KLE ಕನ್ನಡ ಗ್ರೇಡ್ 7 ಅಕ್ಟೋಬರ್ ಚಟುವಟಿಕೆ-ಸಮಾನತೆಯ ನಡಿಗೆ
ಉದ್ದೇಶಗಳು
- ಸಮಾನತೆಯ ನಡಿಗೆಯ ಮೂಲಕ ನಮ್ಮ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಅಸಮಾನತೆಯ ಅನುಭವ ಪಡೆಯುವುದು.
- ಸಮಾನತೆಯ ಅರ್ಥವನ್ನು ವಿವರಿಸುವುದು.
ಕೌಶಲಗಳು
ಸಂವಹನ, ವಿಮರ್ಶಾತ್ಮಕ ಚಿಂತನೆ
ಮೌಲ್ಯಗಳು
ಸಮಾನತೆ, ಪರಾನುಭೂತಿ
ಬೇಕಾದ ಸಾಮಗ್ರಿಗಳು
ಪಾತ್ರದ ಹೆಸರಿನ ಕಾರ್ಡ್ ಮಾಡಲು ಖಾಲಿ ಹಾಳೆ/ರಫ್ ಪೇಪರ್ ಮತ್ತು ಪೆನ್‌ಗಳು
ಚಟುವಟಿಕೆ-ಪೂರ್ವ ಸಿದ್ಧತೆ
- ತರಗತಿಯ ಗಾತ್ರಕ್ಕೆ ತಕ್ಕಂತೆ ಶಿಕ್ಷಕರು ಚಟುವಟಿಕೆಗೆ ಗುಂಪಿನ ಸಂಖ್ಯೆಯನ್ನು ನಿರ್ಧರಿಸುತ್ತಾರೆ. ತರಗತಿಯನ್ನು ಕನಿಷ್ಠ 6 ಗುಂಪುಗಳಾಗಿ ವಿಂಗಡಿಸಿ. ಒಂದು ಗುಂಪು ಒಂದು ಪಾತ್ರವನ್ನು ಪ್ರತಿನಿಧಿಸಲಿದೆ.(ಗಮನಿಸಿ - ತರಗತಿ ಗಾತ್ರ ದೊಡ್ಡದಿದ್ದರೆ, ಹೆಚ್ಚಿನ ಪಾತ್ರಗಳನ್ನು ನೀಡಿ ಹೆಚ್ಚಿನ ಗುಂಪುಗಳನ್ನು ರಚಿಸಬಹುದು.)
- ರೋಲ್ ಟ್ಯಾಗ್‌ಗಳನ್ನು ಮಾಡಲು ಪಾತ್ರಗಳನ್ನು 10cmX10cm ಪೇಪರ್‌ಗಳ ಮೇಲೆ ಬರೆಯುವಂತೆ ಪದಾಧಿಕಾರಿಗಳಿಗೆ ತಿಳಿಸಿ. ಪ್ರತಿ ಗುಂಪಿಗೆ ಒಂದು ರೋಲ್ ಟ್ಯಾಗ್ ಮಾಡಿ. ರೋಲ್ ಟ್ಯಾಗ್‌ಗಳ ಲಿಸ್ಟ್ ಅನ್ನು ಅನುಬಂಧ 1ಕ್ಕೆ ಉಲ್ಲೇಖಿಸಿ. ರೋಲ್ ಟ್ಯಾಗ್‌ಗಳನ್ನು ಚಟುವಟಿಕೆಯ ಒಂದು ದಿನಕ್ಕೆ ಮೊದಲೇ ಸಿದ್ಧಪಡಿಸಿ ಮತ್ತು ಚಟುವಟಿಕೆಯ ದಿನ ಅದನ್ನು ತನ್ನಿ.
- ಶಿಕ್ಷಕರು ಗುಂಪಿನ ಚಟುವಟಿಕೆಗೆ ತಕ್ಕಂತೆ ಚಟುವಟಿಕೆಯ ಸ್ಥಳವನ್ನು ಮೊದಲೇ ನಿರ್ಧರಿಸಿರುತ್ತಾರೆ. ಬೆಂಚುಗಳನ್ನು ಸರಿಸುವ ಮೂಲಕ ಅಥವಾ ತರಗತಿಯ ಮುಂಭಾಗದಲ್ಲಿ ಚಟುವಟಿಕೆಯನ್ನು ಮಾಡಬಹುದು. ಅಥವಾ ನೀವು ಈ ಆಟವನ್ನು ಸ್ಥಳದ ಲಭ್ಯತೆಗೆ ಅನುಗುಣವಾಗಿ ಹಾಲ್/ಮೈದಾನದಲ್ಲಿ ಆಡಬಹುದು.
ಮುಖ್ಯ ಚಟುವಟಿಕೆ
ಬೇಕಾದ ಅಂದಾಜು ಸಮಯ: 30 ನಿಮಿಷಗಳು.
- ನಿರ್ಧರಿಸಿದಂತೆ ತರಗತಿಯನ್ನು ಗುಂಪುಗಳಾಗಿ ವಿಂಗಡಿಸಿ. ಗುಂಪುಗಳಿಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಹೇಳಿ. ಗುಂಪಿನ ಪಾತ್ರವನ್ನು ನಿರ್ಧರಿಸಲು ಅವರಿಗೆ ಚೀಟಿಯನ್ನು ಎತ್ತಲು ಹೇಳಿ.
- ಗುಂಪಿನಲ್ಲಿ ಪಾತ್ರದ ಬಗ್ಗೆ ಆಲೋಚನೆ ಮಾಡಲು 5 ನಿಮಿಷಗಳ ಅವಕಾಶವಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿ, ಅಂದರೆ ಆ ವ್ಯಕ್ತಿಯಂತಿದ್ದರೆ ಹೇಗಿರುತ್ತದೆ- ಆ ವ್ಯಕ್ತಿಗೆ ಯಾವ ಭಾವನೆ ಬರುತ್ತದೆ, ಯಾವ ರೀತಿ ವರ್ತಿಸುತ್ತಾರೆ ಇತ್ಯಾದಿ. ಉದಾಹರಣೆಗೆ- ನಿಮಗೆ ನಿರಾಶ್ರಿತ ವ್ಯಕ್ತಿಯೊಬ್ಬನ ಪಾತ್ರ ದೊರೆತರೆ, ಆ ವ್ಯಕ್ತಿಗೆ ಉಳಿದುಕೊಳ್ಳಲು ಸ್ಥಳವಿಲ್ಲದಿರುವುದನ್ನು ಆಲೋಚಿಸಿ.
- ಶಿಕ್ಷಕರು ಪ್ರತಿ ಗುಂಪಿನ ವಿದ್ಯಾರ್ಥಿ ಪ್ರತಿನಿಧಿಗೆ ಎದ್ದು ನಿಂತು ಸಾಲಿನಲ್ಲಿ, ಅಕ್ಕಪಕ್ಕದಲ್ಲಿ ಮತ್ತು ಶಿಕ್ಷಕರಿಗೆ ಎದುರಾಗಿ ನಿಲ್ಲಲು ಹೇಳುತ್ತಾರೆ. ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗೆ ಹೆಸರಿನ ಟ್ಯಾಗ್ ಅನ್ನು ಧರಿಸಲು/ರೋಲ್ ಟ್ಯಾಗ್ ಅನ್ನು ಕೈಯಲ್ಲಿ ಹಿಡಿದುಕೊಳ್ಳಲು ಹೇಳಿ.
- ಕೆಲವು ಹೇಳಿಕೆಗಳನ್ನು ಓದಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿ. ನಿಮ್ಮ ಪಾತ್ರವು ನಿಮ್ಮ ಗುಂಪಿಗೆ ದೊರೆತ ಪಾತ್ರವಾಗಿದ್ದರೆ, ಹೇಳಿಕೆಗೆ ಹೌದು ಎಂದು ಉತ್ತರಿಸಿದರೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ. ಅವರು ಇಲ್ಲ ಎಂದು ಉತ್ತರಿಸಬಹುದು ಎಂದು ನಿಮಗನಿಸಿದರೆ, ಹಾಗೆಯೇ ಇರಿ’.
- ಪ್ರತಿನಿಧಿಯು ಮುಂದೆ ಹೋಗಬಹುದೇ ಅಥವಾ ಬೇಡವೇ ಎಂದು ನಿರ್ಧರಿಸಲು ಗುಂಪಿನ ಸದಸ್ಯರು ನೆರವಾಗಬಹುದು. ಹೇಳಿಕೆಯನ್ನು ಓದಿದ ನಂತರ ವಿದ್ಯಾರ್ಥಿಗಳಿಗೆ ನಿರ್ಧರಿಸಲು 30 ಸೆಕೆಂಡುಗಳು ಇರುತ್ತವೆ ಎಂದು ತಿಳಿಸಿ. ವಿದ್ಯಾರ್ಥಿಗಳು ಮುಂದುವರಿಯಬೇಕೆ ಅಥವಾ ಸ್ಥಳದಲ್ಲೇ ಇರಬೇಕೆ ಎಂಬುದಕ್ಕೆ ಚಪ್ಪಾಳೆಯು ಸೂಚನೆಯಾಗುತ್ತದೆ.
- ಅನುಬಂಧ 2 ರಲ್ಲಿ ನೀಡಲಾದ ಹೇಳಿಕೆಗಳನ್ನು (ಕನಿಷ್ಠ 7-8) ಗುಂಪಿಗೆ ಓದಿ ಹೇಳಿ. (ಅಗತ್ಯವಿರುವಂತೆ ನಿಮ್ಮ ಗುಂಪು ಮತ್ತು ಸಂದರ್ಭಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಿ.)
- ಎಲ್ಲಾ ಹೇಳಿಕೆಗಳು ಮುಗಿದ ನಂತರ ಗುಂಪಿಗೆ ತಮ್ಮ ಪಾತ್ರದ ಹಾಳೆಯನ್ನು, ಎಲ್ಲಾ ರೋಲ್ ಕಾರ್ಡ್‌ಗಳ ಸ್ಥಾನವು ಎಲ್ಲರಿಗೆ ಕಾಣುವಂತೆ ನೆಲದ ಮೇಲೆ ಹಾಕಲು ಹೇಳಿ.
ಗಮನಿಸಿ: ಚಟುವಟಿಕೆಯ ಮುಕ್ತಾಯವನ್ನು ಅದೇ ಸ್ಥಳದಲ್ಲಿ ಮುಂದುವರಿಸಿ.
ಚಟುವಟಿಕೆಯನ್ನು ಮುಕ್ತಾಯಗೊಳಿಸಿ
ಗಮನಿಸಿ - ಸಮಯವಿದ್ದರೆ, ಶಿಕ್ಷಕರು ಪದಾಧಿಕಾರಿಗಳಿಗೆ ಕೆಳಗೆ ಉಲ್ಲೇಖಿಸಿದಂತೆ ಚಟುವಟಿಕೆಯನ್ನು ಮುಕ್ತಾಯಗೊಳಿಸುವ ಅವಕಾಶ ನೀಡಬಹುದು. ಒಂದು ವೇಳೆ ಸಮಯದ ಅಭಾವವಿದ್ದರೆ, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ- ಅವರು ಈ ಚಟುವಟಿಕೆಯಿಂದ ಏನು ಕಲಿತುಕೊಂಡರು ಎಂಬುದನ್ನು ಪ್ರಶ್ನಿಸಲು ಆಹ್ವಾನಿಸಿ.
ಈ ಚಟುವಟಿಕೆಯನ್ನು ಪದಾಧಿಕಾರಿ (ಶಿಕ್ಷಕರ ನೆರವಿನೊಂದಿಗೆ) ಮುಗಿಸುವುದು. ಸಮಾನತೆಯ ನಡಿಗೆಯ ಅನುಭವದಿಂದ ವಿದ್ಯಾರ್ಥಿಗಳು ಏನನ್ನು ಕಲಿತರು ಎಂಬುದನ್ನು ಇಬ್ಬಿಬ್ಬರು ವಿದ್ಯಾರ್ಥಿಗಳು ಜೊತೆಯಾಗಿ ಆಲೋಚಿಸಲು ಹೇಳಿ- ಅವರಿಗೆ ಆಲೋಚಿಸಲು ಮಾರ್ಗದರ್ಶನ ನೀಡಿ
- ಯಾವ ಪಾತ್ರಗಳು ಬಾಕಿ ಉಳಿದಿದ್ದವು? ಯಾಕೆ?
- ಅವರು ಯಾವ ಗುಂಪಿನ ಭಾಗವಾಗಿರಲು ಬಯಸಿದ್ದರು? ಯಾಕೆ?
- ನಾವು ಸಮಾಜದಲ್ಲಿ ಸಮಾನರು ಎಂದು ಹೇಳಿದರೆ, ಎದುರಿನಲ್ಲಿ ಇರುವವರು ಮತ್ತು ಹಿಂದೆ ಇರುವವರಲ್ಲಿ ಯಾಕೆ ಅಷ್ಟು ದೊಡ್ಡ ಅಂತರವಿತ್ತು?
- ನೀವು ಎಲ್ಲರನ್ನೂ ಸಮಾನವಾಗಿ ನೋಡುತ್ತೀರಿ ಎಂಬುದನ್ನು ಖಾತ್ರಿಪಡಿಸಲು ನೀವು ಏನು ಮಾಡುತ್ತೀರಿ?
ತಮ್ಮ ತಮ್ಮೊಳಗೆ ಚರ್ಚಿಸಲು ಅವರಿಗೆ 5-7 ನಿಮಿಷಗಳ ಅವಕಾಶ ನೀಡಿ.
ಪದಾಧಿಕಾರಿಗಳು ಯಾದೃಚ್ಛಿಕವಾಗಿ ಜೋಡಿಗಳನ್ನು ಆಯ್ಕೆ ಮಾಡಿ ಹಂಚಿಕೊಳ್ಳಲು ಹೇಳುತ್ತಾರೆ.
ಗಮನಿಸಿ: ಜೋಡಿಗಳು ಅದನ್ನು ಬರೆಯಲೂಬಹುದು. ಅಲ್ಲದೇ ರೋಚಕತೆ ಸೃಷ್ಟಿಸಲು ಯಾರು ಮೊದಲು ಬರೆಯುತ್ತಾರೆ ಎಂದು ಸ್ಪರ್ಧೆಯನ್ನೂ ಮಾಡಬಹುದು.
ಪದಾಧಿಕಾರಿಗಳು ಶಿಕ್ಷಕರನ್ನು ಬೆಂಬಲಿಸಬಹುದು ಮತ್ತು ಚರ್ಚೆಗಳನ್ನು ಹಂಚಿಕೊಳ್ಳುವುದಕ್ಕೆ ಅನುವು ಮಾಡಿಕೊಡಬಹುದು ಮತ್ತು ಚಟುವಚಿಕೆಯ ಪ್ರಮುಖ ಕಲಿಕಾ ವಿಷಯಗಳನ್ನು ಸಂಕ್ಷೇಪಗೊಳಿಸಬಹುದು.
- ಈ ಚಟುವಟಿಕೆಯು ನಮಗೆ ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಪ್ರಯೋಜನಗಳು ದೊರೆಯುವುದಿಲ್ಲ ಎಂಬುದನ್ನು ತಿಳಿದುಕೊಳ್ಳಲು ನೆರವಾಯಿತು. ಆದ್ದರಿಂದ ನಮ್ಮ ಸುತ್ತಮುತ್ತ ನಾವು ಅಸಮಾನತೆಯನ್ನು ಕಾಣುತ್ತೇವೆ.
- ಈ ಪ್ರಸ್ತುತಿಯಿಂದ ನಾವು ಯಾವ ರೀತಿಯಾಗಿ ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂಬುದನ್ನು 2-3 ಪಾಯಿಂಟ್‌ಗಳಲ್ಲಿ ಸಂಕ್ಷೇಪಗೊಳಿಸಿ. ಸಮಾನತೆ ಎಂದರೆ ಸಮಾಜದಲ್ಲಿ ಪ್ರತಿ ವ್ಯಕ್ತಿಯೂ ಸಮಾನ ಅವಕಾಶ ಮತ್ತು ಅನುಕೂಲವನ್ನು ಹೊಂದುವುದು. ನಾವು ಅರ್ಹರಾದಾಗ ಯಾವ ರೀತಿ ನಮ್ಮ ಮತ ಚಲಾಯಿಸಲು ನಮಗೆ ಅವಕಾಶ ದೊರೆಯುತ್ತದೆಯೋ ಅದೇ ರೀತಿ
ದೇಶ್ ಅಪ್ನಾಯೇ ಫಲಕ
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು.
- ಚಟುವಟಿಕೆ ಅಂಶಗಳನ್ನು ಮುಕ್ತಾಯಗೊಳಿಸುತ್ತಿರುವ ಪದಾಧಿಕಾರಿ. (ಬೇರೆ ಬೇರೆ ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಗಳನ್ನು ನೋಟ್ ಪುಸ್ತಕದ ಪುಟದಲ್ಲಿ ಬರೆಯಲು ಉತ್ತೇಜಿಸಿ)
- ಆ ತಿಂಗಳಲ್ಲಿ- ಯಾವುದೇ ವಿದ್ಯಾರ್ಥಿಯು ಈ ಕಾರ್ಯಗಳನ್ನು ಅಭ್ಯಸಿಸುವುದನ್ನು ಪದಾಧಿಕಾರಿಗಳು/ಶಿಕ್ಷಕರು ಗಮನಿಸಿದರೆ, ಅವರ ಹೆಸರನ್ನು ಫಲಕದಲ್ಲಿ ಸಮಾನತೆಯ ಚಾಂಪ್ ಎಂದು ಬರೆಯಬಹುದು. ತಿಂಗಳ ಕೊನೆಯಲ್ಲಿ, ಪ್ರತಿಯೊಬ್ಬರೂ ಅವರಿಗೆ ಚಪ್ಪಾಳೆ ತಟ್ಟಿ (ಮೌನ ಚಪ್ಪಾಳೆ) ಅವರ ಶ್ರಮವನ್ನು ಪ್ರಶಂಸಿಸಬಹುದು. (ಐಚ್ಚಿಕ – ಮಾಡಬೇಕೆ ಮಾಡಬಾರದೆ ಎಂಬುದನ್ನು ಶಿಕ್ಷಕರು ನಿರ್ಧರಿಸಬಹುದು)
ಗಮನಿಸಬೇಕಾದ ಅಂಶಗಳು
- ಪಾತ್ರಗಳು ಮತ್ತು ಗುಂಪುಗಳ ಸಂಖ್ಯೆಯನ್ನು ನಿರ್ಧರಿಸುವಾಗ ಸ್ಥಳದ ಲಭ್ಯತೆ ಮತ್ತು ಗುಂಪಿನ ಗಾತ್ರವನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಸೆಶನ್‌ಗೆ ಮುನ್ನ ಪಾತ್ರದ ಚೀಟಿಗಳನ್ನು ಸಿದ್ಧಪಡಿಸಿಕೊಳ್ಳಿ. ಟಾಸ್ಕ್ ಅನ್ನು ನೀವು ಪದಾಧಿಕಾರಿಗಳಿಗೆ ನಿಯೋಜಿಸಬಹುದು.
- ವಾತಾವರಣವು ಅನುಕೂಲಕರವಾಗಿದ್ದರೆ, ಸಾಧ್ಯವಿದ್ದರೆ ಮಾತ್ರ ಅತ್ತಿತ್ತ ಓಡಾಡಲು ಮತ್ತು ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸುಲಭವಾಗುವುದಕ್ಕಾಗಿ ಈ ಆಟವನ್ನು ನೀವು ಮೈದಾನದಲ್ಲಿ ಆಡಬಹುದು. ಸ್ಥಳದ ಲಭ್ಯತೆ ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಸ್ಥಳವನ್ನು ಆಯ್ಕೆ ಮಾಡುವ ಅವಕಾಶ ಹೊಂದಿರುತ್ತಾರೆ.
- ಗುಂಪಿನ ಸದಸ್ಯರು ತಮಗೆ ನಿಯೋಜಿಸಿದ ಪಾತ್ರದ ವೇಷ ಹಾಕುವ/ನಟಿಸುವ ಅಗತ್ಯವಿಲ್ಲ.
- ಅಗತ್ಯವಿದ್ದರೆ ಸುಲಭವಾಗಿ ಅರ್ಥವಾಗಲು ಈ ಹೇಳಿಕೆಗಳನ್ನು ನೀವು ಸ್ಥಳೀಯ ಭಾಷೆಯಲ್ಲಿ ಓದಬಹುದು. ಹೇಳಿಕೆಗಳ ವಿವರಗಳನ್ನು ಹೇಳದಿರಿ.
ಚಟುವಟಿಕೆ ಫೋಟೋಗಳನ್ನು ಹಂಚಿಕೊಳ್ಳುವುದು
- ಚಟುವಟಿಕೆ ಫೋಟೋಗಳಿಗಾಗಿ, ದಯವಿಟ್ಟು ಇವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ-
- ಕನಿಷ್ಠ ಎರಡು ವಿಭಿನ್ನ ಗುಂಪಿನ ಪರಿಸ್ಥಿತಿಗಳ ಸಮಾನತೆಯ ನಡಿಗೆಯ ಚಿತ್ರ. (2 ಫೋಟೋಗಳು)
- ಚಟುವಟಿಕೆಯನ್ನು ಮುಕ್ತಾಯಗೊಳಿಸುತ್ತಿರುವ ಪದಾಧಿಕಾರಿ ( 2 ಫೋಟೋಗಳು)
- ದೇಶ್ ಅಪ್ನಾಯೇ ಫಲಕ (2 ಫೋಟೋಗಳು)
ಅನುಬಂಧಗಳು
ಅನುಬಂಧ 1 – ರೋಲ್ ಕಾರ್ಡ್‌ಗಳು
ಪಾತ್ರಗಳು:
- ರೈತ
- ಪೋಲೀಸ್ ಇನ್ಸ್‌ಪೆಕ್ಟರ್
- ವೈದ್ಯರು
- ಕಸ ಗುಡಿಸುವವನು
- ವ್ಹೀಲ್ ಚೇರ್ ಬಳಕೆದಾರ.
- ಅನಾಥ ಮಗು
ಹೆಚ್ಚುವರಿ ಪಾತ್ರಗಳು:
- ಮಧ್ಯ ವಯಸ್ಕ ತಾಯಿ
- ತರಕಾರಿ ಮಾರಾಟಗಾರ
- ಉದ್ಯಮಿ
- ಚಿಂದಿ ಆಯುವವ.
- ಕೆಲಸದಾಕೆ
- ನ್ಯಾಯಾಧೀಶರು
- ಶಿಕ್ಷಕರು
- ಬಸ್ ಚಾಲಕ
- ವಕೀಲರು
- ರಾಜಕಾರಣಿ
ಅನುಬಂಧ 2 – ಹೇಳಿಕೆಗಳು
ಕನಿಷ್ಠ 8 ಹೇಳಿಕೆಗಳನ್ನು ಈ ಕ್ರಮದಲ್ಲಿ ಓದಿ, ಇತರವುಗಳನ್ನು ಸಮಯದ ಲಭ್ಯತೆಯ ಅನುಸಾರವಾಗಿ ಮಾಡಬಹುದು.
- ನಾನು ಉತ್ತಮ ಶಾಲೆಯಲ್ಲಿ 12ನೆ ಗ್ರೇಡ್ ಅನ್ನು ಪೂರ್ಣಗೊಳಿಸಬಹುದು/ಪೂರ್ಣಗೊಳಿಸಿದ್ದೇನೆ
- ನಾನು ಯಾವತ್ತೂ ಹಸಿವೆಯಿಂದ ಮಲಗುವುದಿಲ್ಲ.
- ನನ್ನ ಸಮುದಾಯದಲ್ಲಿ ನಾನು ಯಾವತ್ತೂ ಸುರಕ್ಷಿತ ಮತ್ತು ಭದ್ರತೆಯ ಭಾವವನ್ನು ಹೊಂದಿದ್ದೇನೆ.
- ನಾನು ಯಾವ ಕಾಲೇಜು/ಶಾಲೆ/ಉದ್ಯೋಗವನ್ನು ಆಯ್ಕೆ ಮಾಡಬೇಕೆಂಬ ಸ್ವಾತಂತ್ರ್ಯವನ್ನು ನನ್ನ ಹೆತ್ತವರು ನನಗೆ ನೀಡಿದ್ದಾರೆ.
- ಆಹಾರ, ವಸತಿ, ಪ್ರಯಾಣದಂತಹ ಮೂಲಭೂತ ಅಗತ್ಯಗಳಿಗಾಗಿ ನಾನು ಇತರರನ್ನು ಅವಲಂಬಿಸುತ್ತೇನೆ.
- ನನಗೆ ಬೇಕಾದಾಗ ನನ್ನ ಹೆತ್ತವರು/ಅಜ್ಜ ಅಜ್ಜಿಯನ್ನು ಮಾತನಾಡಿಸುವ ಅವಕಾಶ ನನಗೆ ದೊರೆಯುತ್ತದೆ.
- ನಾನು ಅನುಸರಿಸಲು ಬಯಸುವ ಯಾವುದೇ ಧರ್ಮವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನಾನು ಹೊಂದಿದ್ದೇನೆ.
- ನನ್ನ ಅಭಿಪ್ರಾಯವನ್ನು ನಾನು ಇತರರ ಮುಂದೆ ವ್ಯಕ್ತಪಡಿಸಬಲ್ಲೆ.
- ನನ್ನ ಆಯ್ಕೆಯ ಕೆಲಸವನ್ನು ಆರಿಸುವ ಸ್ವಾತಂತ್ರ್ಯವನ್ನು ನಾನು ಹೊಂದಿದ್ದೇನೆ.
- ನನ್ನ ಕುಟುಂಬಕ್ಕೆ ಉತ್ತಮ ಆಸ್ಪತ್ರೆ ಚಿಕಿತ್ಸೆಗೆ ನಾನು ಪಾವತಿಸಬಹುದು.
- ನಾನು ಸಾರ್ವಜನಿಕ ಸೇವೆಗಳನ್ನು ಆರಾಮವಾಗಿ ಬಳಸಬಹುದು.
- ನನ್ನ ಸಮುದಾಯ/ಸಮಾಜದಲ್ಲಿನ ನಿರ್ಧಾರ ತೆಗೆದುಕೊಳ್ಳುವಲ್ಲಿ ನಾನೂ ಹೇಳುತ್ತೇನೆ.
- ನನ್ನ ಸುತ್ತಲಿನ ಜನರಿಂದ ನಾನು ಕಿರುಕುಳ/ಬೆದರಿಕೆ/ಗೇಲಿಗೆ ಒಳಗಾಗುತ್ತೇನೆ.
- ನಾನು ಸ್ಮಾರ್ಟ್ ಫೋನ್ ಖರೀದಿಸಬಲ್ಲೆ
- ನನ್ನ ಚಹರೆಯಿಂದಾಗಿ ಜನರು ನನ್ನನ್ನು ಭಿನ್ನವಾಗಿ ಕಾಣುತ್ತಾರೆ.