

KLE ಕನ್ನಡ ಗ್ರೇಡ್ 7 ಫೆಬ್ರವರಿ ಚಟುವಟಿಕೆ-ಶಾಲಾ ಉಸ್ತುವಾರಿಗಳು
ಉದ್ದೇಶಗಳು
- ನಿಯೋಜಿಸಿದ ಶಾಲೆಯ ಸ್ಥಳಕ್ಕೆ ಗಮನಕೊಡಬೇಕಾದ ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು.
- ಶಾಲೆಯ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿಡಲು ವಿದ್ಯಾರ್ಥಿಗಳಾಗಿ ತಾವು ಕೈಗೊಳ್ಳಬೇಕಾದ ಕ್ರಮ ಮತ್ತು ಕರ್ತವ್ಯಗಳನ್ನು ಗುರುತಿಸುವುದು.
ಕೌಶಲಗಳು
ಅವಲೋಕನ, ಟೀಂವರ್ಕ್
ಮೌಲ್ಯಗಳು
ಮಾಲೀಕತ್ವ, ಜವಾಬ್ದಾರಿ
ಬೇಕಾದ ಸಾಮಗ್ರಿಗಳು
ಪೇಪರ್ ಮತ್ತು ಪೆನ್ನುಗಳು
ಚಟುವಟಿಕೆ ಪೂರ್ವ ತಯಾರಿ – ಚಟುವಟಿಕೆಗೆ ಕನಿಷ್ಠ 5 ದಿನಗಳ ಮೊದಲು
- ಶಿಕ್ಷಕರು ತರಗತಿಯನ್ನು ಅದರ ಗಾತ್ರಕ್ಕೆ ತಕ್ಕಂತೆ 6-8 ಗುಂಪುಗಳಾಗಿ ವಿಂಗಡಿಸುತ್ತಾರೆ. (ಹೆಚ್ಚು ಗುಂಪುಗಳಿದ್ದರೆ, ವಿವಿಧ ಗುಂಪುಗಳಿಗೆ ಒಂದೇ ಸಮಯದ ಸ್ಲಾಟ್ ಅನ್ನು ನೀಡುವುದು ಅಥವಾ ಶಾಲೆಯ ಗಾತ್ರಕ್ಕೆ ತಕ್ಕಂತೆ ಸ್ಥಳಗಳನ್ನು ಹಂಚುವುದು.)
- ವಿದ್ಯಾರ್ಥಿಗಳಿಗೆ ತಾವು ಶಕ್ತಿ ಮತ್ತು ತ್ಯಾಜ್ಯದ ಪರಿಶೀಲನೆ ನಡೆಸಿ ಅವರು ಶಕ್ತಿಯನ್ನು (ಫ್ಯಾನ್‌ಗಳು/ಲೈಟ್‌ಗಳು/ಇತ್ಯಾದಿ) ಹೇಗೆ ಬಳಸುತ್ತಾರೆ ಮತ್ತು ತರಗತಿ, ಶೌಚಾಲಯ ಮತ್ತು ಆಡವಾಡುವ ಸ್ಥಳ/ಕ್ಯಾಂಟೀನ್‌ನಲ್ಲಿ (ಮಧ್ಯಾಹ್ನದ ಬಿಸಿಯೂಟ ನೀಡುವ ಸ್ಥಳ) ಸ್ವಚ್ಛತೆ ಮತ್ತು ತ್ಯಾಜ್ಯವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ಹೇಳಿ.
- ಪ್ರತಿ ಗುಂಪು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಮಾಹಿತಿಯನ್ನು ಗಮನಿಸಬೇಕು. ಪ್ರತಿ ಗುಂಪಿಗೆ ಕೆಳಗೆ ನೀಡಿದಂತೆ ಯಾದೃಚ್ಛಿಕವಾಗಿ ಒಂದು ಸಮಯದ ಸ್ಲಾಟ್ ಅನ್ನು ನಿಗದಿಪಡಿಸಲು ಪದಾಧಿಕಾರಿಗಳಿಗೆ ತಿಳಿಸಿ
- ಶಾಲೆಯ ಪ್ರಾರಂಭ
- ರೀಸೆಸ್ ಸಮಯದಲ್ಲಿ ಮತ್ತು ಅದಕ್ಕೂ ಮೊದಲು (ವಿರಾಮದ ಸಮಯ)
- ರೀಸೆಸ್‌ನ ಕೊನೆಯಲ್ಲಿ (ವಿರಾಮದ ಸಮಯ) (ಅವರು ಅವಲೋಕನ ಸ್ಥಳದಿಂದ ತರಗತಿಗೆ ಬರುವಾಗ.)
- ಶಾಲೆ ಮುಗಿಯುವಾಗ (ಮನೆಗೆ ಹೋಗುವುದಕ್ಕೂ ಮೊದಲು) (ಅವರು ತರಗತಿಯಿಂದ ಗೇಟ್ ಹತ್ತಿರ ಬರುವಾಗ.)
- ಪದಾಧಿಕಾರಿಗಳಿಗೆ ಅನುಬಂಧ 1 ರಲ್ಲಿ ನೀಡಲಾದ ಕೋಷ್ಟಕವನ್ನು ಬರೆಯಲು ಹೇಳಿ ಮತ್ತು ಪ್ರತಿಯೊಬ್ಬರ ಉಲ್ಲೇಖಕ್ಕಾಗಿ ಅದನ್ನು ದೇಶ್ ಅಪ್ನಾಯೆ ಫಲಕದಲ್ಲಿ ಹಾಕಲು ಹೇಳಿ.
- ಅವಲೋಕನವನ್ನು ನಿಗದಿಪಡಿಸಲಾದ ಸಮಯದ ಸ್ಲಾಟ್‌ನಲ್ಲಿ ಭೇಟಿ ನೀಡಿ ಅನುಬಂಧ 2ರಲ್ಲಿನ ಆಡಿಟ್ ಟೂಲ್ ಪ್ರಕಾರ ನಿರ್ದಿಷ್ಟ ಮಾಹಿತಿಯನ್ನು ಬರೆದಿಟ್ಟುಕೊಳ್ಳಿ. ಉದಾ – ರೀಸೆಸ್ ಸಮಯದಲ್ಲಿ ಫ್ಯಾನ್ ತಿರುಗುತ್ತಿದೆಯೇ, ಅವುಗಳಲ್ಲಿ ಎಷ್ಟು, ಅಥವಾ ಒಂದು ಟ್ಯಾಪ್ ಲೀಕ್ ಆಗುತ್ತಿದೆ.
- ವಿದ್ಯಾರ್ಥಿಗಳು ಈ 5-ದಿನದ ಅವಲೋಕನವನ್ನು ಗುಂಪಿನ ನಾಯಕರೊಂದಿಗೆ ಸಂವಹನ ನಡೆಸಿ ಪೂರ್ಣಗೊಳಿಸಿದ್ದಾರೆ ಮತ್ತು ಗುಂಪಿನ ನಾಯಕರು ತಮ್ಮ ಗುಂಪು ಸಿದ್ಧವಾಗಿದೆ ಎಂಬುದನ್ನು ಖಾತ್ರಿಪಡಿಸಿದ್ದಾರೆ ಎಂದು ಪದಾಧಿಕಾರಿಗಳು ತರಗತಿಗೆ ಕನಿಷ್ಠ ಒಂದು ದಿನ ಮೊದಲು ಖಾತ್ರಿಪಡಿಸಬೇಕು.
- ಪದಾಧಿಕಾರಿಗಳು ಸೆಶನ್ ಭಾಗದ ಮುಕ್ತಾಯಕ್ಕೆ ಸಿದ್ಧರಾಗುತ್ತಾರೆ/ಪ್ರಶ್ನೆಗಳನ್ನು ತಮ್ಮ ನೋಟ್‌ಬುಕ್‌ನಲ್ಲಿ ಗುರುತಿಸಿಕೊಳ್ಳುತ್ತಾರೆ).
ಮುಖ್ಯ ಚಟುವಟಿಕೆ
ಬೇಕಾದ ಅಂದಾಜು ಸಮಯ: 30 ನಿಮಿಷಗಳು.
ಆಡಿಟ್ ವರದಿ ಸಿದ್ಧತೆ – 15 ನಿಮಿಷಗಳು
- ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ಈ ಕೆಳಗಿನವುಗಳನ್ನು ಒಳಗೊಂಡ ಆಡಿಟ್ ವರದಿಯನ್ನು ಸಿದ್ಧಪಡಿಸಲು ಹೇಳುತ್ತಾರೆ-
- ಕೋಷ್ಟಕ ಫಾರ್ಮ್ಯಾಟ್ ಪ್ರಕಾರ ಅವಲೋಕನಗಳು (ಅನುಬಂಧ 1)
- ನಿಮ್ಮ ನಿರ್ದಿಷ್ಟಪಡಿಸಿದ ಸಮಯದ ಸ್ಲಾಟ್‌ನಲ್ಲಿ ಸ್ಥಳದ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಪಾಲಿಸಲು ವಿದ್ಯಾರ್ಥಿಗಳಿಗೆ 3-4 ಕ್ರಿಯಾ ಅಂಶಗಳನ್ನು ಪಟ್ಟಿ ಮಾಡಿ.
- ಗುಂಪು ಕೆಲಸ ಮಾಡಲು ಪ್ರತಿ ಗುಂಪಿಗೆ 15 ನಿಮಿಷಗಳನ್ನು ನೀಡಲಾಗುತ್ತಾದೆ.
ಪ್ರಸ್ತುತಿಗಳು – 15 ನಿಮಿಷಗಳು
- ಶಿಕ್ಷಕರು ಪ್ರತಿ ಗುಂಪು ಮುಂದೆ ಬಂದು ಗುಂಪು ಕೆಲಸವನ್ನು ಪ್ರಸ್ತುತಪಡಿಸಲು ಆಹ್ವಾನಿಸುತ್ತಾರೆ.
- ಪ್ರತಿ ಗುಂಪಿಗೆ ಪ್ರಸ್ತುತಪಡಿಸಲು 2-3 ನಿಮಿಷಗಳು ದೊರೆಯುತ್ತದೆ.
- ಪ್ರತಿ ಪ್ರಸ್ತುತಿಯ ನಂತರ, ಇತರ ವಿದ್ಯಾರ್ಥಿಗಳು ಸಲಹೆಗಳನ್ನು ನೀಡುತ್ತಾರೆ ಮತ್ತು ಶಿಕ್ಷಕರು ಅಗತ್ಯಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುತ್ತಾರೆ.
ಒಂದು ವೇಳೆ, ಗುಂಪು ಆಡಿಟ್ ವರದಿಯನ್ನು ಸಿದ್ಧಪಡಿಸಲು ಸಮಯ ತೆಗೆದುಕೊಂಡರೆ, ಅವರು ವರದಿಗಳನ್ನು ನೇರವಾಗಿ ದೇಶ್ ಅಪ್ನಾಯೇ ಫಲಕದಲ್ಲಿ ಹಾಕಬಹುದು. ಇತರ ವಿದ್ಯಾರ್ಥಿಗಳು ಇದನ್ನು ವಿರಾಮದ ವೇಳೆಯಲ್ಲಿ ಓದುತ್ತಾರೆ.
ಪದಾಧಿಕಾರಿಗಳು ಪ್ರತಿ ಗುಂಪಿನ ಆಡಿಟ್ ವರದಿಯನ್ನು ದೇಶ್ ಅಪ್ನಾಯೆ ಫಲಕದಲ್ಲಿ ಹಾಕುತ್ತಾರೆ.
ಮುಂದಿನ 3-4 ದಿನಗಳಲ್ಲಿ ಸೂಚಿಸಿದಂತೆ ಕನಿಷ್ಠ ಎರಡು ಕಾರ್ಯಗಳನ್ನು ಅಳವಡಿಸಲು ಅವರಿಗೆ ಉತ್ತೇಜಿಸಿ (ಐಚ್ಛಿಕ – ಶಿಕ್ಷಕರು ನಿರ್ಧರಿಸಬಹುದು)
ಚಟುವಟಿಕೆಯನ್ನು ಮುಕ್ತಾಯಗೊಳಿಸಿ
ಗಮನಿಸಿ - ಸಮಯವಿದ್ದರೆ, ಶಿಕ್ಷಕರು ಪದಾಧಿಕಾರಿಗಳಿಗೆ ಕೆಳಗೆ ಉಲ್ಲೇಖಿಸಿದಂತೆ ಚಟುವಟಿಕೆಯನ್ನು ಮುಕ್ತಾಯಗೊಳಿಸುವ ಅವಕಾಶ ನೀಡಬಹುದು. ಒಂದು ವೇಳೆ ಸಮಯದ ಅಭಾವವಿದ್ದರೆ, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ- ಅವರು ಈ ಚಟುವಟಿಕೆಯಿಂದ ಏನು ಕಲಿತುಕೊಂಡರು ಎಂಬುದನ್ನು ಪ್ರಶ್ನಿಸಲು ಆಹ್ವಾನಿಸಿ.
ಪದಾಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಇವುಗಳನ್ನು ಕೇಳುತ್ತಾರೆ –
ಪ್ರಸ್ತುತಪಡಿಸುವ ಎಲ್ಲಾ ಕಾರ್ಯಗಳಲ್ಲಿ -- ಶಕ್ತಿ ವ್ಯರ್ಥವಾಗುವುದನ್ನು ತಡೆಗಟ್ಟಲು ಮತ್ತು ತರಗತಿಗಳು, ಶೌಚಾಲಯಗಳು ಮತ್ತು ಆಟದ ಸ್ಥಳ/ಕ್ಯಾಂಟೀನ್ ಅನ್ನು ಸ್ವಚ್ಛವಾಗಿರಿಸುವುದು ಮತ್ತು ನಿರ್ವಹಿಸುವಲ್ಲಿ ಅವರು ಕೈಗೊಳ್ಳುವ ಯಾವುದೇ ಕ್ರಮದ ಕುರಿತು ಯೋಚಿಸಿ. ಕಾರ್ಯವನ್ನು ಹಂಚಿಕೊಳ್ಳಲು 5-6 ವಿದ್ಯಾರ್ಥಿಗಳನ್ನು ಆಹ್ವಾನಿಸಿ.
ಚರ್ಚೆಯನ್ನು ಆಧರಿಸಿ ಶಿಕ್ಷಕರು ಸಂಕ್ಷೇಪಿಸುತ್ತಾರೆ ಮತ್ತು ಈ ಕೆಳಗಿನವುಗಳೊಂದಿಗೆ ಮುಕ್ತಾಯಗೊಳಿಸುತ್ತಾರೆ-
- ನಮ್ಮ ಸುತ್ತಲಿನ ವಿಷಯಗಳ ಮೇಲೆ ನಾವು ಒಂದು ಕಣ್ಣಿಟ್ಟಿರಬೇಕು- ಎಚ್ಚರಿಕೆಯಿಂದಿರಿ ಮತ್ತು ಪರಿಸ್ಥಿತಿಗಳ ಅರಿವು ಹೊಂದಿರಿ, ನಮ್ಮ ಸುತ್ತಲಿನ ವಿಷಯಗಳನ್ನು ಗಮನಿಸಿ.
- ಸಮಸ್ಯೆಗಳನ್ನು ಕಂಡುಹಿಡಿಯುವಲ್ಲಿ, ಪರಿಹಾರವನ್ನು ಆಲೋಚಿಸುವಲ್ಲಿ ಮತ್ತು ಅದನ್ನು ವಾಸ್ತವವಾಗಿ ಅನ್ವಯಿಸುವುದರಲ್ಲಿ ಆ ಅನುಭವವು ಅತ್ಯಂತ ಸ್ಮರಣೀಯ ಮತ್ತು ವಾಸ್ತವ. ಇದು ನಮಗೆ ವ್ಯವಸ್ಥಿತವಾಗಿ ಆಲೋಚಿಸುವ ಅವಕಾಶ ನೀಡಿದೆ.
- ಸಮಸ್ಯೆಗಳ ಅರಿವು ಹೊಂದಿರುವುದರ ಮಹತ್ವ, ಅವುಗಳ ಕುರಿತು ನಾನು ಎಚ್ಚರಿಕೆಯಿಂದಿದ್ದರೆ ಮಾತ್ರ ಅವುಗಳನ್ನು ನಾವು ಪರಿಹರಿಸಬಹುದು. ಅಲ್ಲದೇ, ನಾವು ಮಾಡುವ ಸಣ್ಣ ಬದಲಾವಣೆಗಳು ಮತ್ತು ಕಾರ್ಯಗಳು ವ್ಯತ್ಯಾಸ ಉಂಟುಮಾಡಬಹುದು. ನಾವು ಶಾಲೆಯಲ್ಲಿ ಶಕ್ತಿ ಮತ್ತು ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಳ್ಳಲು ಪ್ರಾರಂಭಿಸಿದಾಗ, ಅದನ್ನು ನಾವು ನಮ್ಮ ಮನೆಯಲ್ಲಿ ಮತ್ತು ನಮ್ಮ ಸುತ್ತಲಿನ ಸ್ಥಳದಲ್ಲೂ ಮಾಡಬಹುದು.
ದೇಶ್ ಅಪ್ನಾಯೇ ಫಲಕ
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು.
- ಗುಂಪಿನ ಆಡಿಟ್ ವರದಿ.
ಚಟುವಟಿಕೆ ಫೋಟೋಗಳನ್ನು ಹಂಚಿಕೊಳ್ಳುವುದು
- ಎಂಗೇಜ್‌ಮೆಂಟ್ ಆಫೀಸರ್‌ಗಳೊಂದಿಗೆ ಹಂಚಿಕೊಳ್ಳಬೇಕಿರುವ ಚಟುವಟಿಕೆ ಚಿತ್ರಗಳಿಗಾಗಿ ದಯವಿಟ್ಟು ಇವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ
- ಗುಂಪಿನಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು (2 ಫೋಟೋಗಳು)
- ಗುಂಪು ಪ್ರಸ್ತುತಿ – (2 ಫೋಟೋಗಳು)
- ಮುಕ್ತಾಯ ಭಾಗವನ್ನು ನಡೆಸಿಕೊಡುವ ಪದಾಧಿಕಾರಿ. (2 ಫೋಟೋಗಳು)
- ದೇಶ್ ಅಪ್ನಾಯೇ ಫಲಕ (2 ಫೋಟೋಗಳು)
ಉಲ್ಲೇಖ ವಿಭಾಗ
ಅನುಬಂಧ 1 –
ಆಡಿಟ್ ಟೂಲ್
ಇಂಧನ ಆಡಿಟ್ – ನಾವು ಇಂಧನವನ್ನು ಸರಿಯಾಗಿ ಬಳಸುತ್ತಿದ್ದೇವೆಯೇ ಮತ್ತು ಯಾವುದೇ ವ್ಯರ್ಥವಾಗುವಿಕೆ ಇಲ್ಲವೇ ಎಂದು ಪರಿಶೀಲಿಸುವುದು (ಫ್ಯಾನ್‌ಗಳು, ಲೈಟ್‌ಗಳು, ನೀರಿನ ನಲ್ಲಿಗಳು, ಇತ್ಯಾದಿಗಳನ್ನು ಸರಿಯಾಗಿ ಬಳಸಲಾಗುತ್ತಿದೆ- ಸಂಪನ್ಮೂಲಗಳು ವ್ಯರ್ಥವಾಗುವುದಿಲ್ಲ)
ವ್ಯರ್ಥವಾಗುವಿಕೆ ಆಡಿಟ್ – ನಾವು ಕಸವನ್ನು ಸರಿಯಾಗಿ ವಿಲೇವಾರಿ ಮಾಡುತ್ತಿದ್ದೇವೆಯೇ ಮತ್ತು ನಮ್ಮ ಸುತ್ತಲಿನ ಸ್ಥಳವನ್ನು ಸ್ವಚ್ಛವಾಗಿರಿಸಲು ನಾನು ಕಸದ ಬುಟ್ಟಿಗಳು, ನೀರು ಇತ್ಯಾದಿಗಳ ಸರಿಯಾದ ಬಳಕೆಯನ್ನು ಮಾಡುತ್ತಿದ್ದೇವೆಯೇ ಎಂದು ಪರಿಶೀಲಿಸುವುದು.
ತರಗತಿಯ, ಶೌಚಾಲಯದ ಮತ್ತು ಆಟದ ಸ್ಥಳ ಶಕ್ತಿ ಮತ್ತು ವ್ಯರ್ಥವಾಗುವಿಕೆಯ ಆಡಿಟ್/ಕ್ಯಾಂಟೀನ್‌ನಲ್ಲಿ(ಮಧ್ಯಾಹ್ನದ ಬಿಸಿಯೂಟ ನೀಡುವ ಸ್ಥಳ) ಇಂಧನ ಮತ್ತು ಕಸದ ಆಡಿಟ್
- ಸಮಯ - ಶಾಲೆಯ ಪ್ರಾರಂಭದಲ್ಲಿ/ರೀಸೆಸ್ ಸಮಯದಲ್ಲಿ ಮತ್ತು ಅದಕ್ಕೂ ಮೊದಲು (ವಿರಾಮದ ಸಮಯ)/ ರೀಸೆಸ್ ಕೊನೆಯಲ್ಲಿ (ವಿರಾಮದ ಸಮಯ)/ ಶಾಲೆ ಮುಗಿಯುವಾಗ
- ಗಮನಿಸಿದ ದಿನಾಂಕ– ಆರಂಭಿಕ ದಿನಾಂಕದಿಂದ_____________________ ಕೊನೆಯ ದಿನಾಂಕ ___________________
- ಗುಂಪಿನ ಸದಸ್ಯರ ಹೆಸರು –
ಅನುಬಂಧ 2 –
ಶಿಕ್ಷಕರ ಕಾಳಜಿ ಟಿಪ್ಪಣಿ (ಐಚ್ಛಿಕ – ಅಗತ್ಯವಿದೆಯೆಂದು ಭಾವಿಸಿದರೆ ಶಿಕ್ಷಕರು ಹಂಚಿಕೊಳ್ಳಬಹುದು.)
ವಿದ್ಯಾರ್ಥಿಗಳು ಈ ಚಟುವಟಿಕೆಯನ್ನು ಜವಾಬ್ದಾರಿಯುತವಾಗಿ ನಡೆಸುತ್ತಿದ್ದಾರೆ ಎಂಬುದನ್ನು ಶಿಕ್ಷಕರು ಖಾತ್ರಿಪಡಿಸಬೇಕು. ಇದನ್ನು ಏಕೆ ಮಾಡಲಾಗುತ್ತಿದೆ ಮತ್ತು ಇದರಿಂದ ಶಾಲೆಗೆ ಏನು ಉಪಯೋಗ ಎಂಬುದನ್ನು ವಿವರಿಸಲು ತರಗತಿಗೆ ಈ ಕೆಳಗಿನ ಸೂಚನೆಗಳನ್ನು ನೀಡಿ.
- ಈ ಚಟುವಟಿಕೆ ಮಾಡುವಾಗ, ಇತರರು ಮತ್ತು ಶಾಲಾ ಸ್ವತ್ತುಗಳನ್ನು ಆಸ್ಥೆ ಹಾಗೂ ಕಾಳಜಿಯಿಂದ ನಿರ್ವಹಿಸಿ.
- ನಿಮಗೆ ಮತ್ತು ಇತರರಿಗೆ ಹಾನಿಯಾಗುವಂತಹ ಯಾವುದೇ ಕಲಸಗಳನ್ನು ಮಾಡದೇ ಸುರಕ್ಷಿತವಾಗಿರಿ. (ಕಸದಬುಟ್ಟಿಯೊಳಗೆ ಕೈಗಳನ್ನು ಹಾಕದಿರಿ, ತೆರೆದ ವೈರ್ ಅಥವಾ ಸಾಕೆಟ್‌ಗಳನ್ನು ಮುಟ್ಟದಿರಿ ಇತ್ಯಾದಿಗಳು)
- ನಿಶ್ಯಬ್ದವಾಗಿ ಕೆಲಸ ಮಾಡಿ ಮತ್ತು ಕಲಿಯುವವರಿಗೆ ಅಥವಾ ಕೆಲಸ ಮಾಡುವವರಿಗೆ ತೊಂದರೆ ನೀಡದಿರಿ.
- ನೆನಪಿಡಿ, ನಾವು ಇಲ್ಲಿ ಸಹಾಯ ಮಾಡುವ ಸಲುವಾಗಿ ಇದ್ದೇವೆ, ಇತರರನ್ನು ದೂರುವುದಕ್ಕಾಗಿ ಅಥವಾ ತೊಂದರೆ ನೀಡುವುದಕ್ಕಾಗಿ ಅಲ್ಲ.
- ಶಾಲೆಯ ಸ್ವತ್ತುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ, ಅದು ಮೌಲ್ಯಯುತವಾದುದು.
- ಟೀಂನಲ್ಲಿ ಜೊತೆಯಾಗಿ ಕೆಲಸಮಾಡಿ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಿ.
- ಯಾವುದಾದರೂ ಅಪಾಯಕಾರಿಯಾದುದು ಅಥವಾ ಕಳವಳಕಾರಿಯಾಗಿರುವುದು ಕಂಡುಬಂದರೆ ಶಿಕ್ಷಕರಿಗೆ ತಿಳಿಸಿ.