KLE ಕನ್ನಡ ಗ್ರೇಡ್ 7 ಸೆಪ್ಟೆಂಬರ್ ಚಟುವಟಿಕೆ-ಪ್ರಜಾಪಭುತ್ವದ ಅನ್ವೇಷಣೆ
ಉದ್ದೇಶಗಳು
ಶಾಲೆಯಲ್ಲಿ ದೈನಂದಿನ ಜೀವನ ಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವದ ಅರ್ಥವನ್ನು ತಿಳಿದುಕೊಳ್ಳುವುದು.
ಕೌಶಲಗಳು
ಸಹಭಾಗಿತ್ವ, ಸಂವಹನ
ಮೌಲ್ಯಗಳು
ಸಮಾನತೆ
ಬೇಕಾದ ಸಾಮಗ್ರಿಗಳು
ನೋಟ್‌ಬುಕ್ ಮತ್ತು ಪೆನ್‌ಗಳು
ಚಟುವಟಿಕೆ-ಪೂರ್ವ ಸಿದ್ಧತೆ
- ಶಿಕ್ಷಕರು ಅನುಬಂಧ 1- ಕಿರು ನಾಟಕ ಸ್ಕ್ರಿಪ್ಟ್‌ನಿಂದ ನೀಡಿದ ಸ್ಕ್ರಿಪ್ಟ್ ಅನ್ನು ಬರೆಯುವಂತೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಹೇಳಿ.
- ಪಾತ್ರಗಳನ್ನು ಸ್ಕ್ರಿಪ್ಟ್ ಪ್ರಕಾರ ನಿರ್ವಹಿಸಲು ಶಿಕ್ಷಕರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಹುದು.
- ಮುಖ್ಯ ಚಟುವಟಿಕೆ ದಿನದ ಮೊದಲೇ ಸಿದ್ಧರಾಗುವುದಕ್ಕಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ವಿದ್ಯಾರ್ಥಿಗಳಿಗೆ ಸಂಭಾಷಣೆಯನ್ನು ಹಂಚಲು ಹೇಳಿ
ಮುಖ್ಯ ಚಟುವಟಿಕೆ – ಕಿರು ನಾಟಕ
ಬೇಕಾದ ಅಂದಾಜು ಸಮಯ: 30 ನಿಮಿಷಗಳು.
ಕಿರು ನಾಟಕ – 20 ನಿಮಿಷಗಳು
1. ಆಯ್ಕೆಯಾದ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶಿಸಲು ಶಿಕ್ಷಕರು ಆಹ್ವಾನಿಸುತ್ತಾರೆ ಮತ್ತು ಇತರ ವಿದ್ಯಾರ್ಥಿಗಳು ಗಮನವಿಟ್ಟು ಕಿರುನಾಟಕವನ್ನು ವೀಕ್ಷಿಸಿ ಚಟುವಟಿಕೆಯ ನಂತರದ ಚರ್ಚೆಗೆ ಸಿದ್ಧರಿರಲು ಹೇಳುತ್ತಾರೆ.
ಚರ್ಚೆ – 10 ನಿಮಿಷಗಳು
2. ಶಿಕ್ಷಕರು ನಂತರ ವಿದ್ಯಾರ್ಥಿಗಳಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಾರೆ.
- ಈ ಕಿರುನಾಟಕದಿಂದ ನಿಮಗೇನು ಅರ್ಥವಾಗುತ್ತದೆ?
- ಪರಿಸ್ಥಿತಿ 2 ಪರಿಸ್ಥಿತಿ 1 ರಿಂದ ಹೇಗೆ ಭಿನ್ನವಾಗಿದೆ?
- ಪರಿಸ್ಥಿತಿ 2 ರ ಯಾವ ಅಂಶ ಪ್ರಜಾಪ್ರಭುತ್ವವನ್ನು ತೋರಿಸುತ್ತದೆ?
ಚಟುವಟಿಕೆಯನ್ನು ಮುಕ್ತಾಯಗೊಳಿಸಿ
ಗಮನಿಸಿ - ಸಮಯವಿದ್ದರೆ, ಶಿಕ್ಷಕರು ಪದಾಧಿಕಾರಿಗಳಿಗೆ ಕೆಳಗೆ ಉಲ್ಲೇಖಿಸಿದಂತೆ ಚಟುವಟಿಕೆಯನ್ನು ಮುಕ್ತಾಯಗೊಳಿಸುವ ಅವಕಾಶ ನೀಡಬಹುದು. ಒಂದು ವೇಳೆ ಸಮಯದ ಅಭಾವವಿದ್ದರೆ, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ- ಅವರು ಈ ಚಟುವಟಿಕೆಯಿಂದ ಏನು ಕಲಿತುಕೊಂಡರು ಎಂಬುದನ್ನು ಪ್ರಶ್ನಿಸಲು ಆಹ್ವಾನಿಸಿ.
ಪದಾಧಿಕಾರಿಗಳು ತರಗತಿಯನ್ನು 2 ಗುಂಪುಗಳಾಗಿ ವಿಂಗಡಿಸುತ್ತಾರೆ. ಒಂದನ್ನು ಪ್ರತಿ ಪದಾಧಿಕಾರಿ ಪ್ರತಿನಿಧಿಸಬೇಕು. (ಅಥವಾ ತರಗತಿಯ ಗಾತ್ರ ದೊಡ್ಡದಿದ್ದರೆ ಸಾಲುಗಳಿಗೆ ತಕ್ಕಂತೆ) ಪ್ರತಿ ಬೆಂಚಿನವರು ಮನೆ, ಶಾಲೆ ಅಥವಾ ದೈನಂದಿನ ಜೀವನದಲ್ಲಿ ತಮ್ಮ ಅನುಭವದಂತೆ ಪ್ರಜಾಪ್ರಭುತ್ವವನ್ನು ತೋರಿಸುವ 1 ಪರಿಸ್ಥಿತಿಯನ್ನು ಮತ್ತು ಮನೆ, ಶಾಲೆ ಅಥವಾ ದೈನಂದಿನ ಜೀವನದಲ್ಲಿ ತಮ್ಮ ಅನುಭವದಂತೆ ಪ್ರಜಾಪ್ರಭುತ್ವವನ್ನು ತೋರಿಸದ 1 ಪರಿಸ್ಥಿತಿಯನ್ನು ಬರೆಯುತ್ತಾರೆ. ಇದಕ್ಕಾಗಿ ಅವರಿಗೆ 5 ನಿಮಿಷಗಳನ್ನು ನೀಡಿ.
ಪ್ರತಿ ಗುಂಪಿನ ವಿದ್ಯಾರ್ಥಿಗಳಿಗೆ ಯಾದೃಚ್ಛಿಕವಾಗಿ ಉತ್ತರಗಳನ್ನು ಹಂಚಿಕೊಳ್ಳಲು ಹೇಳಿ.
(ಸರಿಯಾದ ಉತ್ತರಕ್ಕಾಗಿ ಶಿಕ್ಷಕರು ಪದಾಧಿಕಾರಿಯನ್ನು ಬೆಂಬಲಿಸುತ್ತಾರೆ ಮತ್ತು ಅನುವು ಮಾಡಿಕೊಡುತ್ತಾರೆ)
ಶಿಕ್ಷಕರು ಮತ್ತು ಪದಾಧಿಕಾರಿಗಳ ಉಲ್ಲೇಖಕ್ಕಾಗಿ ಕೆಲವೊಂದು ಉದಾಹರಣೆಗಳು
ಪ್ರಜಾಪ್ರಭುತ್ವ - ಹೌದು | ಪ್ರಜಾಪ್ರಭುತ್ವ - ಇಲ್ಲ |
ಪದಾಧಿಕಾರಿಗಳನ್ನು ಆಯ್ಕೆ ಮಾಡಲು Actizen ಕ್ಲಬ್ ಚುನಾವಣೆಗಳು | ತರಗತಿಯ ನಿಯಮಗಳನ್ನು ಯಾರನ್ನೂ ಕೇಳದೆಯೇ ಒಬ್ಬನೇ ವಿದ್ಯಾರ್ಥಿ ರಚಿಸುವುದು. |
ಗುಂಪಿನ ಸದಸ್ಯರು ಜೊತೆಗೂಡಿ ನಿರ್ಧಾರಗಳನ್ನು ಕೈಗೊಂಡ ಪ್ರಾಜೆಕ್ಟ್ ವರ್ಕ್. | ತರಗತಿ ಮೇಲ್ವಿಚಾರಕರು ಪ್ರತಿ ದಿನ ಬಿಡುವಿನ ವೇಳೆಯಲ್ಲಿ ಯಾವ ಆಟ ಆಡುವುದು ಎಂದು ನಿರ್ಧರಿಸುವುದು. |
ಶಿಕ್ಷಕರು ಈ ಕೆಳಗಿನ ಅಂಶಗಳನ್ನು ಸಂಕ್ಷೇಪಿಸುತ್ತಾರೆ–
- ನಾವು ಎರಡು ವಿಭಿನ್ನ ಶೈಲಿಯ ನಿರ್ಧಾರ ತೆಗೆದುಕೊಳ್ಳುವಿಕೆಗೆ ಒತ್ತು ನೀಡಿದ್ದು, ಇದರಲ್ಲಿ ಒಂದು ನೇರವಾಗಿ ನಿರ್ಧಾರ ತೆಗೆದುಕೊಂಡಿರುವುದಾದರೆ ಇನ್ನೊಂದರಲ್ಲಿ ಪ್ರತಿಯೊಬ್ಬರೂ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಪಡೆದಿರುವುದು ಒಳಗೊಂಡಿತ್ತು.
- ಪ್ರಜಾಪ್ರಭುತ್ವದಲ್ಲಿ, ಪರಸ್ಪರ ಆಲಿಸುವ ಮೂಲಕ ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಗೌರವಿಸುವ ಮೂಲಕ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ದೊರೆಯುತ್ತದೆ, ಆದರೆ ನಿಮ್ಮ ಅಭಿಪ್ರಾಯಕ್ಕೆ ಯಾವಾಗಲೂ ಮನ್ನಣೆ ದೊರೆಯುತ್ತದೆ ಎಂಬ ಖಾತ್ರಿ ಇರುವುದಿಲ್ಲ.
- ಅಲ್ಲದೇ ನೆನಪಿಡಿ, ಕೆಲವೊಂದು ನಿರ್ಧಾರಗಳನ್ನು ಸಾಮೂಹಿಕವಾಗಿ ಮಾಡಿದರೆ, ಶಾಲೆಯ ಶಿಸ್ತು ಮತ್ತು ಹಿತಕ್ಕಾಗಿ ಕೆಲವೊಂದು ನಿರ್ಧಾರಗಳನ್ನು ಅಧಿಕಾರಿಗಳೇ ತೆಗೆದುಕೊಳ್ಳುತ್ತಾರೆ.
ದೇಶ್ ಅಪ್ನಾಯೇ ಫಲಕ
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು.
- ಸೆಶನ್ ಮುಕ್ತಾಯಗೊಳಿಸುತ್ತಿರುವ ಪದಾಧಿಕಾರಿ – ಉದಾಹರಣೆಗಳನ್ನು ನೀಡಬಹುದು.
- ಕಿರು ನಾಟಕ ಸ್ಕ್ರಿಪ್ಟ್‌ಗಳು.
ಗಮನಿಸಬೇಕಾದ ಅಂಶಗಳು
- ಕಿರು ನಾಟಕವು ಸರಳವಾಗಿರಲಿ, ವೇಷಭೂಷಣದ ಅಗತ್ಯವಿಲ್ಲ ಅಥವಾ ಅನೇಕ ಅಭ್ಯಾಸ ಸೆಶನ್‌ಗಳ ಅವಶ್ಯಕತೆ ಇಲ್ಲ.
- ಈ ಕಿರುನಾಟಕದ ಉದ್ದೇಶವು ಕಲಿಕಾ ಚರ್ಚೆಯನ್ನು ಮಾಡುವಂತೆ ಪರಿಸ್ಥಿತಿಯನ್ನು ಪ್ರಸ್ತುತಪಡಿಸುವುದಾಗಿದೆ.
- ಒಂದು ವೇಳೆ, 5-6 ವಿದ್ಯಾರ್ಥಿಗಳು, ಹೀಗೆ ಅತ್ಯಂತ ಕಡಿಮೆ ವಿದ್ಯಾರ್ಥಿಗಳಿದ್ದರೆ, ಕಿರುನಾಟಕವನ್ನು ನೀವು ಎರಡು ಪರಿಸ್ಥಿತಿಗಳಾಗಿ ಓದಬಹುದು. (ಕೇವಲ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದಾಗ ಮಾತ್ರವೇ ಮಾಡುವುದು)
ಚಟುವಟಿಕೆ ಫೋಟೋಗಳನ್ನು ಹಂಚಿಕೊಳ್ಳುವುದು
ಎಂಗೇಜ್‌ಮೆಂಟ್ ಆಫೀಸರ್‌ಗಳೊಂದಿಗೆ ಹಂಚಿಕೊಳ್ಳಬೇಕಿರುವ ಚಟುವಟಿಕೆ ಚಿತ್ರಗಳಿಗಾಗಿ ದಯವಿಟ್ಟು ಇವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ
- ಕಿರುನಾಟಕ ಮಾಡುತ್ತಿರುವ ವಿದ್ಯಾರ್ಥಿಗಳು – ಎರಡು ಗುಂಪುಗಳು (2 ಚಿತ್ರಗಳು)
- ಪದಾಧಿಕಾರಿ ರಿಕ್ಯಾಪ್ (2 ಫೋಟೋಗಳು)
- ದೇಶ್ ಅಪ್ನಾಯೇ ಫಲಕ (2 ಫೋಟೋಗಳು)
ಶಿಕ್ಷಕರ ಪ್ರತಿಕ್ರಿಯೆ ಫಾರ್ಮ್
ಶಿಕ್ಷಕರ ಪ್ರತಿಕ್ರಿಯೆ ಫಾರ್ಮ್ (IVR ಪ್ರತಿಕ್ರಿಯೆ – ಗೋವಾ ಸರ್ಕಾರಕ್ಕೆ ಮಾದರಿ)
ಚಟುವಟಿಕೆಯ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ನಿಮಗೆ IVR ಕರೆ ಮಾಡಲಾಗುತ್ತದೆ ಅಥವಾ ನೀವು ಕರೆ ಮಾಡಬಹುದು. ಈ ಕೆಳಗಿನ ಸ್ಕ್ರಿಪ್ಟ್ ಅನ್ನು ನಿಮಗಾಗಿ ಮಾಡಲಾಗುತ್ತದೆ. ನಿಮ್ಮ ಉಲ್ಲೇಖಕ್ಕಾಗಿ ಇದನ್ನು ಇಲ್ಲಿ ನೀಡಲಾಗಿದ್ದು, ಸೂಕ್ತವಾದ ಪರ್ಯಾಯವನ್ನು ನೀವು ಆರಿಸಬಹುದು.
1) ಈ ಕರೆಯಲ್ಲಿ ನೀವು ಯಾವ ಗ್ರೇಡ್ ಚಟುವಟಿಕೆಯ ಪ್ರತಿಕ್ರಿಯೆ ನೀಡಬಯಸುತ್ತೀರಿ?
ಗ್ರೇಡ್ 6 ಕ್ಕಾಗಿ- 1 ಒತ್ತಿ
ಗ್ರೇಡ್ 7 ಕ್ಕಾಗಿ- 2 ಒತ್ತಿ
ಗ್ರೇಡ್ 8 ಕ್ಕಾಗಿ- 3 ಒತ್ತಿ
ಗ್ರೇಡ್ 9 ಕ್ಕಾಗಿ- 4 ಒತ್ತಿ
ಒಳಬರುವ ಕರೆಗಳಿಗಾಗಿ ಶಿಕ್ಷಕರು ಚಟುವಟಿಕೆ ಪೂರ್ಣಗೊಂಡ ನಂತರವಷ್ಟೆ ಕರೆ ಮಾಡುವುದರಿಂದ Q.2 ಅನ್ನು ಕೇಳಲಾಗುವುದಿಲ್ಲ
ಹೊರಹೋಗುವ ಕರೆಗಾಗಿ ದಯವಿಟ್ಟು Q.2 ಅನ್ನು ಕೇಳಿ
2) ಈ ತಿಂಗಳ ಚಟುವಟಿಕೆಯನ್ನು ನೀವು ಪೂರ್ಣಗೊಳಿಸಿದ್ದೀರಾ?
ಹೌದು ಎಂದಾದರೆ- 1 ಒತ್ತಿ
ಇಲ್ಲ ಎಂದಾದರೆ 2 – ಒತ್ತಿ
3) ತರಗತಿಯ ಒಟ್ಟಾರೆ ಚಟುವಟಿಕೆಯ ಅನುಭವ ಹೇಗಿತ್ತು?
ಉತ್ತಮ ಎಂದಾದರೆ– 1 ಒತ್ತಿ
ಸಾಮಾನ್ಯ ಎಂದಾದರೆ– 2 ಒತ್ತಿ
ಸುಧಾರಣೆಯ ಅಗತ್ಯವಿದೆ ಎಂದಾದರೆ –3 ಒತ್ತಿ
4) ಈ ಚಟುವಟಿಕೆಯ ಚಿತ್ರಗಳು/ವೀಡಿಯೋಗಳನ್ನು ಸಂಬಂಧಪಟ್ಟ ಎಂಗೇಜ್‌ಮೆಂಟ್ ಆಫೀಸರ್‌ಗೆ ತಲುಪಿಸಿದ್ದೀರಾ?
ಹೌದು ಎಂದಾದರೆ- 1 ಒತ್ತಿ
ಇಲ್ಲ ಎಂದಾದರೆ 2 – ಒತ್ತಿ
5) ಈ ಚಟುವಟಿಕೆಗೆ ನೀವು ಯಾವುದಾದರೂ ಸಲಹೆ/ಪ್ರತಿಕ್ರಿಯೆ ನೀಡಬಯಸುತ್ತೀರಾ?
1 ಒತ್ತಿ – ಹೌದು ಎಂದಾದರೆ- 1 ಒತ್ತಿ, ಬೀಪ್ ಶಬ್ದ ಬಂದ ನಂತರ ನಿಮ್ಮ ಹೆಸರು, ಶಾಲೆಯ ಹೆಸರು ಮತ್ತು ಸಂದೇಶವನ್ನು ರೆಕಾರ್ಡ್ ಮಾಡಿ.
ಸಂದೇಶವನ್ನು ರೆಕಾರ್ಡ್ ಮಾಡಿದ ನಂತರ # ಒತ್ತಿ
ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ರೆಕಾರ್ಡ್ ಮಾಡಲಾಗಿದೆ.
ಇಲ್ಲ ಎಂದಾದರೆ 2 – ಒತ್ತಿ
ನಿಮ್ಮ ಪ್ರತಿಕ್ರಿಯೆಯನ್ನು ಯಶಸ್ವಿಯಾಗಿ ರೆಕಾರ್ಡ್ ಮಾಡಲಾಗಿದೆ.
6) ನೀವು ಯಾವುದೇ ಇತರ ಗ್ರೇಡ್‌ಗೆ ಪ್ರತಿಕ್ರಿಯೆ ನೀಡಬಯಸುತ್ತೀರಾ?
ಹೌದು ಎಂದಾದರೆ -1 ಒತ್ತಿ, ಪ್ರಶ್ನೆ 1-5 ರಿಂದ ಪ್ರಕ್ರಿಯೆಯನ್ನು ಪುನರಾವರ್ತಿಸಿ
ಇಲ್ಲ ಎಂದಾದರೆ- 2 ಒತ್ತಿ, ನಿಮ್ಮ ಸಮಯಕ್ಕಾಗಿ ಧನ್ಯವಾದಗಳು, ನಿಮ್ಮ ಸಲ್ಲಿಕೆಯನ್ನು ಯಶಸ್ವಿಯಾಗಿ ರೆಕಾರ್ಡ್ ಮಾಡಲಾಗಿದೆ.
ಚಟುವಟಿಕೆ ವರದಿ (ಪದಾಧಿಕಾರಿಗಳು ಭರ್ತಿ ಮಾಡುವುದು)
ಉಲ್ಲೇಖ ವಿಭಾಗ
ಅನುಬಂಧ 1 –
ಅನುಬಂಧ 1 – ಪಾತ್ರಾಭಿನಯದ (ರೋಲ್ ಪ್ಲೇ) ಸ್ಕ್ರಿಪ್ಟ್
ಪರಿಸ್ಥಿತಿ 1 – ಗುಂಪು A
ಪಾತ್ರಗಳು
(ನಿರೂಪಕರು – ಒಂದು ನಿರ್ದಿಷ್ಟ ಶಾಲೆಯಲ್ಲಿ, ಒಬ್ಬ ಆಡಳಿತ ಮಂಡಳಿಯ ವ್ಯಕ್ತಿ ಮತ್ತು ಶಾಲಾ ಪ್ರಾಂಶುಪಾಲರು ಪರಸ್ಪರ ಮಾತನಾಡುತ್ತಿದ್ದಾರೆ ) ಆಡಳಿತ ಮಂಡಳಿಯ ವ್ಯಕ್ತಿ: ಶುಭೋದಯ, ಪ್ರಾಂಶುಪಾಲರಾದ ಶರ್ಮಾ ಅವರೇ, ಆಡಳಿತ ಮಂಡಳಿಯವರು ಸ್ಥಾಪಿಸಿದ ಈ ಹೊಸ ನಿಯಮಗಳನ್ನು ಎಲ್ಲರಿಗೂ ತಿಳಿಸಿ. ಪ್ರಾಂಶುಪಾಲರು (ನಿಯಮಗಳನ್ನು ಓದುತ್ತಾರೆ ಮತ್ತು ಆಘಾತಕ್ಕೊಳಗಾದ ಅಭಿವ್ಯಕ್ತಿ): ಪೋಷಕರು ಅಥವಾ ನನ್ನನ್ನೂ ಒಳಗೊಂಡಂತೆ ಶಿಕ್ಷಕರೊಂದಿಗೆ ಸಮಾಲೋಚಿಸದೇ ಈ ನಿಯಮಗಳನ್ನು ನಿರ್ಧರಿಸಲಾಗಿದೆ. ಆಡಳಿತ ಮಂಡಳಿ: ನಿಯಮಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಸಾಕು. ಪ್ರತಿಯೊಬ್ಬರೂ ಇದನ್ನು ಅನುಸರಿಸಬೇಕು. (ನಿರೂಪಕರು - ಪ್ರಾಂಶುಪಾಲರು ಶಿಕ್ಷರರಿಗೆ ನಿಯಮಗಳನ್ನು ಓದಿ ಹೇಳುತ್ತಾರೆ ಮತ್ತು ಅದನ್ನು ವಿದ್ಯಾರ್ಥಿಗಳಿಗೆ ಹಾಗು ಹೆತ್ತವರಿಗೆ ತಿಳಿಸಲು ಹೇಳುತ್ತಾರೆ.) (ಪ್ರಾಂಶುಪಾಲರು ಹೇಳುತ್ತಿದ್ದಂತೆ 3-4 ಶಿಕ್ಷಕರು ತಲೆಯಾಡಿಸುತ್ತಾರೆ.) ನಿರೂಪಕರು – ಶಿಕ್ಷಕರು ವಿದ್ಯಾರ್ಥಿಗಳಿಗೆ ನಿಯಮಗಳನ್ನು ಓದಿಹೇಳುತ್ತಾರೆ. ಶಿಕ್ಷಕರು: ಶಾಲೆಯ ಆಡಳಿತ ಮಂಡಳಿಯು ಕೆಲವು ನಿಯಮಗಳನ್ನು ನಿರ್ಧರಿಸಿದ್ದು ಮುಂದಕ್ಕೆ ಅವುಗಳನ್ನು ಜಾರಿಗೊಳಿಸಲಾಗುತ್ತದೆ. ಅವುಗಳೆಂದರೆ: 1) ಶಿಕ್ಷಕರು ನಿಗದಿಪಡಿಸಿದಂತೆ ವಿದ್ಯಾರ್ಥಿಗಳು ಒಂದು ವರ್ಷದವರೆಗೆ ಅದೇ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. 2) ಎಲ್ಲಾ ಹುಡುಗರಿಗೂ ಒಂದೇ ರೀತಿಯ ಹೇರ್‌ಕಟ್ ಮತ್ತು ಎಲ್ಲಾ ಹುಡುಗಿಯರಿಗೆ ಒಂದೇ ರೀತಿಯ ಹೇರ್‌ಕಟ್. 3) ಎಲ್ಲಾ ತಪ್ಪಿಗೂ ಒಂದೇ ಶಿಕ್ಷೆ. 4) ಒಬ್ಬ ವಿದ್ಯಾರ್ಥಿ ಮಾತನಾಡಿದರೂ ಇಡೀ ತರಗತಿಯು ಹೆಚ್ಚುವರಿ ಮನೆಕೆಲಸ ಮಾಡಬೇಕು. 5) 7ನೇ ಗ್ರೇಡ್‌ಗೆ, ಹುಡುಗಿಯರು ಕ್ರೀಡಾ ಪೀರಿಯೆಡ್ ಅನ್ನು ಹೊಂದಿರುತ್ತಾರೆ ಮತ್ತು ಹುಡುಗರು ಸಂಗೀತ ಪೀರಿಯೆಡ್ ಹೊಂದಿರುತ್ತಾರೆ ನಿಯಮಗಳನ್ನು ಚರ್ಚಿಸುತ್ತಾ ವಿದ್ಯಾರ್ಥಿಗಳು ತಮ್ಮ ತಮ್ಮಲ್ಲೇ ಗೊಣಗಿಕೊಳ್ಳುತ್ತಾರೆ. |
ಪರಿಸ್ಥಿತಿ 2 – ಗುಂಪು B
ಪಾತ್ರಗಳು
ಶಿಕ್ಷಕರು: ಈ ಹೊಸ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುತ್ತಿದ್ದಂತೆಯೇ, ನಾವೆಲ್ಲರೂ ಜೊತೆ ಸೇರಿ ತರಗತಿಯಲ್ಲಿ ನೀವೆಲ್ಲರೂ ಪಾಲಿಸಬೇಕಾದ 3-4 ನಿಯಮಗಳನ್ನು ನಿರ್ಧರಿಸೋಣ. ರೀಟಾ ಕೈಯೆತ್ತುತ್ತಾಳೆ. ರೀಟಾ – ತರಗತಿಯಲ್ಲಿ ನಾವು ಅತ್ತಿತ್ತ ಓಡಾಡುವುದಿಲ್ಲ. ನಿರೂಪಕರು - ಕೆಲವು ಮಕ್ಕಳು ಒಪ್ಪುವುದಿಲ್ಲ ಮತ್ತು ಗಲಾಟೆ ಮಾಡುತ್ತಾರೆ; ಶ್ಯಾಮ ಕೈಯೆತ್ತುತ್ತಾನೆ. ಶಿಕ್ಷಕರು – ಹೌದು ಶ್ಯಾಮ್. ಶ್ಯಾಮ್ – ತರಗತಿ ನಡೆಯುವಾಗ ನಾನು ಅತ್ತಿತ್ತ ಓಡಾಡುವುದಿಲ್ಲ- ಎಂದು ನಾವು ಹೇಳಬಹುದು. ನಿರೂಪಕರು - ಪ್ರತಿಯೊಬ್ಬರೂ ಒಪ್ಪುತ್ತಾರೆ ಮತ್ತು ಶಿಕ್ಷಕರು ಬೋರ್ಡ್ ಮೇಲೆ ನಿಯಮಗಳನ್ನು ಬರೆಯುತ್ತಾರೆ. ರೋಹನ್ – ನಾವು ತರಗತಿಯೊಳಗೆ ಕಸ ಹಾಕುವುದಿಲ್ಲ. ಪ್ರತಿಯೊಬ್ಬರೂ ಒಪ್ಪುತ್ತಾರೆ ಮತ್ತು ಶಿಕ್ಷಕರು ಅದನ್ನು ಬೋರ್ಡ್‌ನಲ್ಲಿ ಬರೆಯುತ್ತಾರೆ. ಸೀಮಾ – ಶಿಕ್ಷಕರು ಪಾಠ ಮಾಡುವಾಗ ನಾವು ಮಾತನಾಡುವುದಿಲ್ಲ. ಶಿಕ್ಷಕರು – ಇದರ ಬದಲಿಗೆ ನಾವು ಹೀಗೆ ಬರೆಯಬಹುದು – ಶಿಕ್ಷಕರು ಪಾಠ ಮಾಡುವಾಗ ನಾವು ಗಮನವಿಟ್ಟು ಆಲಿಸುತ್ತೇವೆ. ನಿರೂಪಕರು - ಪ್ರತಿಯೊಬ್ಬರೂ ಇದನ್ನು ಒಪ್ಪುತ್ತಾರೆ ಮತ್ತು ಶಿಕ್ಷಕರು ಬೋರ್ಡ್ ಮೇಲೆ ಬರೆಯುತ್ತಾರೆ. ಈ ರೀತಿಯಾಗಿ ತರಗತಿಗೆ 4-5 ನಿಯಮಗಳನ್ನು ನಿರ್ಧರಿಸಲಾಗುತ್ತದೆ. ಶಿಕ್ಷಕರು –ಮಾಡಿರುವ ನಿಯಮಗಳನ್ನುಯಾರಾದರೂ ಉಲ್ಲಂಘಿಸುವುದು ಕಂಡುಬಂದರೆ ಏನಾಗುತ್ತದೆ. ಟೀನಾ- ನಮ್ಮಲ್ಲಿ ಯಾರಾದರೂ ನಿಯಮವನ್ನು ಪಾಲಿಸದೇ ಇರುವುದು ಕಂಡುಬಂದರೆ ಯಾವ ಕ್ರಮ ಕೈಗೊಳ್ಳುವುದು ಎಂಬುದನ್ನು ನಾವು ನಿರ್ಧರಿಸಬಹುದು. ನಿರೂಪಕರು - ವಿದ್ಯಾರ್ಥಿಗಳು ಸೀಮಾ, ರೋಹನ್, ರೀಟಾ ಮತ್ತು ಶ್ಯಾಮ್ ಇವರಿಗೆ ತರಗತಿಯ ಪರವಾಗಿ ಈ ಕ್ರಮಗಳನ್ನು ಸಂಯೋಜಿಸುತ್ತಾರೆ. |