KLE ಕನ್ನಡ ಗ್ರೇಡ್ 7 ಡಿಸೆಂಬರ್ ಚಟುವಟಿಕೆ-ಸ್ಥಳೀಯ ಸರ್ಕಾರ ಮತ್ತು ನಾವು
ಉದ್ದೇಶಗಳು
- ನಿರ್ದಿಷ್ಟ ಸಮಸ್ಯೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರದ ಪಾತ್ರವನ್ನು ತಿಳಿದುಕೊಳ್ಳುವುದು.
- ಸ್ಥಳೀಯ ಆಡಳಿತ ತನ್ನ ಪಾತ್ರವನ್ನು ಪೂರೈಸಲು ನಾಗರಿಕರು ಯಾವ ರೀತಿ ಸಹಾಯ ಮಾಡಬಹುದು ಎಂದು ತಿಳಿದುಕೊಳ್ಳುವುದು.
ಕೌಶಲಗಳು
ಸಂವಹನ, ಸಮಸ್ಯೆ ಪರಿಹಾರ
ಮೌಲ್ಯಗಳು
ನಾಗರಿಕ ಕರ್ತವ್ಯ, ಟೀಂವರ್ಕ್
ಬೇಕಾದ ಸಾಮಗ್ರಿಗಳು
ಪೇಪರ್ ಮತ್ತು ಪೆನ್ನುಗಳು
ಚಟುವಟಿಕೆ-ಪೂರ್ವ ಸಿದ್ಧತೆ
- ಚಟುವಟಿಕೆ ಭಾಗವನ್ನು ಮುಕ್ತಾಯಗೊಳಿಸಲು ಪದಾಧಿಕಾರಿಯು ಹೇಳಿಕೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.
- ಮುಖ್ಯ ಚಟುವಟಿಕೆಗೆ ಮೊದಲೇ ಚಟುವಟಿಕೆ ಪೂರ್ವ ಟಾಸ್ಕ್ ಪೂರ್ಣಗೊಂಡಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮಾಹಿತಿ ನೀಡಿ.
ಮುಖ್ಯ ಚಟುವಟಿಕೆ
ಬೇಕಾದ ಅಂದಾಜು ಸಮಯ– 30 ನಿಮಿಷಗಳು
ಗುಂಪು ಕಾರ್ಯ – 15 ನಿಮಿಷಗಳು
ಶಿಕ್ಷಕರು ತರಗತಿಯನ್ನು 4 ಗುಂಪುಗಳಾಗಿ ವಿಂಗಡಿಸುತ್ತಾರೆ. ನಂತರ ಅವರಿಗೆ ಈ ಕಥೆಯನ್ನು ಆಲಿಸಲು ಹೇಳಿ. (ಗಮನಿಸಿ - ಕಥೆಯನ್ನು ನಿರೂಪಿಸುವಾಗ ವಿದ್ಯಾರ್ಥಿಗಳಿಗೆ ತಮ್ಮ ಕಣ್ಣುಗಳನ್ನು ಮುಚ್ಚಿ ಕಥೆಯನ್ನು ಕಲ್ಪಿಸಿಕೊಳ್ಳಲು ಹೇಳಿ– ಐಚ್ಛಿಕ, ಶಿಕ್ಷಕರು ನಿರ್ಧರಿಸಬಹುದು.)
ಗ್ರೀನ್ ವ್ಯಾಲಿ ಸ್ಕೂಲ್ ಹತ್ತಿರ ಒಂದು ಸುಂದರ ಸ್ಥಳೀಯ ಪಾರ್ಕ್ ಇತ್ತು. ಈ ಪಾರ್ಕ್‌ನಲ್ಲಿ ಮಕ್ಕಳು ಆಟವಾಡುತ್ತಿದ್ದರು, ಕುಟಂಬಗಳು ಸಮಯ ಕಳೆಯಲು, ಹಿರಿಯರು ನಡಿಗೆ ಮಾಡಲು ಇತ್ಯಾದಿಗಾಗಿ ಬರುತ್ತಿದ್ದರು. ಈ ಸ್ಥಳೀಯ ಪಾರ್ಕ್‌ನಲ್ಲಿ ಒಂದು ದೊಡ್ಡ ಸಮಸ್ಯೆ ಇತ್ತು, ಇದರ ಪ್ರವೇಶದ್ವಾರದಲ್ಲಿ ಕಸದ ರಾಶಿಯನ್ನು ತುಂಬಿಸಲಾಗುತ್ತಿತ್ತು. ಪಾರ್ಕ್ ಅನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿಡಲು ತಮ್ಮ ಸ್ಥಳೀಯ ಆಡಳಿತ ತನ್ನ ಪಾತ್ರವಹಿಸಿ ಇಡೀ ಪಾರ್ಕ್ ಅನ್ನು ಸ್ವಚ್ಛಗೊಳಿಸಿತು. ಆದರೆ ದಿನಕಳೆದಂತೆ, ಮತ್ತೆ ಕಸದ ರಾಶಿ ತುಂಬಿ ದುರ್ವಾಸನೆ ಬರಲಾರಂಭಿಸಿತು. ಪಾರ್ಕ್ ಈಗ ಮತ್ತದೇ ಸ್ಥಿತಿಯಲ್ಲಿದೆ. ಈ ಶಾಲೆಯ 7ನೇ ಗ್ರೇಡ್ ವಿದ್ಯಾರ್ಥಿಗಳು ಈ ಪಾರ್ಕ್‌ನ ಪರಿಸ್ಥಿತಿಯ ಕುರಿತು ಚಿಂತಿತರಾಗಿದ್ದು ಪರಿಸ್ಥಿತಿಯನ್ನು ಉತ್ತಮಗೊಳಿಸುವ ಅಭಿಲಾಷೆ ಹೊಂದಿದ್ದರು.
ಇದು ಶಾಲೆಯ ಹತ್ತಿರದ ನಿಮ್ಮ ಪ್ರದೇಶದ ಸಮಸ್ಯೆಯಾಗಿದ್ದು ನೀವು ಈ 7ನೇ ಗ್ರೇಡ್ ಎಂದು ಕಲ್ಪಿಸಿಕೊಳ್ಳಿ. ಈಗ ಈ ಎರಡು ಪ್ರಶ್ನೆಗಳ ಮೇಲೆ ನೀವು ಎರಡು ಗುಂಪುಗಳಾಗಿ ಕೆಲಸ ಮಾಡಿ ಪ್ರಸ್ತುತಿಯೊಂದನ್ನು ಸಿದ್ಧಪಡಿಸಬೇಕು(ಮೌಖಿಕ/ಲಿಖಿತ/ಡ್ರಾಯಿಂಗ್ ಮೂಲಕ) ಸಮಸ್ಯೆಗಳ ಪಟ್ಟಿಯನ್ನು ಅನುಬಂಧ 1 ರಲ್ಲಿ ನೀಡಲಾಗಿದೆ.
- ಈ ಸಮಸ್ಯೆಯನ್ನು ಪರಿಹರಿಸಲು ಆಡಳಿತಕ್ಕೆ ಯಾಕೆ ಕಷ್ಟವಾಗುತ್ತಿದೆ?
- ಒಬ್ಬ ನಾಗರಿಕರಾಗಿ ಈ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ಆಡಳಿತಕ್ಕೆ ನೀವು ಯಾವ ರೀತಿ ನೆರವಾಗಬಹುದು?
[ಗಮನಿಸಿ – ಪ್ರಸ್ತುತಪಡಿಸಲು ಕೆಲವೊಂದು ವಿಚಾರಗಳು- ಆಡಳಿತ ಅಧಿಕಾರಿ ಮತ್ತು ನಾಗರಿಕರ ನಡುವೆ ಕಿರುನಾಟಕ/ಪರಸ್ಪರ ಸಂವಹನ (ಸ್ಥಳೀಯ ಭಾಷೆ), ಅಥವಾ ಕಥೆಯನ್ನು ರಚಿಸುವುದು ಅಥವಾ ನೋಟ್ ಪುಸ್ತಕದಲ್ಲಿ ಚಿತ್ರ ಬಿಡಿಸಿ ಪ್ರಸ್ತುತಿ ಇತ್ಯಾದಿ- ಇದನ್ನು ಹೇಗೆ ಪ್ರಸ್ತುತಪಡಿಸುವುದು ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ, 1 ಗುಂಪು ಕೇವಲ 1 ವಿಧಾನದ ಪ್ರಸ್ತುತಿಯನ್ನು ಮಾತ್ರವೇ ಮಾಡಬಹುದು . (ವಿದ್ಯಾರ್ಥಿಗಳು ಸಂಭಾಷಣೆಗಳನ್ನು ಮಾಡುವಾಗ ತರಗತಿಯ ಗೌರವಕ್ಕೆ ಧಕ್ಕೆ ಬಾರದಂತೆ ಸ್ಥಳೀಯ ಭಾಷೆಯನ್ನು ಬಳಸಿ ಹಾಸ್ಯದ ಸನ್ನಿವೇಶಗಳನ್ನು ತರಬಹುದು)
ಸಮಯದ ಅಭಾವವಿದ್ದರೆ, ಗುಂಪುಗಳು ಸಂಭಾವ್ಯ ಕಾರಣಗಳು ಮತ್ತು ಕಾರ್ಯಗಳನ್ನು ಚರ್ಚಿಸಿ ತಮ್ಮ ಟಿಪ್ಪಣಿಗಳೊಂದಿಗೆ ಪ್ರಸ್ತುತಪಡಿಸಬಹುದು.
ಪ್ರಸ್ತುತಿ ಸಮಯ – 15 ನಿಮಿಷಗಳು
- ಶಿಕ್ಷಕರು ಪ್ರತಿ ಗುಂಪು ಮುಂದೆ ಬಂದು ಪ್ರಸ್ತುತಪಡಿಸಲು ಆಹ್ವಾನಿಸುವ ಮೂಲಕ ಪ್ರಾರಂಭಿಸುತ್ತಾರೆ.
- ಪ್ರತಿ ಗುಂಪಿಗೆ ಪ್ರಸ್ತುತಪಡಿಸಲು 2-3 ನಿಮಿಷಗಳು ದೊರೆಯುತ್ತದೆ
ಗುಂಪು ಪ್ರಸ್ತುತಿಗಾಗಿ ಸಿದ್ಧಪಡಿಸಿದ ಟಿಪ್ಪಣಿಗಳನ್ನು ಪದಾಧಿಕಾರಿಗಳು ದೇಶ್ ಅಪ್ನಾಯೇ ಫಲಕದಲ್ಲಿ ಹಾಕುತ್ತಾರೆ.
ಚಟುವಟಿಕೆಯನ್ನು ಮುಕ್ತಾಯಗೊಳಿಸಿ
ಗಮನಿಸಿ - ಸಮಯವಿದ್ದರೆ, ಶಿಕ್ಷಕರು ಪದಾಧಿಕಾರಿಗಳಿಗೆ ಕೆಳಗೆ ಉಲ್ಲೇಖಿಸಿದಂತೆ ಚಟುವಟಿಕೆಯನ್ನು ಮುಕ್ತಾಯಗೊಳಿಸುವ ಅವಕಾಶ ನೀಡಬಹುದು. ಒಂದು ವೇಳೆ ಸಮಯದ ಅಭಾವವಿದ್ದರೆ, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ- ಅವರು ಈ ಚಟುವಟಿಕೆಯಿಂದ ಏನು ಕಲಿತುಕೊಂಡರು ಎಂಬುದನ್ನು ಪ್ರಶ್ನಿಸಲು ಆಹ್ವಾನಿಸಿ.
ಪದಾಧಿಕಾರಿಗಳು ತರಗತಿಯನ್ನು ಗುಂಪುಗಳಾಗಿ ವಿಭಾಗಿಸುತ್ತಾರೆ-ಒಂದು ಆಡಳಿತ ಗುಂಪಾಗಿದ್ದು ಇದನ್ನು ಅಧ್ಯಕ್ಷರು ಮುನ್ನಡೆಸುತ್ತಾರೆ ಇನ್ನೊಂದು ನಾಗರಿಕರ ಗುಂಪಾಗಿದ್ದು ಇದನ್ನು ಉಪಾಧ್ಯಕ್ಷರು ಮುನ್ನಡೆಸುತ್ತಾರೆ. ಪ್ರತಿ ಸಮಸ್ಯೆಗೆ, ಆಡಳಿತ ಗುಂಪು ಈ ಸಮಸ್ಯೆಗೆ ಯಾವ ಪಾತ್ರ ವಹಿಸಲಿದೆ ಎಂಬುದನ್ನು ಹಂಚಿಕೊಂಡರೆ ನಾಗರಿಕ ಗುಂಪು ಈ ಪಾತ್ರವನ್ನು ಪೂರೈಸಲು ತಾವು ಆಡಳಿತಕ್ಕೆ ಹೇಗೆ ನೆರವಾಗುತ್ತಾರೆ ಎಂಬುದನ್ನು ಹಂಚಿಕೊಳ್ಳುತ್ತದೆ.
ಸಮಸ್ಯೆಯನ್ನು ಆರಿಸಿ ಮತ್ತು ಪ್ರತಿ ಗುಂಪಿಗೆ ತಮ್ಮ ಪಾತ್ರವನ್ನು ಚರ್ಚಿಸಲು 1-2 ನಿಮಿಷಗಳನ್ನು ನೀಡಿ, (ಈ ರೀತಿಯಾಗಿ ಕನಿಷ್ಠ 3-4 ಸಮಸ್ಯೆಗಳು ಒಳಗೊಂಡಿರಲಿ)
- ನಿಮ್ಮ ಹಳ್ಳಿಯಲ್ಲಿನ ಬೀದಿ ನಾಯಿಗಳು
- ನಿಮ್ಮ ಮನೆಯ ನಲ್ಲಿಗೆ ನೀರು ಬರುವ ನೀರಿನ ಪೈಪ್‌ಲೈನ್ ಒಡೆದಿರುವುದು
- ಹಳ್ಳಿಯಲ್ಲಿ ಮಕ್ಕಳಿಗೆ ಆಟವಾಡಲು ಮೈದಾನ ಇಲ್ಲದಿರುವುದು
- ನಿಮ್ಮ ಸ್ಥಳಕ್ಕೆ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದಿರುವುದು ನಿಮ್ಮ ಪ್ರದೇಶದಲ್ಲಿ ಮಲೇರಿಯಾ ಹರಡುವಿಕೆ (ವಿದ್ಯಾರ್ಥಿಗಳಿಗೆ ತಿಳಿದಿರುವ ಇತರ ಯಾವುದೇ ರೋಗಗಳು)
- ಹೊಸ ರಸ್ತೆಗಳನ್ನು ನಿರ್ಮಿಸುವುದು
- ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು
ಶಿಕ್ಷಕರು ಪ್ರಮುಖ ಕಲಿಕೆಗಳನ್ನು ಹೇಳುತ್ತಾ ಮುಕ್ತಾಯಗೊಳಿಸುತ್ತಾರೆ-
- ಸ್ಥಳೀಯ ಆಡಳಿತದ ಪಾತ್ರ ಮುಖ್ಯವಾದುದು; ಅವರು ಜನರ ಅಗತ್ಯಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸಬೇಕು.
- ನಾಗರಿಕರ ಕರ್ತವ್ಯಗಳನ್ನು ಪಾಲಿಸುವ ಮೂಲಕ ಸರ್ಕಾರವು ತನ್ನ ಪಾತ್ರವನ್ನು ಪೂರೈಸಲು ನಾಗರಿಕರು ಒಟ್ಟಾಗಿ ಕೆಲಸ ಮಾಡುವುದು ಮತ್ತು ಬೆಂಬಲಿಸುವುದು ಮುಖ್ಯ, ಸರ್ಕಾರವು ಅಗತ್ಯವಿರುವ ಕ್ರಮವನ್ನು ಕೈಗೊಳ್ಳುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ, ಸಮುದಾಯದ ಸುಧಾರಣೆಗಾಗಿ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಿ ಮತ್ತು ಸ್ವಯಂಪ್ರೇರಿತರಾಗಿ ಒಟ್ಟಾಗಿ ಕಾರ್ಯನಿರ್ವಹಿಸಿ.
ದೇಶ್ ಅಪ್ನಾಯೇ ಫಲಕ
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು.
- ಗುಂಪು ಪ್ರಸ್ತುತಿಗಳು
ಗಮನಿಸಬೇಕಾದ ಅಂಶಗಳು
- ಚಟುವಟಿಕೆಯ ಸಂದರ್ಭದಲ್ಲಿ ಸ್ಥಳೀಯ ಆಡಳಿತಕ್ಕೆ ಯಾವುದೇ ಕ್ಷೇತ್ರ ಭೇಟಿ ಇರುವುದಿಲ್ಲ. ಇದು ಚಟುವಟಿಕೆಯಲ್ಲಿ ಒಳಗೊಂಡಿರುವುದಿಲ್ಲ.
- ಚಟುವಟಿಕೆಯ ಸಂದರ್ಭದಲ್ಲಿ ಪರಿಹಾರವನ್ನು ಘೋಷಿಸುವಾಗ ಚಪ್ಪಾಳೆ ತಟ್ಟದಿರಿ ಯಾಕೆಂದರೆ, ಇದು ಇತರ ವಿದ್ಯಾರ್ಥಿಗಳಿಗೆ ತೊಂದರೆ ಉಂಟುಮಾಡುತ್ತದೆ.
ಚಟುವಟಿಕೆಯ ಫೋಟೋಗಳನ್ನು ಹಂಚಿಕೊಳ್ಳುವುದು
ಎಂಗೇಜ್‌ಮೆಂಟ್ ಆಫೀಸರ್‌ಗಳೊಂದಿಗೆ ಹಂಚಿಕೊಳ್ಳಬೇಕಿರುವ ಚಟುವಟಿಕೆ ಚಿತ್ರಗಳಿಗಾಗಿ ದಯವಿಟ್ಟು ಇವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ
- ಮುಖ್ಯ ಚಟುವಟಿಕೆಯ ಫೋಟೋಗಳು (2 ಫೋಟೋಗಳು)
- ಸೆಶನ್ ಮುಕ್ತಾಯಗೊಳಿಸುತ್ತಿರುವ ಪದಾಧಿಕಾರಿಗಳು. (2 ಫೋಟೋಗಳು)
- ದೇಶ್ ಅಪ್ನಾಯೇ ಫಲಕ (2 ಫೋಟೋಗಳು)
ಉಲ್ಲೇಖ ವಿಭಾಗ
ಅನುಬಂಧ 1 –
- ರಸ್ತೆಗಳಲ್ಲಿ ಬೀದಿದೀಪಗಳಿರುವುದಿಲ್ಲ – ರಸ್ತೆಯಲ್ಲಿ ಬೀದಿ ದೀಪಗಳು ಇರುವುದಿಲ್ಲ, ಇದರಿಂದ ಆ ಸ್ಥಳದಲ್ಲಿ ವಾಹನ ಓಡಿಸುವಾಗ ಜನರಿಗೆ ಅಪಘಾತಗಳಾಗುವುದು, ಪ್ರಾಣಿಗಳಿಗೆ ಗಾಯಗಳಾಗುವುದು ಇತ್ಯಾದಿ ತೊಂದರೆಗಳು ಉಂಟಾಗುತ್ತಿವೆ.
- ಸ್ಥಳೀಯ ಪಾರ್ಕ್‌ನ ಕಳಪೆ ನಿರ್ವಹಣೆ- ಮಕ್ಕಳಿಗೆ ಆಟವಾಡಲು, ಜನರಿಗೆ ವ್ಯಾಯಾಮ ಮಾಡಲು ಇತ್ಯಾದಿಗಳಿಗಾಗಿ ಇರುವ ಏಕೈಕ ಸ್ಥಳವಾದ ಈ ಸ್ಥಳೀಯ ಪಾರ್ಕ್ ಅತ್ಯಂತ ಕಳಪೆ ಪರಿಸ್ಥಿತಿಯಲ್ಲಿದೆ. ಮುರಿದ ಬೆಂಚುಗಳು, ಗೇಟುಗಳು, ಕಸದ ರಾಶಿಗಳಿಂದ ದುರ್ವಾಸನೆ, ಅನೈರ್ಮಲ್ಯ ಪರಿಸ್ಥಿತಿ ಇತ್ಯಾದಿಗಳು ಗಮನಹರಿಸಬೇಕಾದ ಕೆಲವೊಂದು ಸಮಸ್ಯೆಗಳಾಗಿವೆ.
- ನೀರಿನ ಅಭಾವ – ಈ ಪ್ರದೇಶದಲ್ಲಿ ನೀರಿನ ಕೊರತೆ ಇದ್ದು ಸ್ವಚ್ಛತೆ, ಅಡುಗೆ ಇತ್ಯಾದಿ ಮೂಲ ಕೆಲಸಗಳಿಗೂ ಸಮಸ್ಯೆಯಾಗುತ್ತಿದೆ.
- ತುಂಬಿ ಹರಿಯುವ ಗಟಾರ-ಕೊಳಕು ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಅನೈರ್ಮಲ್ಯ ಪರಿಸ್ಥಿತಿ ಉಂಟಾಗುತ್ತಿದೆ.
ಗಮನಿಸಿ: ಇವುಗಳಲ್ಲದೇ ತಾವು ಕಾಣುವ ಯಾವುದೇ ಇತರ ಸ್ಥಳೀಯ ಸಮಸ್ಯೆಗಳಿದ್ದರೆ, ಶಿಕ್ಷಕರು ಅವುಗಳನ್ನೂ ಸೇರಿಸಬಹುದು. ಮಕ್ಕಳಿಗೆ ಅರ್ಥವಾಗುವ ಭಾಷೆಗೆ ಇದನ್ನು ಅನುವಾದಿಸಬಹುದು.