KLE ಕನ್ನಡ ಗ್ರೇಡ್ 6 ಅಕ್ಟೋಬರ್ ಚಟುವಟಿಕೆ-ಪರಸ್ಪರ ಅವಲಂಬನೆ
ಉದ್ದೇಶಗಳು
ನಮ್ಮ ಸಮಾಜದಲ್ಲಿ ಅಸ್ತಿತ್ವವನ್ನು ಮತ್ತು ಪರಸ್ಪರ ಅವಲಂಬನೆಯ ಮಹತ್ವವನ್ನು ಗುರುತಿಸುವುದು.
ಕೌಶಲ್ಯಗಳು
ಸಂವಹನ, ವಿಮರ್ಶಾತ್ಮಕ ಚಿಂತನೆ
ಮೌಲ್ಯಗಳು
ಪರಾನುಭೂತಿ, ಗೌರವ ಒಬ್ಬರನ್ನೊಬ್ಬರು ಗೌರವಿಸುವುದು
ಬೇಕಾದ ಸಾಮಗ್ರಿಗಳು
ನೂಲು/ಹಗ್ಗ/ಉಣ್ಣೆ/ರಿಬ್ಬನ್/ದಾರದ ಉಂಡೆಗಳು (ಹೊಸದಲ್ಲ, ಇದನ್ನು ಮರುಬಳಕೆ ಮಾಡಬಹುದು) ಗುಂಪಿಗೆ ಅನುಗುಣವಾಗಿ, ಪಾತ್ರಗಳ ಟ್ಯಾಗ್‌ಗಳಿಗಾಗಿ ಪೇಪರ್
ಚಟುವಟಿಕೆ-ಪೂರ್ವ ಸಿದ್ಧತೆ
- ತರಗತಿಯ ಗಾತ್ರವನ್ನು ಅವಲಂಬಿಸಿ ಶಿಕ್ಷಕರು ಗುಂಪುಗಳ ಸಂಖ್ಯೆಯನ್ನು ನಿರ್ಧರಿಸುತ್ತಾರೆ. 8-15 ವಿದ್ಯಾರ್ಥಿಗಳನ್ನು ಒಂದು ಗುಂಪುಗಳಾಗಿ ವಿಭಜಿಸಲು ನಿರ್ಧರಿಸುತ್ತಾರೆ. (ಅನೇಕ ಗುಂಪುಗಳಿಗೆ, ಗುಂಪುಗಳಾದ್ಯಂತ ಪಾತ್ರಗಳು ಒಂದೇ ಇರಬಹುದು, ಆದ್ದರಿಂದ ಗುಂಪುಗಳ ಸಂಖ್ಯೆಗೆ ತಕ್ಕಂತೆ ಪಾತ್ರಗಳ ಅನೇಕ ನಕಲನ್ನು ಸಿದ್ದಪಡಿಸಿಕೊಳ್ಳಲು ಪದಾಧಿಕಾರಿಗಳಿಗೆ ಹಾಗೂ ಚಟುವಟಿಕೆಯ ಭಾಗವಹಿಸಲು ವಿದ್ಯಾರ್ಥಿಗಳಿಗೆ ತಿಳಿಸಿ.)
- ವಿದ್ಯಾರ್ಥಿಗಳ ಸಂಖ್ಯೆ ಮತ್ತು ಗುಂಪುಗಳಿಗೆ ತಕ್ಕಂತೆ ಪಾತ್ರಗಳ ಟ್ಯಾಗ್‌ಗಳನ್ನು ಮಾಡಲು 5cmX5cm ನ ಪೇಪರ್ ಮೇಲೆ ಪಾತ್ರಗಳನ್ನು ಬರೆಯುವಂತೆ ಪದಾಧಿಕಾರಿಗಳಿಗೆ ಹೇಳಿ. ಪಾತ್ರಗಳ ಟ್ಯಾಗ್‌ಗಳ ಲಿಸ್ಟ್ ಅನ್ನು ಅನುಬಂಧ 1ಕ್ಕೆ ಉಲ್ಲೇಖಿಸಿ. ಪಾತ್ರಗಳ ಟ್ಯಾಗ್‌ಗಳನ್ನು ಚಟುವಟಿಕೆಯ ಒಂದು ದಿನಕ್ಕೆ ಮೊದಲೇ ಸಿದ್ಧಪಡಿಸಿ ಮತ್ತು ಚಟುವಟಿಕೆಯ ದಿನ ಅದನ್ನು ತನ್ನಿ.
- ಶಿಕ್ಷಕರು ಗುಂಪಿನ ಚಟುವಟಿಕೆಗೆ ತಕ್ಕಂತೆ ಚಟುವಟಿಕೆಯ ಸ್ಥಳವನ್ನು ಮೊದಲೇ ನಿರ್ಧರಿಸಿರುತ್ತಾರೆ. ನೀವು ತರಗತಿಯಲ್ಲಿ ಬೆಂಚ್‌ಗಳನ್ನು ಸರಿಸಿ, ಅಥವಾ ಮುಂದಿನ ಸ್ಥಳದಲ್ಲಿ ಅಥವಾ ಬೆಂಚ್ ಫಾರ್ಮ್ಯಾಟ್‌ನಲ್ಲಿ ಆಡಬಹುದು. ಅಥವಾ ನೀವು ಈ ಆಟವನ್ನು ಸ್ಥಳದ ಲಭ್ಯತೆಗೆ ಅನುಗುಣವಾಗಿ ಹಾಲ್/ಮೈದಾನದಲ್ಲಿ ಆಡಬಹುದು.
- ಮುಖ್ಯ ಚಟುವಟಿಕೆ ದಿನಕ್ಕಾಗಿ ಶಿಕ್ಷಕರು ಉಣ್ಣೆ/ದಾರ/ಇತ್ಯಾದಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವುದು. (ಅಲ್ಲದೇ ಹೊಸತನ್ನು ಖರೀದಿಸದೇ ತಮ್ಮ ಮನೆಯಿಂದಲೇ ದಾರವನ್ನು ತರುವಂತೆ ಕೆಲವು ವಿದ್ಯಾರ್ಥಿಗಳಿಗೆ ಹೇಳಬಹುದು.)
- ಪದಾಧಿಕಾರಿಗಳು ಮುಕ್ತಾಯದ ಸಂದರ್ಭದಲ್ಲಿ ಚರ್ಚಿಸಬೇಕಾದ ಪ್ರಶ್ನೆಗಳನ್ನು ನಕಲು ಮಾಡುವುದು. (ಅವರಿಗೆ ಸಿದ್ಧಪಡಿಸಲು ಹೇಳಿ)
ಮುಖ್ಯ ಚಟುವಟಿಕೆ
ಬೇಕಾದ ಅಂದಾಜು ಸಮಯ: 30 ನಿಮಿಷಗಳು
- ವೃತ್ತಗಳನ್ನು ರಚಿಸಿ: ಎಲ್ಲಾ ವಿದ್ಯಾರ್ಥಿಗಳು/ಗುಂಪುಗಳು ಒಂದೇ ಸಮಯದಲ್ಲಿ ವೃತ್ತ ರಚಿಸುವಂತೆ ಹೇಳಿ. ಲಭ್ಯವಿರುವ ರಿಬ್ಬನ್/ಹಗ್ಗ/ಉಣ್ಣೆಯನ್ನು ಗುಂಪುಗಳಿಗೆ ನೀಡಿ ಮತ್ತು ಗುಂಪಿನ ಒಬ್ಬ ವಿದ್ಯಾರ್ಥಿಗೆ ಉಣ್ಣೆ/ಹಗ್ಗದ ಚೆಂಡನ್ನು ತಮ್ಮ ತೋರುಬೆರಳಿನ ತುದಿಗೆ ಕಟ್ಟಲು ಹೇಳಿ. (ಪ್ರತಿ ಗುಂಪಿಗೆ ಕನಿಷ್ಠ 2-3 ದಾರಗಳು/ಹಗ್ಗ)(ಗಮನಿಸಿ - ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಅವರನ್ನು ಸ್ಥಳಕ್ಕೆ ಕೊಂಡೊಯ್ಯಲು ಶಿಕ್ಷಕರು ಪದಾಧಿಕಾರಿಗಳ ನೆರವು ಪಡೆಯುತ್ತಾರೆ (ಚಟುವಟಿಕೆಯನ್ನು ಹೊರಗೆ ನಡೆಸಬೇಕಾದಲ್ಲಿ). ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಪಾತ್ರಗಳ ಟ್ಯಾಗ್ ಅನ್ನು ಹಂಚುವುದು.
- ಸಂಪರ್ಕಗಳನ್ನು ಕಂಡುಹಿಡಿಯುವುದು: ವಿದ್ಯಾರ್ಥಿಗಳು ತಮ್ಮ ಮತ್ತು ಇತರರ ಪಾತ್ರದ ನಡುವಿನ ಸಂಬಂಧ, ಅಂದರೆ ಅವರು ಒಬ್ಬರಿಗೊಬ್ಬರು ಹೇಗೆ ಪರಸ್ಪರ ಅವಲಂಬಿತರಾಗಿದ್ದಾರೆ ಎಂಬುದನ್ನು ಗುರುತಿಸಲು ಪ್ರಯತ್ನಿಸುತ್ತಾರೆ.
- ಉದಾಹರಣೆಗೆ – ರೈತನು ಹೊಸ ಮನೆ ಅಥವಾ ಹೊಲವನ್ನು ನಿರ್ಮಿಸಲು ನಿರ್ಮಾಣ ಕಾರ್ಮಿಕರನ್ನು ಅವಲಂಬಿಸುತ್ತಾನೆ, ನಿರ್ಮಾಣ ಕಾರ್ಮಿಕನು ಆರೋಗ್ಯ ಕೆಟ್ಟಾಗ ಔಷಧಿಗಾಗಿ ವೈದ್ಯರನ್ನು ಅವಲಂಬಿಸುತ್ತಾನೆ, ವೈದ್ಯರು ಆಹಾರಕ್ಕಾಗಿ ರೈತರನ್ನು ಅವಲಂಬಿಸಿರುತ್ತಾರೆ ಇತ್ಯಾದಿ
- ಪರಸ್ಪರ ಅವಲಂಬನೆ: ಅವರು ಅವಲಂಬನೆಯನ್ನು ಗುರುತಿಸುತ್ತಿದ್ದಂತೆಯೇ, ಚೆಂಡು ಅಥವಾ ರಿಬ್ಬನ್ ಅನ್ನು ಅವರು ಆ ಪಾತ್ರದತ್ತ ಎಸೆದು ಸಂಬಂಧವನ್ನು ಜೋರಾಗಿ ಹೇಳುತ್ತಾರೆ. ಉದಾಹರಣೆಗೆ – ನಾನೊಬ್ಬ ವೈದ್ಯ ಮತ್ತು ನಾನು ಆಹಾರಕ್ಕಾಗಿ ರೈತನನ್ನು ಅವಲಂಬಿಸಿದ್ದೇನೆ.
- ಮುಂದಿನ ಸಂಬಂಧ: ಹೊಸದಾಗಿ ಸಂಬಂಧ ಪಡೆದ ಪಾತ್ರವು ಈಗ ತಮ್ಮ ಬೆರಳಿಗೆ ರಿಬ್ಬನ್ ಕಟ್ಟಿಕೊಳ್ಳುತ್ತಾರೆ ಮತ್ತು ಅದನ್ನು ಇನ್ನೊಂದು ಸಂಬಂಧಕ್ಕೆ ಎಸೆಯುತ್ತಾರೆ.
- ಹೆಚ್ಚಿನ ಸಂಬಂಧವನ್ನು ಉತ್ತೇಜಿಸಲು, 2 ಆಟಗಾರರ ನಡುವೆ 2ಕ್ಕಿಂತಲೂ ಹೆಚ್ಚು ಬಾರಿ ಉಣ್ಣೆಯ ಚೆಂಡುಗಳು/ರಿಬ್ಬನ್ ಪಾಸ್ ಮಾಡುವುದನ್ನು ಸೀಮಿತಗೊಳಿಸಿ.
- ಸಮಯಾವಾಕಾಶ ಲಭ್ಯವಿರುವ ತನಕ ಆಟವಾಡಿ. ವಿದ್ಯಾರ್ಥಿಗಳು ಚರ್ಚಿಸುವುದಕ್ಕಾಗಿ ಅದೇ ಗುಂಪಿನಲ್ಲಿ ಕುಳಿತುಕೊಳ್ಳುತ್ತಾರೆ.
ಚಟುವಟಿಕೆಯ ಮುಕ್ತಾಯ
ಗಮನಿಸಿ - ಸಮಯವಿದ್ದರೆ, ಶಿಕ್ಷಕರು ಪದಾಧಿಕಾರಿಗಳಿಗೆ ಕೆಳಗೆ ಉಲ್ಲೇಖಿಸಿದಂತೆ ಚಟುವಟಿಕೆಯನ್ನು ಮುಕ್ತಾಯಗೊಳಿಸುವ ಅವಕಾಶ ನೀಡಬಹುದು. ಒಂದು ವೇಳೆ ಸಮಯದ ಅಭಾವವಿದ್ದರೆ, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ- ಅವರು ಈ ಚಟುವಟಿಕೆಯಿಂದ ಏನು ಕಲಿತುಕೊಂಡರು ಎಂಬುದನ್ನು ಪ್ರಶ್ನಿಸಲು ಆಹ್ವಾನಿಸಿ.
ಗಮನಿಸಿ: ಅದೇ ಸ್ಥಳದಲ್ಲಿ ಗುಂಪಿನಲ್ಲಿ ಕುಳಿತುಕೊಂಡು ಮುಕ್ತಾಯಗೊಳಿಸುವಿಕೆಯನ್ನು ಮುಂದುವರೆಸಿ.
ಪದಾಧಿಕಾರಿಗಳು (ಶಿಕ್ಷಕರ ನೆರವಿನೊಂದಿಗೆ) ಚಟುವಟಿಕೆಯ ಮುಕ್ತಾಯವನ್ನು ನಡೆಸಿಕೊಡುತ್ತಾರೆ. ಯಾವುದೇ ಅವಕಾಶ ಪಡೆಯದ (ಅಥವಾ ಇತರರಿಗೆ ಹೋಲಿಸಿದರೆ ಕಡಿಮೆ ಅವಕಾಶ ದೊರೆತ) ವಿದ್ಯಾರ್ಥಿಗಳನ್ನು ಗುರುತಿಸಿ ಮುಂದಕ್ಕೆ ಬರುವಂತೆ ಹೇಳಿ.
ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ, ಅವರನ್ನು ಜೋಡಿಗಳಾಗಿ ವಿಂಗಡಿಸಿ (ಪಾತ್ರಗಳು ಭಿನ್ನವಾಗಿವೆಯೆಂದು ಖಾತ್ರಿಪಡಿಸಿ) ಮತ್ತು ಅವರು ಪರಸ್ಪರ ಹೇಗೆ ಅವಲಂಬಿತರು ಎಂಬುದನ್ನು ಗುರುತಿಸಲು ಹೇಳಿ.
ಅವರು ಪ್ರತಿಕ್ರಿಯೆ ನೀಡಲು ಸಾಧ್ಯವಾಗದೇ ಇದ್ದರೆ, ಇತರ ವಿದ್ಯಾರ್ಥಿಗಳೂ ನೆರವಾಗಬಹುದು.
ಎಲ್ಲಾ ವಿದ್ಯಾರ್ಥಿಗಳಲ್ಲೂ ಕೇಳಿ– ಪರಸ್ಪರ ಅವಲಂಬಿತವಾಗಿರುವ ಕುರಿತು ಈ ಚಟುವಟಿಕೆಯಿಂದ ನೀವು ಏನನ್ನು ಕಲಿತಿದ್ದೀರಿ?
ಚರ್ಚೆಯನ್ನು ಆಧರಿಸಿ ಶಿಕ್ಷಕರು ಪ್ರಮುಖ ಸಾರಾಂಶಗಳನ್ನು ಹೇಳುತ್ತಾರೆ
- ನಾವು ಆಹಾರ, ವಸತಿ, ಇತ್ಯಾದಿ ಅನೇಕ ಅವಶ್ಯಕತೆಗಳಿಗಾಗಿ ಮತ್ತೊಬ್ಬರ ಮೇಲೆ ಅವಲಂಬಿತವಾಗಿರುತ್ತೇವೆ ಇದಕ್ಕೆ ಪರಸ್ಪರ ಅವಲಂಬನೆ ಎಂದು ಹೇಳಲಾಗುತ್ತದೆ ಮತ್ತು ಒಬ್ಬರನ್ನೊಬ್ಬರು ಅವಲಂಬಿಸುವುದಕ್ಕೆ ಪರಸ್ಪರ ಅವಲಂಬನೆ ಎನ್ನಲಾಗುತ್ತದೆ.
- ನಮ್ಮ ದೈನಂದಿನ ಅನುಭವಗಳು ಮತ್ತು ಕೆಲವು ಸಂಪರ್ಕಗಳನ್ನು ಸುಲಭವಾಗಿ ಗುರುತಿಸಬಹುದು, ಆದರೆ ನಮ್ಮ ಅನುಭವಗಳು ಒಬ್ಬರಿಂದೊಬ್ಬರಿಗೆ ಭಿನ್ನವಾಗಿರುವದರಿಂದ ಕೆಲವೊಂದಕ್ಕೆ ನಾವು ಶ್ರಮ ಹಾಕಿ ಹುಡುಕಬೇಕಾಗುತ್ತದೆ. (ನೀವು ರೀಕ್ಯಾಪ್ ವಿಭಾಗವನ್ನು ಉಲ್ಲೇಖಿಸಬಹುದು)
ದೇಶ್ ಅಪ್ನಾಯೇ ಫಲಕ (DA ಗೋಡೆ)
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು.
- ಚಟುವಟಿಕೆಯ ಪ್ರಮುಖ ಕಲಿಕಾ ಸಾರಾಂಶಗಳು. ( 5 ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ನೋಟ್‌ಬುಕ್ ಪೇಜ್‌ನಲ್ಲಿ ಬರೆಯುವಂತೆ ಅವರಿಗೆ ಉತ್ತೇಜನ ನೀಡಿ)
- ವಿದ್ಯಾರ್ಥಿಗಳು ತಾವು ಅವಲಂಬಿಸಿದ ಪಾತ್ರದ ಪಟ್ಟಿಯನ್ನು ನೋಟ್‌ಬುಕ್ ಹಾಳೆಯಲ್ಲಿ ಮಾಡಲು ಉತ್ತೇಜಿಸಿ. (1-2 ವಿದ್ಯಾರ್ಥಿಗಳು ಅದನ್ನು ಮಾಡಬಹುದು – ಅದರ ಕೆಳಗೆ ಅವರು ತಮ್ಮ ಹೆಸರನ್ನು ಬರೆಯಬಹುದು.) (ಐಚ್ಛಿಕ)
ಗಮನಿಸಬೇಕಾದ ಅಂಶಗಳು
- ಚಟುವಟಿಕೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಹೆಚ್ಚು ಲಿಂಕ್‌ಗಳನ್ನು ಸೃಷ್ಟಿಸಲು ಉತ್ತೇಜಿಸಿ.
- ಮರು ಚರ್ಚೆಗಾಗಿ ವಿದ್ಯಾರ್ಥಿಗಳನ್ನು ಅದೇ ಗುಂಪಿನಲ್ಲಿ ಕುಳಿತುಕೊಳ್ಳಲು ತಿಳಿಸಿ.
ಚಟುವಟಿಕೆ ಫೋಟೋಗಳನ್ನು ಹಂಚಿಕೊಳ್ಳುವುದು
- ಚಟುವಟಿಕೆ ಫೋಟೋಗಳನ್ನು ಎಂಗೇಜ್‌ಮೆಂಟ್ ಆಫೀಸರ್‌ಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ, ದಯವಿಟ್ಟು ಇವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ
- ವಿದ್ಯಾರ್ಥಿಗಳು ವೃತ್ತಾಕಾರದಲ್ಲಿ ಕುಳಿತು ಚಟುವಟಿಕೆ ಮಾಡುತ್ತಿರುವುದು. – ಚಟುವಟಿಕೆಯಲ್ಲಿಭಾಗವಹಿಸಿದ ವಿದ್ಯಾರ್ಥಿಗಳು/ಗುಂಪಿನ ಸ್ಪಷ್ಟ ನೋಟ. (2 ಫೋಟೋಗಳು)
- ಮುಕ್ತಾಯ ಸೆಶನ್ ಮುನ್ನಡೆಸುತ್ತಿರುವ ಪದಾಧಿಕಾರಿಗಳು. (2 ಫೋಟೋಗಳು)
- ದೇಶ್ ಅಪ್ನಾಯೇ ಭಿತ್ತಿ ಪತ್ರಗಳು (2 ಫೋಟೋಗಳು)
ಉಲ್ಲೇಖ ವಿಭಾಗ
ಅನುಬಂಧ 1 –
- ವಿದ್ಯಾರ್ಥಿ
- ಶಿಕ್ಷಕರು
- ಕ್ಷೌರಿಕ
- ಹಾಲು ಮಾರುವವನು
- ರೈತ
- ಸಹಾಯಕಿ-ಸಹಾಯಕ ಸಿಬ್ಬಂದಿ/ಶಾಲೆಯ ಜವಾನ
- ಶಾಲಾ ಪ್ರಾಂಶುಪಾಲರು
- ದೈಹಿಕ ಶಿಕ್ಷಕರು/ಕ್ರೀಡಾ ಶಿಕ್ಷಕರು
- ತಂದೆ
- ತರಕಾರಿ ಮಾರಾಟಗಾರ
- ದಿನಸಿ ಅಂಗಡಿ ಮಾಲೀಕರು
- ತರಗತಿ ಮೇಲ್ವಿಚಾರಕರು
- ವೈದ್ಯರು
- ತಾಯಿ
- ಸ್ಥಳೀಯ ಆಡಳಿತ-ಅಧಿಕಾರಿ
- ಪೌರ ಕಾರ್ಮಿಕರು