಹುದು. ಈ ಸಂದರ್ಭದಲ್ಲಿ ಮೇಲೆ ತಿಳಿಸಿದ ಪಾತ್ರಗಳನ್ನು ಪುನರಾವರ್ತಿಸಬಹುದು.
ಹಂತ 2 - ಚಟುವಟಿಕೆ
ಬೇಕಾದ ಅಂದಾಜು ಸಮಯ: 30 ನಿಮಿಷಗಳು.
1. ಕೊಠಡಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಅಥವಾ ಎಲ್ಲಾ ಪೀಠೋಪಕರಣಗಳನ್ನು ಕೊಠಡಿಯ ಮೂಲೆಯಲ್ಲಿರಿಸಿ ಅಥವಾ ಹೊರಗಡೆ ಹೋಗಿ ಈ ಚಟುವಟಿಕೆಯನ್ನು ನಿರ್ವಹಿಸಿ.
2. ವಿದ್ಯಾರ್ಥಿಗಳನ್ನು ವೃತ್ತಾಕಾರವಾಗಿ ನಿಲ್ಲಿಸಿ. ನಿಮ್ಮ ಬಳಿಯಿರುವ ನೂಲಿನ ಉಂಡೆಗಳ ಒಂದು ತುದಿಯನ್ನು ಅವರ ಸೊಂಟಕ್ಕೆ ಕಟ್ಟಿಕೊಳ್ಳಲು ಹೇಳಿ. ಇದರ ಬದಲು ವಿದ್ಯಾರ್ಥಿಗಳು ತಮ್ಮ ತೋರುಬೆರಳುಗಳಿಗೆ ನೂಲು ಕಟ್ಟಿಕೊಂಡು ಕೂಡಾ ವೃತ್ತಾಕಾರವಾಗಿ ಕುಳಿತುಕೊಳ್ಳಬಹುದು.
3. ಈಗ ವಿದ್ಯಾರ್ಥಿಗಳು ತಮ್ಮ ಮತ್ತು ಇತರ ಆಟಗಾರರ ನಡುವಿನ ಸಂಪರ್ಕಗಳನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು. ಉದಾಹರಣೆಗೆ, ರೈತನು ತನ್ನ ಹೊಸ ಮನೆ ಅಥವಾ ಹೊಲವನ್ನು ನಿರ್ಮಿಸಲು ನಿರ್ಮಾಣ ಕೆಲಸಗಾರನ ಮೇಲೆ ಅವಲಂಬಿತನಾಗಿರಬಹುದು ಮತ್ತು ನಿರ್ಮಾಣ ಕೆಲಸಗಾರನು ತಾನು ಸೇವಿಸುವ ಆಹಾರವನ್ನು ಉತ್ಪಾದಿಸಲು ರೈತನನ್ನು ಅವಲಂಬಿಸಿರಬಹುದು. ಪ್ರತಿಯೊಬ್ಬರೂ ಇತರರ ಮೇಲೆ ಪರಸ್ಪರ ಹೇಗೆ ಅವಲಂಬಿತರಾಗಿದ್ದಾರೆ ಎಂಬುದನ್ನು ಕಂಡುಹಿಡಿಯಬೇಕು.
4. ಒಮ್ಮೆ ವಿದ್ಯಾರ್ಥಿಗಳು ಈ ಅವಲಂಬನೆಯನ್ನು ಒಪ್ಪಿಕೊಂಡ ನಂತರ, ಪರಸ್ಪರ ಸಂಪರ್ಕವನ್ನು ತೋರಿಸುತ್ತಾ ಅವರು ತಾವು ಕಟ್ಟಿಕೊಂಡ ನೂಲಿನ ಉಂಡೆಗಳನ್ನು ಪರಸ್ಪರ ದಾಟಿಸಬೇಕು.
5. ಈ ನೂಲಿನ ಉಂಡೆಯನ್ನು ಎಸೆಯುವಾಗ ತಾವು ಕಂಡುಕೊಂಡ ಸಂಪರ್ಕವನ್ನು ಜೋರಾಗಿ ಹೇಳಬೇಕು. ಉದಾಹರಣೆಗೆ: ನಾನೊಬ್ಬ ವಿದ್ಯಾರ್ಥಿ ಹಾಗೂ ನಾನು ವಿದ್ಯೆಯನ್ನು ಕಲಿಯಲು ನನ್ನ ಶಿಕ್ಷಕರ ಮೇಲೆ ಅವಲಂಬಿತನಾಗಿದ್ದೇನೆ (ನೂಲಿನ ಉಂಡೆಯನ್ನು ಶಿಕ್ಷಕ ಪಾತ್ರಧಾರಿಗೆ ಎಸೆಯುತ್ತಾ)
6. ಸಾಮಾಜಿಕ ವಲಯದಲ್ಲಿ ಹೆಚ್ಚಿನ ಪರಸ್ಪರ ಸಂಪರ್ಕವನ್ನು ನಾವು ಹೊಂದಿದ್ದೇವೆ ಎಂಬುದನ್ನು ಅರಿತುಕೊಳ್ಳಲು 2 ಆಟಗಾರರ ನಡುವೆ ಈ ನೂಲಿನ ಉಂಡೆಯನ್ನು 2 ಕ್ಕಿಂತ ಹೆಚ್ಚಿನ ಬಾರಿ ವಿನಿಮಯ ಮಾಡಿಕೊಳ್ಳುವುದನ್ನು ತಪ್ಪಿಸಿ.
7. ಎಲ್ಲರಿಗೂ ಒಂದೊಂದು ಅವಕಾಶ ಸಿಗುವವರೆಗೆ ಅಥವಾ ಸಮಯದ ಲಭ್ಯತೆಯ ಪ್ರಕಾರ ಆಟವನ್ನು ಆಡಿ.
ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು
1. ಎಷ್ಟು ಸಾಧ್ಯವೋ ಅಷ್ಟು ಸಂಪರ್ಕಗಳನ್ನು ರಚಿಸಲು ಪ್ರಯತ್ನಿಸಿ. ಕ್ರಿಯಾಶೀಲ ಸಂಪರ್ಕಗಳನ್ನು ಪಡೆಯಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ.
2. ತಾಯಿ, ತಂದೆ, ಸಹೋದರ, ಸಹೋದರಿ, ಶಿಕ್ಷಕ, ಕ್ಷೌರಿಕ, ಹಾಲು ವಿತರಕ, ರೈತ, ಮಾರಾಟಗಾರ, ಮನೆ ಸ್ವಚ್ಛಗೊಳಿಸುವವರು, ಚಾಲಕ, ಉದ್ಯಮಿ, ಪೋಲಿಸ್, ರಾಜಕಾರಣಿ, ವಕೀಲ ಹಾಗೂ ಇತ್ಯಾದಿ ತಮ್ಮ ದೈನಂದಿನ ಬದುಕಿನಲ್ಲಿ ನೋಡಬಹುದಾದ ಅನೇಕ ಪಾತ್ರಗಳನ್ನು ಪಟ್ಟಿಮಾಡಲು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ನೀವು ಮಾರಾಟಗಾರರ ಪಾತ್ರದಲ್ಲಿಯೇ ತರಕಾರಿ ಮಾರಾಟಗಾರ, ಹೂವಿನ ಮಾರಾಟಗಾರ ಎಂಬುದಾಗಿ ವಿಂಗಡಿಸಬಹುದು.
3. ವಿದ್ಯಾರ್ಥಿಗಳಿಗೆ ಚರ್ಚಿಸಲು ಸುಲಭವಾಗುವಂತೆ ಅವರನ್ನು ಒಂದೇ ಗುಂಪಾಗಿ ಕೂರಿಸಿ.
ಹಂತ 3 – ವಿವರಣೆ
ಸಮಯ: 5-8 ನಿಮಿಷಗಳು
ಚಟುವಟಿಕೆಗಳನ್ನು ವಿವರಿಸಲು ವಿದ್ಯಾರ್ಥಿಗಳಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ:
1. ವಯಸ್ಸು, ಜಾತಿ, ಧರ್ಮ, ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯಲ್ಲಿ ಎಲ್ಲಾ ಪಾತ್ರಧಾರಿಗಳು ಒಂದೇ ಆಗಿದ್ದಾರೆಯೇ? (ಉತ್ತರ - ಇಲ್ಲ)
2. ನಾವು ನಡುವೆ ಒಂದು ಅಥವಾ ಎರಡು ಪಾತ್ರಧಾರಿಗಳನ್ನು ತೆಗೆದುಹಾಕಿದರೆ ಏನಾಗುವುದೆಂದು ಯೋಚಿಸಿ, (ನೂಲು ತುಂಡಾಗುತ್ತದೆ, ಅವ್ಯವಸ್ಥೆ ಉಂಟಾಗಿ ಕೆಲವು ಅಗತ್ಯತೆಗಳು ಅತೃಪ್ತಿಯಾಗಿ ಉಳಿಯುತ್ತವೆ)
3. ನಾವು ಈ ಚಟುವಟಿಕೆಯಿಂದ ಏನನ್ನು ಕಲಿತೆವು?
ರಿಫ್ಲೆಕ್ಷನ್ ಶೀಟ್‌ಗಳು ಮತ್ತು ಪ್ರತಿಕ್ರಿಯೆ ಫಾರ್ಮ್‌ಗಳು
ಪ್ರತಿಕ್ರಿಯೆ ಫಾರ್ಮ್‌ಗಳನ್ನು ದಯವಿಟ್ಟು ಶಿಕ್ಷಕರು ಭರ್ತಿ ಮಾಡಿ ಮತ್ತು ರಿಫ್ಲೆಕ್ಷನ್ ಶೀಟ್‌ಗಳನ್ನು ಭರ್ತಿ ಮಾಡಲು ವಿದ್ಯಾರ್ಥಿಗಳಿಗೆ ಹೇಳಿ.