ಕರ್ನಾಟಕ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಗ್ರೇಡ್ 6 ಜನವರಿ ಚಟುವಟಿಕೆ – ಲೋಡ್ ಅನ್ನು ಹಂಚಿಕೊಳ್ಳಿ
ಉದ್ದೇಶಗಳು
- ಮನೆಯಲ್ಲಿ ಜವಾಬ್ದಾರಿಯನ್ನು ಹಂಚಿಕೊಳ್ಳುವುದರ ಮಹತ್ವದ ಅನುಭವ ಪಡೆಯುವುದು.
- ಕರ್ತವ್ಯವು ಮನೆಯಲ್ಲಿ ಶುರುವಾದ ನಂತರ ಸಮಾಜಕ್ಕೆ ಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು.
ಕೌಶಲ್ಯಗಳು
ಸಂವಹನ, ಸಹಭಾಗಿತ್ವ
ಮೌಲ್ಯಗಳು
ಜವಾಬ್ದಾರಿಯನ್ನು ಹಂಚಿಕೊಳ್ಳುವುದು
ಬೇಕಾದ ಸಾಮಗ್ರಿಗಳು
ನೋಟ್ಬುಕ್ ಗಳು, ಪೆನ್ ಗಳು
ಚಟುವಚಿಕೆ ಪೂರ್ವ ಸಿದ್ಧತೆ – ಮುಖ್ಯ ಚಟುವಟಿಕೆಗೆ 5 ದಿನಗಳ ಮೊದಲು
- ಶಿಕ್ಷಕರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅನುಬಂಧ 1ರಿಂದ (ಹೈಪರ್ಲಿಂಕ್ ಮಾಡಬೇಕು) ನೀಡಿದ ಪುಟದಲ್ಲಿ ಸಂಭಾಷಣೆಯನ್ನು ಬರೆಯಲು ಹೇಳಿ.
- ಪಾತ್ರಗಳನ್ನು ಸ್ಕ್ರಿಪ್ಟ್ ಪ್ರಕಾರ ನಿರ್ವಹಿಸಲು ಶಿಕ್ಷಕರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬಹುದು.
- ಮುಖ್ಯ ಚಟುವಟಿಕೆ ದಿನದ ಮೊದಲೇ ಸಿದ್ಧರಾಗುವುದಕ್ಕಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ವಿದ್ಯಾರ್ಥಿಗಳಿಗೆ ಸಂಭಾಷಣೆಯನ್ನು ಹಂಚಲು ಹೇಳಿ.
- ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಸಂಭಾಷಣೆಯನ್ನು ಚಟುವಟಿಕೆಗೆ 5 ದಿನಗಳಿಗೆ ಮೊದಲೇ ತಯಾರಿಸಿ ಇಟ್ಟುಕೊಂಡಿರಬೇಕು.
ಮುಖ್ಯ ಚಟುವಟಿಕೆ – ಕಿರು ನಾಟಕ
ಬೇಕಾದ ಅಂದಾಜು ಸಮಯ: 30 ನಿಮಿಷಗಳು
ಕಿರು ನಾಟಕ – 20 ನಿಮಿಷಗಳು
- ಆಯ್ಕೆಯಾದ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶಿಸಲು ಶಿಕ್ಷಕರು ಆಹ್ವಾನಿಸುತ್ತಾರೆ ಮತ್ತು ಇತರ ವಿದ್ಯಾರ್ಥಿಗಳು ಗಮನವಿಟ್ಟು ಕಿರುನಾಟಕವನ್ನು ವೀಕ್ಷಿಸಿ ಚಟುವಟಿಕೆಯ ನಂತರದ ಚರ್ಚೆಗೆ ಸಿದ್ಧರಿರಲು ಹೇಳುತ್ತಾರೆ.
ಚರ್ಚೆ – 10 ನಿಮಿಷಗಳು
- ಶಿಕ್ಷಕರು ನಂತರ ವಿದ್ಯಾರ್ಥಿಗಳಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಾರೆ.
- ಈ ಕಿರುನಾಟಕದಲ್ಲಿ ನೀವು ಏನೇನು ಗಮನಿಸಿದಿರಿ?
- ನಾಟಕದಲ್ಲಿ ನೀವು ಮಗಳು ಹೇಳಿರುವುದನ್ನು ಒಪ್ಪುತ್ತೀರಾ?
- ನಿಮ್ಮ ಕುಟುಂಬದವರೊಡನೆ ನೀವು ಕೆಲಸವನ್ನು ಹಂಚಿಕೊಳ್ಳುತ್ತೀರಾ? ಹೌದು/ಇಲ್ಲ ಮತ್ತು ಯಾವುದು?
- ಅದೇರೀತಿ, ನಿಮ್ಮ ಮನೆಯ ಹೊರಗಿನ ಸ್ಥಳ/ ಸಮಾಜದಲ್ಲಿ ನೀವು ಯಾವುದೇ ಜವಾಬ್ದಾರಿ ಹೊಂದಿದ್ದೀರಿ ಎಂದು ನೀವು ಭಾವಿಸಿದ್ದೀರಾ?
ಚಟುವಟಿಕೆಯ ಮುಕ್ತಾಯ
ಗಮನಿಸಿ - ಸಮಯವಿದ್ದರೆ, ಶಿಕ್ಷಕರು ಪದಾಧಿಕಾರಿಗಳಿಗೆ ಕೆಳಗೆ ಉಲ್ಲೇಖಿಸಿದಂತೆ ಚಟುವಟಿಕೆಯನ್ನು ಮುಕ್ತಾಯಗೊಳಿಸುವ ಅವಕಾಶ ನೀಡಬಹುದು. ಒಂದು ವೇಳೆ ಸಮಯದ ಅಭಾವವಿದ್ದರೆ, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ- ಅವರು ಈ ಚಟುವಟಿಕೆಯಿಂದ ಏನು ಕಲಿತುಕೊಂಡರು ಎಂಬುದನ್ನು ಪ್ರಶ್ನಿಸಲು ಆಹ್ವಾನಿಸಿ.
ಪದಾಧಿಕಾರಿಗಳು ಸೆಶನ್ ಅನ್ನು ಮುಕ್ತಾಯಗೊಳಿಸಬೇಕು- ತರಗತಿಯನ್ನು ಎರಡು ಗುಂಪುಗಳಾಗಿ ವಿಂಗಡಿಸುವುದು- ಒಂದನ್ನು ಅಧ್ಯಕ್ಷರು ಮುನ್ನಡೆಸಿದರೆ ಇನ್ನೊಂದನ್ನು ಉಪಾಧ್ಯಕ್ಷರು ಮುನ್ನಡೆಸುತ್ತಾರೆ.
ಗುಂಪು A ಮತ್ತು B - ತಾವು ಮನೆಯಲ್ಲಿ ನೋಡುವ ದೈನಂದಿನ ಕೆಲಸಗಳ ಪಟ್ಟಿ (ಯಾವುದಾದರೂ 5) ಮಾಡುವುದು ಮತ್ತು ಮನೆಯಲ್ಲಿ ಆ ಕೆಲಸಕ್ಕೆ ಯಾರು ಹೊಣೆ ಎಂಬುದನ್ನು ಗುರುತಿಸುವುದು.
ಅವರು ಮನೆಯಲ್ಲಿ ಸಹಾಯ ಮಾಡಬಹುದಾದ ಟಾಸ್ಕ್ಗಳನ್ನು ಗುರುತಿಸಿ. (ಗಮನಿಸಿ: ತರಗತಿಯ ಗಾತ್ರಕ್ಕೆ ತಕ್ಕಂತೆ ನಾವು ಹೆಚ್ಚು ಗುಂಪುಗಳನ್ನು ಮಾಡಬಹುದು.) ಶಿಕ್ಷಕರು ಇದಕ್ಕಾಗಿ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಬಹುದು, ಎಲ್ಲಾ ನೋಟ್ಬುಕ್ ಪುಟಗಳನ್ನು ದೇಶ್ ಅಪ್ನಾಯೆ ಫಲಕದಲ್ಲಿ (DA ಗೋಡೆ) ಹಾಕಬಹುದು)
ಚಟುವಟಿಕೆಗಾಗಿ ಶಿಕ್ಷಕರು ಪ್ರಮುಖ ಸಾರಾಂಶದೊಂದಿಗೆ ಮುಕ್ತಾಯಗೊಳಿಸುತ್ತಾರೆ.
- ಮನೆಯಲ್ಲಿ ಟಾಸ್ಕ್ಗಳನ್ನು ತ್ವರಿತವಾಗಿ ಮುಗಿಸಲು ಮತ್ತು ಪರಸ್ಪರ ನೆರವಾಗಲು ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು
- ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಅತ್ಯಂತ ಗಮನಾರ್ಹ ಪ್ರಯೋಜನವೆಂದರೆ ಇದು ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಒಳಗೊಳ್ಳುವಿಕೆ/ಬಾಂಧವ್ಯವನ್ನು ಬಲಪಡಿಸುತ್ತದೆ.
- ನಾವು ಮನೆಯಲ್ಲಿ ಕರ್ತವ್ಯಗಳನ್ನು ಹಂಚಿಕೊಳ್ಳುವ ಜವಾಬ್ದಾರಿ ಹೊಂದಿರುವುದರಿಂದ,ನಮ್ಮ ಸ್ಥಳ/ಸಮುದಾಯದಲ್ಲಿ ನಾವು ಸ್ವಚ್ಛತೆ ಕಾಪಾಡುವ, ಸುರಕ್ಷಿತವಾಗಿರುವ, ನಿಯಮಗಳನ್ನು ಪಾಲಿಸುವ ಹಾಗೂ ಸಮಸ್ಯೆಗಳನ್ನು ವರದಿ ಮಾಡುವ ಮತ್ತು ಪರಿಹರಿಸುವ ಕರ್ತವ್ಯವನ್ನೂ ಹೊಂದಿದ್ದೇವೆ.
ದೇಶ್ ಅಪ್ನಾಯೇ ಫಲಕ(DA ಗೋಡೆ)
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್ಡೇಟ್ ಮಾಡಬಹುದು.
- ಕಿರುನಾಟಕದ ಸ್ಕ್ರಿಪ್ಟ್.
- ಪದಾಧಿಕಾರಿಗಳ ಪುನರ್ಮನನ ಸೆಶನ್ನಿಂದ ಗುಂಪು ಕಾರ್ಯ.
ಗಮನಿಸಬೇಕಾದ ಅಂಶಗಳು
- ಕಿರುನಾಟಕದ ಸಿದ್ಧತೆಯ ಸಮಯವನ್ನು ಸೀಮಿತಗೊಳಿಸಿ. ಕಿರುನಾಟಕಕ್ಕೆ ವೇಷಭೂಷಣದ ಅಗತ್ಯವಿಲ್ಲ.
- ವಿದ್ಯಾರ್ಥಿಗಳು ಸಂಭಾಷಣೆಗಳನ್ನು ಓದಬಹುದು. ಅಲ್ಲದೇ ಸ್ಥಳೀಯ ಭಾಷೆಯಲ್ಲೇ ಸ್ಕ್ರಿಪ್ಟ್ ಅನ್ನು ಮಾಡಬಹುದು.
- ಕಿರುನಾಟಕಕ್ಕೆ ದೀರ್ಘ ಸಿದ್ಧತೆಯನ್ನು ಮಾಡದಿರಿ, ಇಲ್ಲಿ ಅನುಭವದ ಮೂಲಕ ಕಲಿಕೆಯ ಕುರಿತು ಕೇಂದ್ರೀಕರಿಸಲಾಗುತ್ತದೆ.
- ಚಟುವಟಿಕೆಗಳನ್ನು ಮುಕ್ತಾಯಗೊಳಿಸುವುದು ಮತ್ತು ಚಟುವಟಿಕೆ ನಂತರ ಪ್ರಮುಖ ಕಲಿಕಾ ವಿಷಯದ ಮಹತ್ವವನ್ನು ನಿರ್ಲಕ್ಷಿಸಬೇಡಿ.
ಚಟುವಟಿಕೆ ಫೋಟೋಗಳನ್ನು ಹಂಚಿಕೊಳ್ಳುವುದು
- ಎಂಗೇಜ್ಮೆಂಟ್ ಆಫೀಸರ್ಗಳೊಂದಿಗೆ ಹಂಚಿಕೊಳ್ಳಬೇಕಿರುವ ಚಟುವಟಿಕೆ ಚಿತ್ರಗಳಿಗಾಗಿ ದಯವಿಟ್ಟು ಇವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ
- ಕಿರುನಾಟಕ ಚಿತ್ರಗಳು (2 ಫೋಟೋಗಳು)
- ಸೆಶನ್ ಅನ್ನು ಮುಕ್ತಾಯಗೊಳಿಸುತ್ತಿರುವ ಪದಾಧಿಕಾರಿಗಳು (2 ಫೋಟೋಗಳು)
- ದೇಶ್ ಅಪ್ನಾಯೇ ಫಲಕ(DA ಗೋಡೆ) (2 ಫೋಟೋಗಳು)
ಅನುಬಂಧ
ಅನುಬಂಧ 1 – ಕಿರುನಾಟಕ ಸ್ಕ್ರಿಪ್ಟ್
ಕಿರುನಾಟಕವನ್ನು ಸ್ಕ್ರಿಪ್ಟ್ನ ಅರ್ಥ ಬದಲಾಗದಂತೆ ಸ್ಥಳೀಯ ಭಾಷೆಯಲ್ಲೂ ಮಾಡಬಹುದು. ಇದರಿಂದ ಅಭ್ಯಾಸ ನಡೆಸುವಾಗ ಸಮಯ ಉಳಿತಾಯವಾಗುತ್ತದೆ.
ಪಾತ್ರ ಪಟ್ಟಿ:
- ಅಮ್ಮ
- ಅಪ್ಪ
- ಮಗ
- ಮಗಳು
- ಅಜ್ಜ
- ಅಜ್ಜಿ
ಅಮ್ಮ: ನನಗೆ ತಡವಾಗುತ್ತಿದೆ ಹಾಗಾಗಿ ಇವತ್ತು ನಾನು ಉಪ್ಪಿಟ್ಟು ಮಾಡುತ್ತೇನೆ.
(ಅವಳು ತನ್ನ ಕೆಲಸವನ್ನು ಪ್ರಾರಂಭಿಸುತ್ತಾಳೆ)
ಅಜ್ಜಿ: ಮಾಲಾ, ನನಗೆ ಬಾಯಾರಿಕೆಯಾಗುತ್ತಿದೆ. ಸ್ವಲ್ಪ ನೀರು ಕೊಡುವೆಯಾ?
ಮಾಲಾ(ಅಮ್ಮ): ಹಾ ತರುತ್ತೇನೆ!
(ಅಮ್ಮ, ಅಜ್ಜಿಗೆ ನೀರು ತಂದುಕೊಡುತ್ತಾಳೆ)
ಅಜ್ಜ: ಮಾಲಾ ನನಗೆ ಸ್ವಲ್ಪ ಕಾಫಿ ಮಾಡುತ್ತೀಯಾ.
ಮಾಲಾ: ಹಾ! ಮಾವ.
ಮಾಲಾ ಅಡುಗೆಮನೆಗೆ ಹೋಗುತ್ತಾಳೆ.
ಮಾಲಾ: ತರಕಾರಿಗಳು ಮತ್ತು ಬೇಳೆ ಗ್ಯಾಸ್ ಸ್ಟವ್ ಮೇಲೆ ಬೇಯುತ್ತಿದೆ. ಅದನ್ನು ತೆಗೆದು ನಾನು ಕಾಫಿ ಮಾಡಿದರೆ ನನ್ನ ಕೆಲಸಗಳಿಗೆ ತಡವಾಗುತ್ತದೆ.
ಅಜ್ಜಿ: ಮಾಲಾ! ಕಾಫಿ ತಯಾರಾಯಿತೇ?
ಮಾಲಾ: ಸ್ವಲ್ಪ ಇರಿ.
ಮಗ: ಅಮ್ಮಾ, ನನಗೆ ಇಂದು ಬೆಳಗ್ಗೆ ತಿಂಡಿಗೆ ಪೂರಿ ಮಾಡುತ್ತೀಯ?
ಅಮ್ಮ: ಇಲ್ಲ, ಮಗಾ! ನಾನು ವಾರಾಂತ್ಯದಲ್ಲಿ ನಿನಗೆ ಪೂರಿ ಮಾಡಿಕೊಡುತ್ತೇನೆ. ಬೆಳಗಿನ ಹೊತ್ತು ಮತ್ತೊಂದು ತಿಂಡಿ ಮಾಡುವಷ್ಟು ಸಮಯ ಇಲ್ಲ ನನಗೆ.
ಮಗ: ಓಹ್ ಇಲ್ಲ! ನೀನು ಯಾವಾಗಲು ಬ್ಯುಸಿಯಾಗಿರುತ್ತೀಯಾ.
ಮಗಳು: ಅಮ್ಮಾ! ನನ್ನ ಶೂ ಪಾಲಿಶ್ ಅನ್ನು ಎಲ್ಲಿ ಇಟ್ಟಿದ್ದೀಯಾ?
ಅಮ್ಮ: ಅದು ಶೂ ರ್ಯಾಕ್ನಲ್ಲಿಯೇ ಇದೆ.
ಮಗಳು: ಆದರೆ ನನಗದು ಕಾಣಿಸುತ್ತಿಲ್ಲ!
ಅಮ್ಮ: (ಶೂ ರ್ಯಾಕ್ ಬಳಿ ಹೋಗಿ ಅದನ್ನು ಹುಡುಕಿ ಕೊಡುತ್ತಾಳೆ) ಇಲ್ಲಿದೆ ನೋಡು. ಅಲ್ಲೇ ಹಿಂದೆ ಇರುವ ಶೂ ಅಡಿಯಲ್ಲಿ ಬಿದ್ದಿತ್ತು. ಇನ್ನೊಂದು ಸ್ವಲ್ಪ ಹುಡುಕಿದ್ದರೆ ನಿನಗದು ದೊರೆಯುತ್ತಿತ್ತು.
ತಂದೆ: ಓಹ್! ಮಾಲಾ! ಬೆಳಗ್ಗೆ ಬೇಗ ಎದ್ದರೆ ನಿನ್ನ ಕೆಲಸವನ್ನು ಬೇಗನೆ ಮುಗಿಸಬಹುದು!
ಅಮ್ಮ: ನಾನು ಈಗಾಗಲೇ ಬೆಳಗ್ಗೆ 5:30 ಕ್ಕೆ ಏಳುತ್ತಿದ್ದೇನೆ. ನೀವೆಲ್ಲರೂ ಬೆಳಗ್ಗೆ 6:30ಕ್ಕೆ ಏಳುತ್ತೀರಾ. ನಾನು ಒಂದು ಗಂಟೆ ಮೊದಲೇ ಏಳುತ್ತೇನೆ.
ತಂದೆ: ಹಾಗಾದರೆ, ನಿಮ್ಮ ಕೆಲಸ ಮುಗಿಸಲು ನೀವು ಬೆಳಗ್ಗೆ 5:00 ಗಂಟೆಗೆ ಏಳಬೇಕು ಎಂದು ನನಗನಿಸುತ್ತಿದೆ.
ಎಲ್ಲರೂ (ಮಗಳು ಹೊರತುಪಡಿಸಿ): ಹೌದು! ನೀನು ಬೇಗನೆ ಏಳಬೇಕು!
(ಅಮ್ಮನ ಮುಖದಲ್ಲಿ ಬೇಜಾರು ಕಾಣುತ್ತದೆ)
ಮಗಳು: ಅವಳು ಮಾತ್ರ ಯಾಕೆ ಬೇಗ ಏಳಬೇಕು? ನಾವೆಲ್ಲರೂ ನಮ್ಮ ಮಾಮೂಲಿ ಸಮಯಕ್ಕಿಂತ 10 ನಿಮಿಷ ಬೇಗನೆ ಎದ್ದು ಅಮ್ಮನಿಗೆ ಸಹಾಯ ಮಾಡಿದರೆ! ಅವಳಿಗೆ ಸಾಕಷ್ಟು ಸಮಯ ಉಳಿತಾಯವಾಗುತ್ತದೆ ಎಂದು ನನಗನಿಸುತ್ತದೆ. ಅವಳು ಕಷ್ಟಪಡಬೇಕಾಗಿ ಬರುವುದಿಲ್ಲ. ಮನೆಗೆಲಸವನ್ನು ಮಾಡುವುದು ಕೇವಲ ಅವಳು ಮಾತ್ರ ಮಾಡುವ ಕೆಲಸವಲ್ಲ! ಕುಟುಂಬದ ಸದಸ್ಯರೆಲ್ಲರೂ ಕೆಲಸವನ್ನು ಹಂಚಿಕೊಳ್ಳಬೇಕು. ಆಕ್ಟಿಝೇನ್ ಕ್ಲಬ್ನಲ್ಲಿ ನನ್ನ ಶಿಕ್ಷಕರು ನನಗೆ ಇದನ್ನು ಹೇಳಿಕೊಟ್ಟಿದ್ದಾರೆ.
ಅಜ್ಜಿ: ಹೌದು, ನೀನು ಸರಿಯಾಗಿ ಹೇಳಿದ್ದೀಯಾ! ನಾಳೆಯಿಂದ ನಾವೆಲ್ಲರೂ ಪ್ರಯತ್ನಿಸೋಣ.
ಮರುದಿನ -(ಪ್ರತಿಯೊಬ್ಬರೂ ಮಾಮೂಲಿಗಿಂತ 10 ನಿಮಿಷ ಬೇಗನೆ ಏಳುತ್ತಾರೆ)
ಅಜ್ಜಿ: ಮಾಲಾ, ನಾನು ನಿನಗೆ ತರಕಾರಿ ಕತ್ತರಿಸಿ ಕೊಡುತ್ತೇನೆ.
ತಂದೆ: ನಾನು ಗಿಡಗಳಿಗೆ ನೀರು ಹಾಕುತ್ತೇನೆ.
ಮಕ್ಕಳು: ನಾವು ಅಜ್ಜ ಅಜ್ಜಿಗೆ ನೀರು ಇತ್ಯಾದಿಗಳನ್ನು ತಂದುಕೊಡುತ್ತೇವೆ ಮತ್ತು ನಮ್ಮ ಬ್ಯಾಗುಗಳನ್ನು ನಾವೇ ಸಿದ್ಧಪಡಿಸಿಕೊಂಡು ಶಾಲೆಗೆ ಹೊರಡಲು ತಯಾರಾಗುತ್ತೇವೆ.
ಅಜ್ಜ: ನಾನು ಮಕ್ಕಳನ್ನು ಸ್ಕೂಲ್ ಬಸ್ ಹತ್ತಲು ಬಸ್ ಸ್ಟಾಪ್ ತನಕ ಬಿಟ್ಟು ಬರುತ್ತೇನೆ.
ಎಲ್ಲರೂ ಸಹಾಯ ಮಾಡಲು ಪ್ರಾರಂಭಿಸುತ್ತಾರೆ,
ಎಲ್ಲ ಕೆಲಸಗಳೂ ಸುಸೂತ್ರವಾಗಿ ನಡೆಯುತ್ತವೆ.
ಅಮ್ಮ: ಕೇವಲ 9:00 ಗಂಟೆ ಆಯಿತಷ್ಟೆ, ಎಲ್ಲಾ ಕೆಲಸಗಳು ಮುಗಿದಿವೆ! ಇವತ್ತು, ನನಗೆ ಹೆಚ್ಚುವರಿ ಸಮಯ ಉಳಿದಿದೆ! ನಾವು ಇನ್ನೂ ಒಂದು ಕಾಫಿ ಮಾಡಿ ಎಲ್ಲರೂ ಒಟ್ಟಿಗೆ ಕುಡಿಯೋಣ.