KLE ಕನ್ನಡ ಗ್ರೇಡ್ 6 ಜನವರಿ ಚಟುವಟಿಕೆ – ನಿಮ್ಮ ಸ್ಥಳೀಯ ಆಡಳಿತವನ್ನು ತಿಳಿದುಕೊಳ್ಳಿ
ಉದ್ದೇಶಗಳು
- ಸ್ಥಳೀಯ ಆಡಳಿತ ರಚನೆಯನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
- ಸ್ಥಳೀಯ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಸರ್ಕಾರದ ರಚನೆ ಮತ್ತು ಪಾತ್ರವನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
ಫಲಿತಾಂಶಗಳು
- ತಮ್ಮ ಸ್ವಂತ ಅಭಿಪ್ರಾಯದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಸ್ಥಳೀಯ ಆಡಳಿತದ ರಚನೆ ಹಾಗೂ ಪಾತ್ರವನ್ನು ವಿವರಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ.
ಕೌಶಲ್ಯಗಳು ಮತ್ತು ಮೌಲ್ಯಗಳು
ಕೌಶಲ್ಯಗಳು - ಸಂವಹನ, ಸಹಯೋಗ ಮತ್ತು ಸೃಜನಶೀಲತೆ, ಸಮಸ್ಯೆ ಪರಿಹಾರ
ಮೌಲ್ಯಗಳು – ಜವಾಬ್ದಾರಿ, ಕಾಳಜಿ
ತರಗತಿಗಳ ಅವಲೋಕನ
ಕ್ರ. ಸಂ | ತರಗತಿಯ ವಿವರಗಳು | ಬೇಕಾದ ಅಂದಾಜು ಸಮಯ |
1 | ಹಂತ 1: ಪರಿಚಯ
ಹಂತ 2: ಗುಂಪು ಚಟುವಟಿಕೆ |
45 ನಿಮಿಷಗಳು |
2 | ಹಂತ 3: ಗುಂಪು ಪ್ರಸ್ತುತಿ
ಹಂತ 4: ಚಟುವಟಿಕೆಯ ವಿವರಣೆ |
45 ನಿಮಿಷಗಳು |
ಬೇಕಾದ ಸಾಮಗ್ರಿಗಳು
ನೋಟ್ಬುಕ್ ಗಳು, ಪೆನ್ನುಗಳು
ಚಟುವಟಿಕೆಯ ಹಂತಗಳು
ತರಗತಿ 1: 45 ನಿಮಿಷಗಳ ತರಗತಿಯ ಹಂತ 1-2
ಹಂತ 1 - ಪರಿಚಯ
ಸಮಯ: 10-12 ನಿಮಿಷಗಳು
ನಮ್ಮ ಸ್ಥಳೀಯ ಆಡಳಿತಕ್ಕೆ ಯಾವ ಸಮಸ್ಯೆಗಳು/ದೂರುಗಳು ಸಂಬಂಧಿಸಿರಬಹುದು ಎಂಬುದನ್ನು ನೀಡಿದ ಸುಳಿವುಗಳನ್ನು ಬಳಸಿಕೊಂಡು ಗುರುತಿಸುವಂತೆ ವಿದ್ಯಾರ್ಥಿಗಳಿಗೆ ಹೇಳಿ.
ನಾವು ಎಸೆಯುವ ಕಸಗಳನ್ನು ಸ್ವಚ್ಛಗೊಳಿಸುವುದು, ಮನೆ ತೆರಿಗೆ ಸಂಗ್ರಹಿಸುವುದು, ಬೀದಿದೀಪಗಳನ್ನು ನಿರ್ವಹಿಸುವುದು ಇತ್ಯಾದಿ ಅನೇಕ ಪಾತ್ರಗಳನ್ನು ನಿರ್ವಹಿಸಲು ಪ್ರತಿ ಗ್ರಾಮ ಮತ್ತು ನಗರದಲ್ಲಿ ಸ್ಥಳೀಯ ಆಡಳಿತವಿರಬೇಕು ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೇಳಬಹುದು.
ಸ್ಥಳೀಯ ಆಡಳಿತದ ಕೆಲವು ಅನುಕೂಲಗಳು:
- ನಾಗರಿಕರು ಸುಲಭವಾಗಿ ಸಂಪರ್ಕಿಸಬಹುದು. ಮತ್ತು ಅವರು ನೇರವಾಗಿ ಸ್ಥಳೀಯ ಆಡಳಿತಕ್ಕೆ ಹೋಗಿ ಸಮಸ್ಯೆಗಳನ್ನು ಹೇಳಬಹುದು.
- ಅವರು ಸಹ ಅದೇ ಪ್ರದೇಶಕ್ಕೆ ಸೇರಿದವರೇ ಆಗಿರುವುದರಿಂದ ಜನರ ಅಗತ್ಯಗಳನ್ನು ಪೂರೈಸಲು ಸ್ಥಳೀಯ ಜ್ಞಾನ ಮತ್ತು ತರಬೇತಿಯನ್ನು ಹೊಂದಿರುತ್ತಾರೆ
, ಇಂದಿನ ಚಟುವಟಿಕೆಯ ತರಗತಿಯಲ್ಲಿ ನೀರಿನ ಕೊರತೆಯ ಸಂದರ್ಭದಲ್ಲಿ ಸ್ಥಳೀಯ ಆಡಳಿತದ ಕಾರ್ಯಗಳ ಕುರಿತು ನಾವು ಇನ್ನಷ್ಟು ತಿಳಿದುಕೊಳ್ಳಲಿದ್ದೇವೆ ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ.
ಹಂತ 2: ಗುಂಪು ಚಟುವಟಿಕೆ
ಸಮಯ: 30 ನಿಮಿಷ
1. ತರಗತಿಯನ್ನು 4 ಗುಂಪುಗಳಾಗಿ ವಿಂಗಡಿಸಿ. ಎರಡು ಗುಂಪುಗಳು ಗ್ರಾಮೀಣ ಪ್ರದೇಶ ಮತ್ತು ಎರಡು ಗುಂಪುಗಳು ನಗರ ಪ್ರದೇಶಗಳ ಸ್ಥಳೀಯ ಆಡಳಿತ ವ್ಯವಸ್ಥೆಯಾಗಿ ಕೆಲಸ ಮಾಡುತ್ತವೆ. ಶಿಕ್ಷಕರು ಪ್ರತಿ ಉಪಗುಂಪಿಗೆ 2-2 ಪ್ರಶ್ನೆಗಳನ್ನು ವಿಂಗಡಿಸಬಹುದು.
2. ಇಂದು ನಾವು ‘ನೀರಿನ ಕೊರತೆ’ ಸಮಸ್ಯೆಯ ಮೇಲೆ ಕೆಲಸ ಮಾಡುತ್ತೇವೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿ. ಅನುಬಂಧ 1 ರಲ್ಲಿ ನೀಡಲಾದ ಸಮಸ್ಯೆ ಕಾರ್ಡ್ ಅನ್ನು ಓದಿ.
3. ಅನುಬಂಧ 2 ರಲ್ಲಿ ನೀಡಲಾದ ಕರಪತ್ರದ ಸಹಾಯದಿಂದ ಈ ಸಮಸ್ಯೆಯ ಸಂದರ್ಭದಲ್ಲಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಕಾರ್ಯವನ್ನು ಗುಂಪುಗಳಿಗೆ ನಿಯೋಜಿಸಿ.(ಶಿಕ್ಷಕರು, ವಿದ್ಯಾರ್ಥಿಗಳ ಸಹಾಯದೊಂದಿಗೆ ಕೈಬರಹದ ಕರಪತ್ರವನ್ನು ರಚಿಸಬಹುದು ಅಥವಾ ಪ್ರಿಂಟ್ ತೆಗೆಯಬಹುದು)
- ಸ್ಥಳೀಯ ಆಡಳಿತವು ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ನೀವೇಕೆ ಯೋಚಿಸುತ್ತೀರಿ?
- ನೀರಿನ ಸಮಸ್ಯ ಈ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ಆಡಳಿತ ಏನು ಮಾಡಬಹುದು?
- ಯಾವ ಇಲಾಖೆ/ವ್ಯಕ್ತಿಯು ಈ ಸಮಸ್ಯೆಯನ್ನು ಪರಿಹರಿಸುತ್ತಾರೆಂದು ನೀವು ಯೋಚಿಸುತ್ತೀರಿ?
- ನೀವು ಅವರನ್ನು ಹೇಗೆ ಸಂಪರ್ಕಿಸಬಹುದು, ಅವರನ್ನು ಸಂಪರ್ಕಿಸುವ ವಿಧಾನಗಳು ಮತ್ತು ಲಭ್ಯವಿರುವ ಆಯ್ಕೆಗಳು ಯಾವುವು?
4, ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು 20 ನಿಮಿಷಗಳ ಕಾಲಾವಕಾಶವಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿ.
ಹೋಮ್ವರ್ಕ್:
ಸ್ಥಳೀಯ ಸರ್ಕಾರಿ ಕಚೇರಿಗೆ ಭೇಟಿ ನೀಡುವ ಮೂಲಕ ಅಥವಾ ನಿಮ್ಮ ಪೋಷಕರೊಂದಿಗೆ ಚರ್ಚಿಸುವ ಮೂಲಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಮತ್ತಷ್ಟು ಸಂಶೋಧನೆ ಮಾಡಲು ವಿದ್ಯಾರ್ಥಿಗಳಿಗೆ ಹೇಳಿ ಮತ್ತು ತಾವು ಪಡೆದ ಉತ್ತರಗಳನ್ನು ಮುಂದಿನ ತರಗತಿಯಲ್ಲಿ ಅದೇ ಗುಂಪುಗಳಾಗಿ ಪ್ರಸ್ತುತಪಡಿಸಬೇಕು.
ಇದರ ಕುರಿತಾಗಿ ಇನ್ನಷ್ಟು ತಿಳಿದುಕೊಳ್ಳಲು ಶಾಲೆ/ಶಿಕ್ಷಕರು ಸರ್ಕಾರಿ ಕಚೇರಿಗೆ ಭೇಟಿಯನ್ನು ಆಯೋಜಿಸಬಹುದು, ಮತ್ತು ಪ್ರತಿ ಗುಂಪಿನಿಂದ ಕೆಲವು ಆಯ್ದ ಸದಸ್ಯರು ಪ್ರತ್ಯಕ್ಷ ಅನುಭವವನ್ನು ಪಡೆಯಲು ಶಿಕ್ಷಕರೊಂದಿಗೆ ಹೋಗಬಹುದು. (ಐಚ್ಛಿಕ)
ಗಮನಿಸಿ: ಚಟುವಟಿಕೆಯ ದಿನದಂದು ಪೂರ್ಣಗೊಳಿಸಿದ ಹೋಮ್ವರ್ಕ್ ಅನ್ನು ತರುವ ಸಲುವಾಗಿ ಮುಂದಿನ ತರಗತಿಯ ದಿನಾಂಕವನ್ನು ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿ.
ತರಗತಿ 2: 45 ನಿಮಿಷಗಳ ತರಗತಿಯ ಹಂತ 3-4
ಪುನರ್ಮನನ: (5 ನಿಮಿಷ)
ಹೋಮ್ವರ್ಕ್ನ ಕುರಿತಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವುದರ ಮೂಲಕ ಶಿಕ್ಷಕರು ತರಗತಿಯನ್ನು ಪ್ರಾರಂಭಿಸಬಹುದು.
ಹಂತ 3: ಗುಂಪು ಪ್ರಸ್ತುತಿ
ಈ ತರಗತಿಗೆ ಬೇಕಾದ ಅಂದಾಜು ಸಮಯ: 30 ನಿಮಿಷಗಳು.
- ತಮ್ಮ ಅನುಭವವನ್ನು ಹಂಚಿಕೊಳ್ಳಲು ಶಿಕ್ಷಕರು ಗುಂಪುಗಳನ್ನು ಒಂದೊಂದಾಗಿ ತರಗತಿಗೆ ಕರೆಯುತ್ತಾರೆ. ಶಿಕ್ಷಕರು ಮೊದಲು ಎರಡೂ ಗ್ರಾಮೀಣ ಗುಂಪುಗಳನ್ನು ಆಹ್ವಾನಿಸಿ ಮತ್ತು ನಂತರ ನಗರ ಪ್ರದೇಶದ ಗುಂಪನ್ನು ಕರೆಯಬಹುದು. (ಇದನ್ನು ಅದಲು ಬದಲು ಕೂಡಾ ಮಾಡಬಹುದು – ಇದು ಶಿಕ್ಷಕರ ಆಯ್ಕೆಯಾಗಿದೆ)
- ಪ್ರಸ್ತುತಪಡಿಸಲು ಪ್ರತಿ ಗುಂಪು 4-5 ನಿಮಿಷಗಳು ಇರುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿ.
- ಪ್ರತಿ ಗುಂಪು ಸಹ ತಾವು ತಿಳಿದುಕೊಂಡ ಉತ್ತರಗಳನ್ನು ನೋಟೀಸ್ ಬೋರ್ಡ್ನಲ್ಲಿ ಪ್ರದರ್ಶಿಸಬಹುದು. ಆಗ ಪ್ರತಿಯೊಬ್ಬರೂ ಅದನ್ನು ನೋಡಬಹುದು.
ಹಂತ 4: ಚಟುವಟಿಕೆಯ ವಿವರಣೆ
ಬೇಕಾದ ಅಂದಾಜು ಸಮಯ: 10 ನಿಮಿಷಗಳು
ಚಟುವಟಿಕೆಗಳನ್ನು ವಿವರಿಸಲು ವಿದ್ಯಾರ್ಥಿಗಳಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ – ಅಂದರೆ ವಿದ್ಯಾರ್ಥಿಗಳು ಈ ಕೆಳಗಿನ ವಿಷಯಗಳನ್ನು ಹಂಚಿಕೊಳ್ಳಬಹುದು.
- ಈ ಚಟುವಟಿಕೆಯಿಂದ ನೀವು ಏನನ್ನು ಕಲಿತಿದ್ದೀರಿ?
- ಈ ಚಟುವಟಿಕೆಯಲ್ಲಿ ನಿಮಗೆ ಹೆಚ್ಚು ಖುಷಿಕೊಟ್ಟಿದ್ದು ಏನು?
- ಯಾವುದೇ ಸ್ಥಳೀಯ ಸಮಸ್ಯೆಯನ್ನು ಪರಿಹರಿಸಲು ಅಸ್ತಿತ್ವದಲ್ಲಿರುವ ರಚನೆಯಲ್ಲಿ ಸರ್ಕಾರವು ಯಾವ ಪಾತ್ರವನ್ನು ವಹಿಸುತ್ತದೆ?
ರಿಫ್ಲೆಕ್ಷನ್ ಶೀಟ್ಗಳು ಮತ್ತು ಪ್ರತಿಕ್ರಿಯೆ ಫಾರ್ಮ್ಗಳು
ಪ್ರತಿಕ್ರಿಯೆ ಫಾರ್ಮ್ಗಳನ್ನು ದಯವಿಟ್ಟು ಶಿಕ್ಷಕರು ಭರ್ತಿ ಮಾಡಿ ಮತ್ತು ರಿಫ್ಲೆಕ್ಷನ್ ಶೀಟ್ಗಳನ್ನು ಭರ್ತಿ ಮಾಡಲು ವಿದ್ಯಾರ್ಥಿಗಳಿಗೆ ಹೇಳಿ.
ಪ್ರಿಂಟ್ ವಿಭಾಗ
ಅನುಬಂಧ 1 – ಸಮಸ್ಯೆ ಕಾರ್ಡ್ಗಳು
ಅನುಬಂಧ 2 – ಪರಾಮರ್ಶನಾ ಕರಪತ್ರ
ನಗರ ಪ್ರದೇಶಗಳ ಕುರಿತು ಕಾರ್ಯನಿರ್ವಹಿಸುತ್ತಿರುವ ತಂಡಕ್ಕೆ – ಪಂಚಾಯತಿ ಕರಪತ್ರವನ್ನು ಹಂಚಿ
ಗ್ರಾಮೀಣ ಪ್ರದೇಶಗಳ ಕುರಿತು ಕಾರ್ಯನಿರ್ವಹಿಸುತ್ತಿರುವ ತಂಡಕ್ಕೆ– ನಗರಸಭೆ ಕರಪತ್ರವನ್ನು ಹಂಚಿ