ಕರ್ನಾಟಕ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಗ್ರೇಡ್ 6 ಸೆಪ್ಟೆಂಬರ್ ಚಟುವಟಿಕೆ – ACTiZEN ಕ್ಲಬ್ ರಚನೆ– ಅಣಕು ಚುನಾವಣೆ

  1. ಕಾರ್ಯ, ಚಟುವಟಿಕೆ, ಮತ್ತು ಭಾಗವಹಿಸುವಿಕೆಯ ಮೂಲಕ ಒಳಗೊಂಡಿರುವ ಕಾರ್ಯವಿಧಾನವನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಚುನಾವಣೆ ಪ್ರಕ್ರಿಯೆಯ ಸಂಪೂರ್ಣ ಅನುಭವ ಪಡೆಯುತ್ತಾರೆ. 
  2. ವಿದ್ಯಾರ್ಥಿಗಳು ACTiZEN S’ ಕ್ಲಬ್‌ನ ಪದಾಧಿಕಾರಿಗಳನ್ನು ಪ್ರಜಾಸತ್ತೀಯವಾಗಿ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. 

ವಿಮರ್ಶಾತ್ಮಕ ಚಿಂತನೆ, ಟೀಂವರ್ಕ್ 

ಸಹಯೋಗ, ಜವಾಬ್ದಾರಿ 

ಖಾಲಿ ಹಾಳೆ (ನೋಟ್‌ಪುಸ್ತಕ ರಫ್ ಪೇಪರ್), ಮತಪೆಟ್ಟಿಗೆಯನ್ನು ತಯಾರಿಸಲು ಶೂಬಾಕ್ಸ್ ಅಥವಾ ಯಾವುದೇ ಲಭ್ಯವಿರುವ ರಟ್ಟಿನ ಪೆಟ್ಟಿಗೆ (ಐಚ್ಛಿಕ), ಗ್ಲೂ, ಕತ್ತರಿ,  ರೂಲರ್, ಪೆನ್ಸಿಲ್‌ಗಳು, ಎರೇಸರ್‌ಗಳು ಮತ್ತು ಸ್ಕೆಚ್ ಪೆನ್/ಪೆನ್‌ಗಳು.

ನಿರುಪಯುಕ್ತ ವಸ್ತುಗಳಿಂದ ಉತ್ತಮವಾದುದನ್ನು ತಯಾರಿಸಲು ಅನುವು ಮಾಡಿಕೊಡುವಂತಹ ವಸ್ತುಗಳನ್ನು ಚಟುವಟಿಕೆಗೆ ಬಳಸಲು ನಾವು ಶಿಫಾರಸು ಮಾಡುತ್ತೇವೆ.

ಅಂದಾಜು ಸಮಯ: 45 ನಿಮಿಷಗಳು.

ಹಂತ 1 – ಪರಿಚಯ

ಅಂದಾಜು ಸಮಯ: 15 ನಿಮಿಷಗಳು.

ACTiZEN ಕ್ಲಬ್ ಕುರಿತು ಮಾತನಾಡುತ್ತಾ ಶಿಕ್ಷಕರು ತರಗತಿಯನ್ನು ಪ್ರಾರಂಭಿಸುತ್ತಾರೆ

ACTiZEN ಕ್ಲಬ್ ಕುರಿತು ಶಿಕ್ಷಕರು ಈ ಕೆಳಗಿನವುಗಳನ್ನು ಹಂಚಿಕೊಳ್ಳುತ್ತಾರೆ

ದೇಶ್ ಅಪ್ನಾಯೇ ಸಹಯೋಗ್ ಫೌಂಡೇಶನ್ ಅವರ ACTiZEN ಕ್ಲಬ್ ನೀವು ಚಾಂಪಿಯನ್ ನಾಗರಿಕರಾಗಲು ನೆರವಾಗುತ್ತದೆ. ಇದು ನಿಮಗೆ ಜಾಗರೂಕ, ಮಾಹಿತಿಯುಕ್ತ ಮತ್ತು ಸಕ್ರಿಯ ನಾಗರಿಕ ಅಥವಾ ಸಂಕ್ಷಿಪ್ತವಾಗಿ ಹೇಳುವುದಾದರೆ -ACTiZEN  ಆಗಲು ನೆರವಾಗುತ್ತದೆ. ACTiZEN ಕ್ಲಬ್‌ನಲ್ಲಿರುವುದು ನಿಮಗೆ ಅನೇಕ ಅವಕಾಶಗಳನ್ನು ನೀಡುತ್ತದೆ, ನೀವು ಕೇವಲ ಸಾಮಾನ್ಯ ವಿದ್ಯಾರ್ಥಿಯಾಗಿ ಉಳಿಯದೇ ನಿಮ್ಮ ಸುತ್ತಲಿನ ಜಗತ್ತನ್ನು ಅತ್ಯುತ್ತಮ ಸ್ಥಳವನ್ನಾಗಿ ಮಾಡಬಲ್ಲ ಚಾಂಪಿಯನ್ ನಾಗರಿಕರು ನೀವಾಗುತ್ತೀರಿ!

ಚುನಾವಣೆಯ ಮೂಲಕ ACTiZEN ಕ್ಲಬ್‌ನ ಪದಾಧಿಕಾರಿಗಳೆಂದು ಕರೆಯಲಾಗುವ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಈ ಆಸಕ್ತಿಕರ ಕ್ಲಬ್‌ನ ಮೊದಲ ಚಟುವಟಿಕೆಯನ್ನು ಪ್ರಾರಂಭಿಸುತ್ತೇವೆ. ಚುನಾವಣೆಯ ಕುರಿತು ಇನ್ನಷ್ಟು ತಿಳಿಯಲು ನೀವು ಕಾತರರಾಗಿದ್ದೀರಾ?

ವಿದ್ಯಾರ್ಥಿಗಳು – (ಉತ್ಸಾಹದ ನಿರೀಕ್ಷಿತ ಪ್ರತಿಕ್ರಿಯೆ)

ಶಿಕ್ಷಕರು – “ಚುನಾವಣೆ ಕುರಿತು ನಾನು ನಿಮ್ಮಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತೇನೆ. ಉತ್ತರಿಸುವವರು ಕೈ ಮೇಲಕ್ಕೆ ಎತ್ತಬೇಕು.

  • ನೀವು ಮೊದಲು ಯಾವುದಾದರೂ ಚುನಾವಣೆಯಲ್ಲಿ ಭಾಗವಹಿಸಿದ್ದೀರಾ?
  • ಚುನಾವಣೆಯಲ್ಲಿ ಏನಾಗುತ್ತದೆ ಮತ್ತು ನಾವು ಚುನಾವಣೆಗಳನ್ನು ಏಕೆ ನಡೆಸುತ್ತೇವೆ?

ಪ್ರತಿ ಪ್ರಶ್ನೆಗೆ 1-2 ಪ್ರತಿಕ್ರಿಯೆಯನ್ನು ಪಡೆದುಕೊಳ್ಳಿ, ವಿದ್ಯಾರ್ಥಿಗಳು ಉತ್ತರಿಸದಿದ್ದರೆ ತೊಂದರೆ ಇಲ್ಲ, ಮುಂದಿನ ಪ್ರಶ್ನೆಗೆ ಹೋಗಿ. (ಈ ಪ್ರಶ್ನೆಗಳು ಅವರಿಗೆ ಎಷ್ಟು ತಿಳಿದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಅವರಲ್ಲಿ ಉತ್ಸಾಹ ಮೂಡಿಸುವುದಕ್ಕಾಗಿ)
ಶಿಕ್ಷಕರು ಪ್ರತಿಕ್ರಿಯೆಗಳನ್ನು ಸಂಕ್ಷೇಪಿಸುತ್ತಾರೆ ಮತ್ತು ACTiZEN ಕ್ಲಬ್‌ಗೆ ಪದಾಧಿಕಾರಿಗಳನ್ನು ಆರಿಸುವ ಮೂಲಕ ನಾವು ಚುನಾವಣೆ ಪ್ರಕ್ರಿಯೆಯ ಅನುಭವ ಪಡೆಯೋಣ ಎಂದು ಹೇಳುತ್ತಾರೆ

ಹಂತ 2 – ಪದಾಧಿಕಾರಿಹುದ್ದೆಗಳು ಮತ್ತು ಅರ್ಹತಾ ಮಾನದಂಡಗಳು

ಅಂದಾಜು ಸಮಯ: 20 ನಿಮಿಷಗಳು.

1. ಪದಾಧಿಕಾರಿಗಳ ಹುದ್ದೆಗೆ ಅಂದರೆ ಕ್ಲಬ್‌ನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗಳು ಮತ್ತು ಅದರ ಅರ್ಹತಾ ಮಾನದಂಡಗಳು (ಅನುಬಂಧ 1).

2. ಶಿಕ್ಷಕರು ಹೇಳುತ್ತಾರೆ, ‘ಪದಾಧಿಕಾರಿಗಳು ಕ್ಲಬ್‌ನ ಪ್ರತಿನಿಧಿಗಳಾಗಿರುತ್ತಾರೆ ಮತ್ತು ಈ ಕೆಳಗಿನ ಜವಾಬ್ದಾರಿಗಳನ್ನು ಹೊಂದಿರುತ್ತಾರೆಹುದ್ದೆಯ ಸಂಭಾವ್ಯ ಅಭ್ಯರ್ಥಿಯಾಗಿ ನಿಮ್ಮ ಹೆಸರನ್ನು ನೀಡಲು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು:

ಅರ್ಹತಾ ಮಾನದಂಡ (ಅನುಬಂಧ 1)

3. ಅಲ್ಲದೇ, ACTiZEN ಕ್ಲಬ್‌ನ ಭಾಗವಾಗಿ ಪದಾಧಿಕಾರಿಗಳು ನಿರ್ವಹಿಸಬೇಕಾದ ಹುದ್ದೆಗಳು ಮತ್ತು ಜವಾಬ್ದಾರಿಗಳು ಈ ಕೆಳಗಿನಂತಿವೆ:

ಪದಾಧಿಕಾರಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳು (ಅನುಬಂಧ 2)

4. ಪದಾಧಿಕಾರಿಗಳ ಹುದ್ದೆಗೆ ನಾಮನಿರ್ದೇಶನಗಳನ್ನು ಕೇಳಿ. ಎರಡು ಹುದ್ದೆಯ ನಾಮನಿರ್ದೇಶನಗಳನ್ನು ಕೇಳಬೇಕು. ಅಭ್ಯರ್ಥಿಗಳು ತಾವೇ ಸ್ವತಃ ನಾಮನಿರ್ದೇಶನ ಮಾಡಬಹುದು. ಭಾಷಣವು ಇವುಗಳನ್ನು ಒಳಗೊಂಡಿರಬಹುದು:

  • ಸಂಕ್ಷಿಪ್ತ ಪರಿಚಯ
  • ನೀವು ಪದಾಧಿಕಾರಿಗಳಾಗಲು ಯಾಕೆ ಬಯಸುತ್ತೀರಿ ಎಂಬುದನ್ನು ಹಂಚಿಕೊಳ್ಳಿ.
  • ಇತರ ವಿದ್ಯಾರ್ಥಿಗಳು ನಿಮಗೆ ಯಾಕೆ ಮತಹಾಕಬೇಕು ಎಂಬುದಕ್ಕೆ ಒಂದೆರಡು ಕಾರಣಗಳನ್ನು ಹಂಚಿಕೊಳ್ಳಿ.

(ಗಮನಿಸಿ: ಗ್ರೇಡ್ 6 ವಿದ್ಯಾರ್ಥಿಗಳಿಗೆ, ಅವರು ಕೂಡಲೇ ಹಂಚಿಕೊಳ್ಳಲು ಆಗದಿದ್ದರೆ, ಪಾಯಿಂಟ್ b ಮತ್ತು c ಅನ್ನು ಸಿದ್ಧಪಡಿಸಿಕೊಳ್ಳಲು ಶಿಕ್ಷಕರು ಅವರಿಗೆ ಸ್ವಲ್ಪ ಸಮಯಾವಕಾಶ ನೀಡಬಹುದು.)

5. ಚುನಾವಣಾ ದಿನಾಂಕದ ಒಂದು ದಿನ ಮೊದಲ ತನಕ ಅಭ್ಯರ್ಥಿಗಳು ಪ್ರಚಾರ ಮಾಡಬಹುದು ಎಂದು ತಿಳಿಸಿ. ಅಭ್ಯರ್ಥಿಗಳು ಪ್ರಚಾರ ನಡೆಸಲು ಕೆಲವೊಂದು ವಿಚಾರಗಳು: (ಇದೊಂದು ಐಚ್ಛಿಕ ವ್ಯಾಯಾಮ, ಆದರೆ ಶಿಕ್ಷಕರು ಅಭ್ಯರ್ಥಿಗಳೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳಬಹುದು)

  • ತಮಗೆ ಬೇಕಾದ ಪ್ರಚಾರದ ಪೋಸ್ಟರ್ ಅನ್ನು ತಾವೇ ಮಾಡಿಕೊಳ್ಳಬೇಕು ಪ್ರತಿಯೊಬ್ಬರೂ ನಿಮಗೇ ಏಕೆ ಮತ ಹಾಕಬೇಕು ಎಂಬುದನ್ನು ಇದು ಒಳಗೊಂಡಿರುತ್ತದೆ (ಶಿಕ್ಷಕರ ಅನುಮತಿಯೊಂದಿಗೆ ನೀವಿದನ್ನು ಶಾಲೆಯ ಸೂಚನಾ ಫಲಕದಲ್ಲಿ ಪ್ರದರ್ಶಿಸಬಹುದು)
  • ಪ್ರಚಾರದ ಘೋಷಣಾವಾಕ್ಯವನ್ನು ಬರೆಯುವುದು
  • ಇತರರೊಂದಿಗೆ ಸಂವಹನ ನಡೆಸುವುದು, ಅಂದರೆ, ಹೆಚ್ಚಿನ ಮತಗಳನ್ನು ಪಡೆಯಲು ನಿಮ್ಮ ಕುರಿತು ನೀವು ಜಾಹೀರಾತು ಮಾಡುವುದು.

ಸೂಚನೆ: ವಿಭಾಗವಾರು ಪ್ರಚಾರ ನಡೆಸಬೇಕು

6. ಈ ಅಭ್ಯರ್ಥಿಗಳ ಚುನಾವಣೆಯು ________ ದಿನಾಂಕದಂದು (ಚುನಾವಣೆ ದಿನಾಂಕ) ನಡೆಯಲಿದೆ ಎಂದು ಅವರಿಗೆ ಹೇಳಿ. ಇದಕ್ಕೆ ನಾವು ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಹಂತ 3 – ಚುನಾವಣೆಗಾಗಿ ಟಾಸ್ಕ್‌ಗಳನ್ನು ನಿಯೋಜಿಸುವುದು

ಅಂದಾಜು ಸಮಯ: ಸೂಚನೆಗಳನ್ನು ನೀಡಲು 10 ನಿಮಿಷಗಳು.

 “ಚುನಾವಣೆಗೆ ಮತದಾರರ ಗುರುತಿನ ಚೀಟಿ, ಮತಪತ್ರ, ಮತದಾರರ ಪಟ್ಟಿ ಮತ್ತು ಮತಪೆಟ್ಟಿಗೆಯ ಅಗತ್ಯವಿದೆ ಎಂದು ಶಿಕ್ಷಕರು ಹೇಳುತ್ತಾರೆ.

  • ಮತದಾರರ ಕಾರ್ಡ್ಪ್ರತಿ ವಿದ್ಯಾರ್ಥಿಯು ಸಣ್ಣ ಪೇಪರ್ ತುಂಡನ್ನು ಬಳಸಿಕೊಂಡು ಮತದಾರರ ನೋಂದಣಿ ಕಾರ್ಡ್ ಅನ್ನು ಸಿದ್ಧಪಡಿಸಲು/ಪ್ರಿಂಟ್ ಮಾಡಲು ಹೇಳಿ.
  • ಮತ ಪತ್ರಪ್ರತಿ ಪದಾಧಿಕಾರಿ ನೇಮಕಾತಿಗಾಗಿ ಮತಪತ್ರಗಳನ್ನು ಸಿದ್ಧಪಡಿಸಲು 2-3 ವಿದ್ಯಾರ್ಥಿಗಳು/ಗುಂಪಿಗೆ ಜವಾಬ್ದಾರಿ ನೀಡಿ, ತರಗತಿಯ ಗಾತ್ರಕ್ಕೆ ತಕ್ಕಂತೆ ಅಥವಾ ಪ್ರತಿ ವಿದ್ಯಾರ್ಥಿಗೆ ಒಂದು ಮತಪತ್ರದಂತೆ ಸಿದ್ಧಪಡಿಸಬಹುದು. ನೋಟಾದ ಒಂದು ಸಾಲು. ವಿದ್ಯಾರ್ಥಿಗಳು ಯಾವುದೇ ಅಭ್ಯರ್ಥಿಗೆ ಮತದಾನ ಮಾಡಲು ಬಯಸದೇ ಇದ್ದಲ್ಲಿ ನೋಟಾಮೇಲಿನ ಯಾರೂ ಅಲ್ಲ ಎಂಬುದನ್ನು ಟಿಕ್ ಮಾಡಬಹುದು ಎಂದು ಹೇಳಿ.
  • ಮತದಾರರ ಪಟ್ಟಿಹಾಜರಾತಿ ಪಟ್ಟಿಯ ನಕಲು ಪ್ರತಿಯನ್ನು ತೆಗೆದುಕೊಂಡು ವಿದ್ಯಾರ್ಥಿಗಳ ಸಹಿಗಾಗಿ ಸ್ಥಳವನ್ನು ಖಾಲಿ ಬಿಡಿ.
  • ಮತಪೆಟ್ಟಿಗೆಕೆಲವು ವಿದ್ಯಾರ್ಥಿಗಳು /ಶಿಕ್ಷಕರು ಶೂ ಬಾಕ್ಸ್ ಅಥವಾ ರಟ್ಟಿನ ಪೆಟ್ಟಿಗೆಯ ಮೇಲೆ ಸಣ್ಣ ಸೀಳು ಮಾಡಿ ಮತಪೆಟ್ಟಿಗೆಯನ್ನು ಸಿದ್ಧಪಡಿಸಬಹುದು.

ಮೇಲಿನ ಎಲ್ಲವುಗಳ ಮಾದರಿಯನ್ನು ನಿಮ್ಮ ಉಲ್ಲೇಖಕ್ಕಾಗಿ ಅನುಬಂಧ 3 ರಲ್ಲಿ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಚುನಾವಣೆಗೆ ಮತದಾರರ ಕಾರ್ಡ್ ಮತ್ತು ಮತಪತ್ರವನ್ನು ತಯಾರಿಸುವ ಟಾಸ್ಕ್ ಅನ್ನು ನಿಯೋಜಿಸಿ ಅದನ್ನು ಸಲ್ಲಿಸಲು ನಿರ್ದಿಷ್ಟ ದಿನಾಂಕವನ್ನು ನೀಡಿ. ಶಿಕ್ಷಕರು ಮತದಾರರ ಪಟ್ಟಿ ಮತ್ತು ಮತಪೆಟ್ಟಿಗೆಯನ್ನು ಚುನಾವಣೆಯ ದಿನಕ್ಕಾಗಿ ಕಾಯ್ದಿರಿಸುತ್ತಾರೆ

ಚುನವಣೆಯ ದಿನಾಂಕವನ್ನು ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿ ಮತದಾರರ ಕಾರ್ಡ್ ಅನ್ನು ತರುವಂತೆ ಮತ್ತು  ಮತ ಹಾಕಲು ಆ ದಿನ ಹಾಜರಿರುವಂತೆ ತಿಳಿಸಿ. ಚುನಾವಣೆ ದಿನಾಂಕಕ್ಕೆ ಮೊದಲು ಎಲ್ಲಾ ಟಾಸ್ಕ್‌ಗಳು ಪೂರ್ಣಗೊಂಡಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಅಂದಾಜು ಸಮಯ: 45 ನಿಮಿಷಗಳು.

ಹಂತ 4 – ಮತಪೆಟ್ಟಿಗೆಯನ್ನು ಸಿದ್ಧಪಡಿಸಿ

ಅಂದಾಜು ಸಮಯ: 5 ನಿಮಿಷಗಳು

ತರಗತಿಯಲ್ಲಿ ಮತಪೆಟ್ಟಿಗೆಯನ್ನು ಜೋಡಿಸಿ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಮತಪತ್ರಗಳನ್ನು ವಿತರಿಸಿ.

ಸೂಚನೆ: ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೆಎರಡು ಮತಪೆಟ್ಟಿಗೆಗಳನ್ನು ಜೋಡಿಸಿ ಏಕಕಾಲದಲ್ಲಿ ಎರಡು ಗುಂಪುಗಳು ಮತ ಚಲಾವಣೆ ಮಾಡುವಂತೆ ತರಗತಿಯನ್ನು ವಿಂಗಡಿಸಬಹುದು. (ಎರಡು ಬೂತ್‌ಗಳನ್ನು ಜೋಡಿಸುವಂತೆ)

ಹಂತ 5 – ರಹಸ್ಯ ಮತಪೆಟ್ಟಿಗೆಯ ಮೂಲಕ ಮತ ಚಲಾಯಿಸುವುದು

ಅಂದಾಜು ಸಮಯ: 20 ನಿಮಿಷಗಳು.

ವಿದ್ಯಾರ್ಥಿಗಳು ರಹಸ್ಯ ಮತಪೆಟ್ಟಿಗೆಯ ಮೂಲಕ ಒಂದು ಬಾರಿಗೆ ಒಬ್ಬ ವಿದ್ಯಾರ್ಥಿಯಂತೆ ಮತ ಚಲಾವಣೆ ಮಾಡಿದ್ದಾರೆಯೇ.
ಪ್ರತಿ ವಿದ್ಯಾರ್ಥಿಯು ಮತಪಟ್ಟಿಯಲ್ಲಿ ತಮ್ಮ  ಹೆಸರನ್ನು ಹುಡುಕಿ ಅದರ ಮುಂದೆ ಸಹಿ ಮಾಡಬೇಕು. ನಂತರ ವಿದ್ಯಾರ್ಥಿಗೆ ಮತ ಚಲಾಯಿಸಲು ಮತಪೆಟ್ಟಿಗೆ ದೊರೆಯುತ್ತದೆ.

ವಿದ್ಯಾರ್ಥಿಯು ರಹಸ್ಯವಾಗಿ ಓದಿ ಮತಪೆಟ್ಟಿಗೆಯನ್ನು ಭರ್ತಿ ಮಾಡಲು ಖಾಸಗಿ ಸ್ಥಳವನ್ನು ಹೊಂದಿರಬೇಕು. ಮೂಲೆಯಲ್ಲಿರುವ ಕೆಲವು ಡೆಸ್ಕ್‌ಗಳನ್ನು ಇದಕ್ಕಾಗಿ ಉಪಯೋಗಿಸಬಹುದು. ಪರಿಣಾಮಕಾರಿಯಾಗಿರಲು ವಿದ್ಯಾರ್ಥಿಯು ಇನ್ನಷ್ಟು ಖಾಸಗಿಯಾಗಿ ಭರ್ತಿ ಮಾಡುವಂತೆ ಮತದಾರರ ಬೂತ್ ಅನ್ನು ಸಿದ್ಧಪಡಿಸಬಹುದು-ರೆಫ್ರಿಜರೇಟರ್ ಅನ್ನು ಪ್ಯಾಕ್ ಮಾಡುವ ರಟ್ಟಿನ ಪೆಟ್ಟಿಗೆಯು ಬೂತ್‌ನಂತೆ ಕಾರ್ಯನಿರ್ವಹಿಸಬಲ್ಲದು. ಇದು ರಹಸ್ಯ ಮತಪೆಟ್ಟಿಗೆ ಮತ್ತು ತಾವು ಬಯಸುವ ಯಾವುದೇ ಅಭ್ಯರ್ಥಿಗೆ ಅವರು ಮತದಾನ ಮಾಡಬಹುದು- ಇಂಥವರಿಗೇ ಮತ ಚಲಾಯಿಸಬೇಕೆಂದು (ಅಥವಾ ಚಲಾಯಿಸಬಾರದೆಂದು) ಯಾರೂ ಯಾರಿಗೂ ಒತ್ತಡ ಹೇರುವಂತಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ನೆನಪಿಸಿ! ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಭರ್ತಿ ಮಾಡಿದ ನಂತರ, ತಮ್ಮ ಮತಪತ್ರವನ್ನು ತಮ್ಮ ಮತಪೆಟ್ಟಿಗೆಯೊಳಗೆ ಹಾಕಬುಹುದು.

ಸೂಚನೆ: ಪೆನ್ನು ಬಳಸಿ ತೋರು ಬೆರಳಿಗೆ ಶಾಯಿ ಹಾಕುವ ಮೂಲಕ ಶಾಲೆಗಳು ವಾಸ್ತವ ಅನುಭವಕ್ಕೆ ಹತ್ತಿರವಾಗುವಂತೆ ಮಾಡಬಹುದು. (ಐಚ್ಛಿಕ)

ಫಲಿತಾಂಶ ಹಾಳೆಯ ಮಾದರಿಯನ್ನು ಈ ಕೆಳಗೆ ನೀಡಲಾಗಿದೆ:

ಹಂತ 6 – ಮತ ಎಣಿಕೆ

ಅಂದಾಜು ಸಮಯ: 10 ನಿಮಿಷಗಳು.

ನೀವು ಪ್ರತಿ ಮತಪತ್ರವನ್ನು ಎಣಿಸುತ್ತಿದ್ದಂತೆ, ಮತಗಳನ್ನು ಬೋರ್ಡ್ ಮೇಲೆ ತಾಳೆ ಮಾಡಿ ( ಉನ್ನತ ಗ್ರೇಡ್‌ನ ವಿದ್ಯಾರ್ಥಿಗಳಿಗೆ ನೀವು ಶೇಕಡಾವಾರು ಮತಗಳನ್ನು ಲೆಕ್ಕಹಾಕಬಹುದು). ಮತ ಎಣಿಕೆಯ ನಂತರ, ಮತಪತ್ರಗಳ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಸಮನಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅತಿ ಹೆಚ್ಚು ಸಂಖ್ಯೆಯ ಮತಗಳನ್ನು ಹೊಂದಿದ ಅಭ್ಯರ್ಥಿಯನ್ನು ವಿಜೇತ ಅಂದರೆ ಕ್ಲಬ್‌ನ ಅಧ್ಯಕ್ಷ ಎಂದು ಘೋಷಿಸಲಾಗುತ್ತದೆ, ಎರಡನೇ ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯು ಆಯಾ ತರಗತಿಗೆ ಕ್ಲಬ್‌ನ ಉಪಾಧ್ಯಕ್ಷರಾಗುತ್ತಾರೆ. ಟೈ ಆಗಿದ್ದರೆ, ನೀವು ಮತ್ತೊಂದು ಸುತ್ತಿನ ಮತದಾನ ಮಾಡಬಹುದು ಅಥವಾ ಶಿಕ್ಷಕರು ತಮ್ಮ ಮತವನ್ನು ಚಲಾಯಿಸಬಹುದು.

ಹಂತ 7 – ಫಲಿತಾಂಶಗಳ ಪ್ರಕಟಣೆ

ಅಂದಾಜು ಸಮಯ: 10 ನಿಮಿಷಗಳು.

ಮತಗಳ ಲೆಕ್ಕಾಚಾರದ ಆಧಾರದಲ್ಲಿ ACTiZENS’ ಕ್ಲಬ್‌ನ ವಿಜೇತರು ಮತ್ತು ಪದಾಧಿಕಾರಿಗಳನ್ನು ಘೋಷಿಸಿ ಬೆಳಗ್ಗಿನ ಅಸೆಂಬ್ಲಿ ಅಥವಾ ಪ್ರಕಟಣೆಯಲ್ಲಿ ಹೊಸದಾಗಿ ಚುನಾಯಿತರಾದ ಪದಾಧಿಕಾರಿಗಳಿಗೆ ಬ್ಯಾಡ್ಜ್‌ಗಳನ್ನು ಹಸ್ತಾಂತರಿಸುವ ಮೂಲಕ ಕ್ಲಬ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿ. ಪದಾಧಿಕಾರಿಗಳು ಜವಾಬ್ದಾರಿಗಳನ್ನು ಪೂರೈಸುವ ಪ್ರಮಾಣವಚನೆಕ್ಕೆ ಸಹಿ ಹಾಕುವರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಪ್ರಮಾಣವಚನವನ್ನು ಅನುಬಂಧ 4 ರಲ್ಲಿ ನೀಡಲಾಗಿದೆ.’

*ಪದಾಧಿಕಾರಿಗಳಿಗೆ ನೀಡುವ ಬ್ಯಾಡ್ಜ್‌ಗಳನ್ನು ದೇಶ್ ಅಪ್ನಾಯೇ ಸಹಯೋಗ್ ಫೌಂಡೇಶನ್ ಒದಗಿಸುತ್ತದೆ.

(ಸೂಚನೆ: ಪ್ರಮಾಣವಚನಕ್ಕೆ ಸಹಿ ಹಾಕಬೇಕು ಮತ್ತು ಸಮಯವಿದ್ದರೆ, ಶಿಕ್ಷಕರು ಆಯಾ ತರಗತಿಗಳ ಎದುರು ಪ್ರಮಾಣವಚನವನ್ನು ಓದಲು ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಹ್ವಾನಿಸಬಹುದು)

ಪ್ರಮುಖ ಕಲಿಕಾ ವಿಷಯಗಳು

  • ನಮ್ಮ ಪರವಾಗಿ ನಮ್ಮನ್ನು ಪ್ರತಿನಿಧಿಸುವ ನಾಯಕರನ್ನು ಆಯ್ಕೆ ಮಾಡಲು ಮತ್ತು ತಮ್ಮನ್ನು ಹೊಣೆಗಾರರನ್ನಾಗಿ ಮಾಡಲು ಚುನಾವಣೆಗಳು ನಮಗೆ ಸಹಾಯ ಮಾಡುತ್ತವೆ.
  • ಜಾವಾಬ್ದಾರಿಯುತ ನಾಗರಿಕರಾಗಿರುವುದರ ಕುರಿತು ಮತ್ತು ನಮ್ಮ ಮತವು ಎಷ್ಟು ಪ್ರಮುಖ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ
  • ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಿರ್ಧಾರ ತೆಗೆದುಕೊಳ್ಳುವಲ್ಲಿ ನಮ್ಮ ಧ್ವನಿಯೂ ಇದೆ ಎಂದು ತಿಳಿದುಕೊಳ್ಳಲು ನೆರವಾಗುತ್ತದೆ.
  • ಭಾರತದಲ್ಲಿ, 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು, ಮತದಾರರಾಗಿ ನೋಂದಣಿ ಪಡೆಯುವ ಮೂಲಕ ಚುನಾವಣೆಗಳಲ್ಲಿ ಮತ ಚಲಾಯಿಸಬಹುದು.
  • ನಾವು ಮತ ಹಾಕದಿದ್ದರೆ, ನಮ್ಮ ನಾಯಕನ್ನು ಆಯ್ಕೆಮಾಡುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. 
  • ಕಡಿಮೆ ಮತದಾನವು ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಜನರ ಇಚ್ಛೆಯನ್ನು ಪೂರ್ತಿಯಾಗಿ ಪ್ರತಿಬಿಂಬಿಸುವುದಿಲ್ಲ.
  • ರಹಸ್ಯ ಮತಪೆಟ್ಟಿಗೆಯು ಮತದಾರರಿಗೆ ಯಾವುದೇ ಭಯವಿಲ್ಲದೇ ಮತ ಚಲಾಯಿಸಲು ಮತ್ತು ತಮ್ಮ ಮತವು ಗೌಪ್ಯವಾಗಿದೆ ಎಂದು ತಿಳಿದುಕೊಳ್ಳಲು ಉತ್ತೇಜಿಸುತ್ತದೆ.
  • ಮತದಾರರ ಗುರುತಿನ ಚೀಟಿಯು ಮತದಾರರ ಗುರುತನ್ನು ಪರಿಶೀಲಿಸಲು ನೆರವಾಗುತ್ತದೆ.
  • ನೋಟಾ ಅಂದರೆ, ಮೇಲಿನ ಯಾರೂ ಅಲ್ಲ ಆಯ್ಕೆ, ಇದು ಮತದಾರರಿಗೆ ಅಭ್ಯರ್ಥಿಗಳು ಅರ್ಹರಲ್ಲ ಎನಿಸಿದರೆ ಯಾರಿಗೂ ಮತ ಚಲಾಯಿಸದೇ ಇರಲು ನೆರವಾಗುತ್ತದೆ.

ದೇಶ್ ಅಪ್ನಾಯೇ ಫಲಕವು ಆಯಾ ತಿಂಗಳ ಥೀಮ್ ಪ್ರಕಾರ ACTiZEN  ಕ್ಲಬ್‌ನ ಮಾಸಿಕ ಚಟುವಟಿಕೆಗಳನ್ನು ಹಾಕಲು ಮೀಸಲಾದ ಸ್ಥಳ. ಈ ಚಟುವಟಿಕೆಗೆ, ಪದಾಧಿಕಾರಿಗಳು ಫಲಕದ ಮೇಲೆ ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು. 

  • ಅಭ್ಯರ್ಥಿಗಳ ಪ್ರಚಾರ ವಸ್ತುಗಳು- ಹೇಳಿಕೆಗಳು, ಘೋಷಣೆಗಳು, ಪೋಸ್ಟರ್‌ಗಳು ಇತ್ಯಾದಿ. 
  •  ವಿಜೇತರ ಘೋಷಣೆACTiZEN ಕ್ಲಬ್ ಪದಾಧಿಕಾರಿಗಳ ಹೆಸರುಗಳ ಪಟ್ಟಿ  
  • ಚುನಾಯಿತ ಪದಾಧಿಕಾರಿಯ ಸರಿಯಾಗಿ ಸಹಿಮಾಡಲಾದ ಪ್ರಮಾಣವಚನ 

  • ಎಲ್ಲಾ ವಿದ್ಯಾರ್ಥಿಗಳು ವಿಶೇಷವಾಗಿ ಮತದಾನದ ದಿನ ಸಂಪೂರ್ಣ ಹಾಜರಾತಿಯೊಂದಿಗೆ ಭಾಗವಹಿಸಲು ಉತ್ತೇಜಿಸಿ.
  • ಚುನಾವಣೆ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಿ.
  • ಚಟುವಟಿಕೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಚಾಕ್ಲೇಟ್ /ಬಹುಮಾನಗಳನ್ನು ನೀಡದಿರಿ.
  • ನಾಮನಿರ್ದೇಶನ ಅಥವಾ ಮತದಾನ ಪ್ರಕ್ರಿಯೆಯಲ್ಲಿ ಬೆದರಿಕೆಗಳಿಗೆ ಅವಕಾಶ ನೀಡದಿರಿ.
  • ಚಟುವಟಿಕೆಯ ನಂತರ ಪ್ರಮುಖ ಕಲಿಕಾ ವಿಷಯಗಳನ್ನು ವಿವರಿಸುವುದು ಮತ್ತು ಚರ್ಚಿಸುವುದರ ಪ್ರಾಮುಖ್ಯತೆಯನ್ನು ಕಡೆಗಣಿಸಬೇಡಿ.  
  • IVR ಪ್ರತಿಕ್ರಿಯೆ ಅರ್ಜಿಯನ್ನು ಈ ತಿಂಗಳ 30ನೇ ತಾರೀಖಿನೊಳಗೆ ಭರ್ತಿ ಮಾಡಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪ್ರತಿಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಅಂಗೀಕರಿಸುವ ಪ್ರಮಾಣಪತ್ರಗಳನ್ನು ಮುಂದಿನ ತಿಂಗಳು 10ನೇ ತಾರೀಖಿನೊಳಗೆ ನೀಡಲಾಗುತ್ತದೆ
  • ಚಟುವಟಿಕೆ ಪುರಾವೆಗಳಿಗೆ, ದಯವಿಟ್ಟು ಈ ಕೆಳಗಿನವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ 
  • ಸಹಿ ಮಾಡಲಾದ ಮತದಾರರ ಪಟ್ಟಿ.

ಮತ ಚಲಾಯಿಸುತ್ತಿರುವ ವಿದ್ಯಾರ್ಥಿಗಳು.

  • ಮತಪೆಟ್ಟಿಗೆ
  • ಫಲಿತಾಂಶಗಳ ತಾಳೆಯಾಗುವಿಕೆ
  • ದೇಶ್ ಅಪ್ನಾಯೇ ಗೋಡೆ
  • Actizen ಕ್ಲಬ್ ಪದಾಧಿಕಾರಿಗಳ ಹೆಸರುಗಳ ಪಟ್ಟಿ 

ಶಿಕ್ಷಕರ ಪ್ರತಿಕ್ರಿಯೆ ಅರ್ಜಿ (IVR ಪ್ರತಿಕ್ರಿಯೆ)

1) ಈ ಕರೆಯಲ್ಲಿ ನೀವು ಯಾವ ತರಗತಿಯ  ಚಟುವಟಿಕೆಯ ಪ್ರತಿಕ್ರಿಯೆಯನ್ನು ನೀಡಲು ಬಯಸುತ್ತೀರಿ?

ಗ್ರೇಡ್ 6 ಗಾಗಿ - 1 ಅನ್ನು ಒತ್ತಿರಿ

ಗ್ರೇಡ್ 7 ಗಾಗಿ- 2 ಅನ್ನು ಒತ್ತಿ

2)  ತರಗತಿಯಲ್ಲಿನ ಒಟ್ಟಾರೆ ಜುಲೈ ಚಟುವಟಿಕೆಯ ಅನುಭವ ಹೇಗಿತ್ತು?

ಚನ್ನಾಗಿತ್ತು ಎನ್ನುವುದಾದರೆ- 1 ಅನ್ನು ಒತ್ತಿ

ಸರಾಸರಿ ಎನ್ನುವುದಾದರೆ -2 ಅನ್ನು ಒತ್ತಿ

ಸುಧಾರಣೆ ಅಗತ್ಯವಿದೆ ಎನ್ನುವುದಾದರೆ -3 ಅನ್ನು ಒತ್ತಿರಿ

3) ನೀವು ಈ ಚಟುವಟಿಕೆಯ ಚಿತ್ರಗಳು/ವೀಡಿಯೊಗಳನ್ನು ಆಯಾ ಎಂಗೇಜ್ಮೆಂಟ್ ಅಧಿಕಾರಿಗೆ ಸಲ್ಲಿಸಿದ್ದೀರಾ?

ಹೌದಾದರೆ - 1 ಅನ್ನು ಒತ್ತಿ

ಇಲ್ಲವಾದರೆ -2 ಅನ್ನು ಒತ್ತಿ

4) ನೀವು ಯಾವುದೇ ಇತರ ತರಗತಿಗೆ  ಪ್ರತಿಕ್ರಿಯೆ ನೀಡಲು ಬಯಸುವಿರಾ?

ಹೌದು ಎನ್ನುವುದಾದರೆ -1 ಅನ್ನು ಒತ್ತಿ ಪ್ರಶ್ನೆ 1-4 ರಿಂದ ಪ್ರಕ್ರಿಯೆಯನ್ನು ಪುನರಾವರ್ತಿಸಿ

ಇಲ್ಲ ಎನ್ನುವುದಾದರೆ-2 ಅನ್ನು ಒತ್ತಿರಿ,

ನಿಮ್ಮ ಸಮಯಕ್ಕೆ ಧನ್ಯವಾದಗಳು, ನಿಮ್ಮ ಸಲ್ಲಿಕೆಯನ್ನು ಯಶಸ್ವಿಯಾಗಿ ದಾಖಲಿಸಲಾಗಿದೆ.

  • ಆಕ್ಟಿಝೆನ್ (ACTiZEN) ಕ್ಲಬ್ ಸಮರ್ಥಕರಾಗುವ ಇಚ್ಛೆ.
  • ಕ್ಲಬ್‌ನ ಪ್ರತಿನಿಧಿಯು ಕ್ಲಬ್‌ನ ಸುಗಮ ರೀತಿಯ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಬೇಕು
  • ಇತರ ಸಹಪಾಠಿಗಳೊಂದಿಗೆ ಸಂವಹನ ನಡೆಸಿ ಉತ್ತೇಜಿಸಲು ಸಾಧ್ಯವಾಗಬೇಕು.
  • ಪ್ರಚಾರ ಪ್ರಕ್ರಿಯೆಯ ಭಾಗವಾಗಿ 2-3 ನಿಮಿಷಗಳ ಭಾಷಣವನ್ನು ಪ್ರಸ್ತುತಪಡಿಸಬೇಕಾಗುತ್ತದೆ ಮತ್ತು ಈ ಭಾಷಣವು ಕೆಳಗಿನ ವಿಷಯಗಳನ್ನು ಒಳಗೊಂಡಿರಬಹುದು:
  1. ಸಂಕ್ಷಿಪ್ತ ಪರಿಚಯ
  2. ಪದಾಧಿಕಾರಿಯಾಗಲು ನೀವೇಕೆ ಬಯಸುತ್ತೀರಿ ಎಂಬುದನ್ನು ಹಂಚಿಕೊಳ್ಳಿ.
  3. ಇತರ ವಿದ್ಯಾರ್ಥಿಗಳು ನಿಮಗೇಕೆ ಮತ ಹಾಕಬೇಕು ಎಂಬುದಕ್ಕೆ ಒಂದು ಅಥವಾ ಎರಡು ಕಾರಣಗಳನ್ನು ಹಂಚಿಕೊಳ್ಳಿ.

ಅನುಬಂಧ 2 – ಪದಾಧಿಕಾರಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳು

ಪ್ರಾರಂಭದಲ್ಲಿಯೇ ಅಭ್ಯರ್ಥಿಗಳ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಪರಿಚಯಿಸಬೇಕು.

1. Actizen ಕ್ಲಬ್‌ನ ಅಧ್ಯಕ್ಷರು

  • ಕ್ಲಬ್‌ನ ಪ್ರಾತಿನಿಧ್ಯ ವಹಿಸುವುದು 
  • ಚಟುವಟಿಕೆಯಲ್ಲಿ ಉಲ್ಲೇಖಿಸಿದಂತೆ ಶಿಕ್ಷಕರಿಗೆ ಚಟುವಟಿಕೆಗಳನ್ನು ನಡೆಸಲು ಬೆಂಬಲ ನೀಡುವುದು ಮತ್ತು ಚಟುವಟಿಕೆ ಕಲಿಕೆಯನ್ನು ಮುನ್ನಡೆಸುವುದು, ಅಂದರೆ, ತರಗತಿಯಲ್ಲಿ ವಿವರವಾಗಿ ಚರ್ಚಿಸುವುದು
  • ಪ್ರತಿ ಚಟುವಟಿಕೆಗೆ ದೇಶ್ ಅಪ್ನಾಯೇ ಫಲಕವನ್ನು ಅಪ್‌ಡೇಟ್ ಮಾಡುವುದು. (ಪ್ರತಿ ಚಟುವಟಿಕೆಯಲ್ಲಿ ಉಲ್ಲೇಖಿಸಿದಂತೆ)
  • ಪದಾಧಿಕಾರಿಗಳ ಪುನರ್ಮನನದ ನಂತರ ಚಟುವಟಿಕೆ ವರದಿಗಳನ್ನು ಭರ್ತಿ ಮಾಡುವುದು (IVR/ಗೂಗಲ್ ಫಾರ್ಮ್)
  • ರಿಫ್ಲೆಕ್ಷನ್ ಹಾಳೆಗಳನ್ನು ಭರ್ತಿ ಮಾಡಲು ಉಪಾಧ್ಯಕ್ಷರು 5 ವಿದ್ಯಾರ್ಥಿಗಳನ್ನು ಹೊಂದಿದ್ದಾರೆ ಎಂಬುದನ್ನು ಖಾತ್ರಿಪಡಿಸಿ. (IVR/ಗೂಗಲ್ ಫಾರ್ಮ್)

2. Actizen ಕ್ಲಬ್‌ನ ಉಪಾಧ್ಯಕ್ಷರು

  • ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಕ್ಲಬ್ ಅನ್ನು ಪ್ರತಿನಿಧಿಸುವುದು 
  • ಚಟುವಟಿಕೆ ಕಲಿಕೆಯನ್ನು ನಡೆಸಲು ಅಧ್ಯಕ್ಷರಿಗೆ ನೆರವಾಗುವುದು ಅಂದರೆ, ತರಗತಿಯಲ್ಲಿ ಮತ್ತು ಅಗತ್ಯವಿದ್ದರೆ ಇತರ ಟಾಸ್ಕ್‌ಗಳಲ್ಲಿ ವಿವರವಾಗಿ ಚರ್ಚಿಸುವುದು.
  • ACTiZENa ಕ್ಲಬ್ ಚಟುವಟಿಕೆ ರೆಕಾರ್ಡ್‌ಗಳನ್ನು ನಿರ್ವಹಿಸುವುದು (ಚಟುವಟಿಕೆಗಳಲ್ಲಿ ಮಾಡಲಾದ ಕೆಲಸ, ದೇಶ್ ಅಪ್ನಾಯೇ ಫಲಕ ವಸ್ತು).
  • ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಚಟುವಟಿಕೆ ವರದಿಯನ್ನು ಸಲ್ಲಿಸುವುದು. (IVR/ಗೂಗಲ್ ಫಾರ್ಮ್)
  • ರಿಫ್ಲೆಕ್ಷನ್ ಹಾಳೆ ಭರ್ತಿ ಮಾಡಲು 5 ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು. (IVR/ಗೂಗಲ್ ಫಾರ್ಮ್)

ಅನುಬಂಧ  3 – ಮಾದರಿ ಫಾರ್ಮ್ಯಾಟ್‌ಗಳು

A. ಮಾದರಿ ಮತ ಪತ್ರ

ಪ್ರತಿ ಪದಾಧಿಕಾರಿ ನೇಮಕಾತಿಗಾಗಿ ಮತಪತ್ರಗಳನ್ನು ಸಿದ್ಧಪಡಿಸಲು 2-3 ವಿದ್ಯಾರ್ಥಿಗಳು/ಗುಂಪಿಗೆ ಜವಾಬ್ದಾರಿ ನೀಡಿ, ತರಗತಿಯ ಗಾತ್ರಕ್ಕೆ ತಕ್ಕಂತೆ ಅಥವಾ ಪ್ರತಿ ವಿದ್ಯಾರ್ಥಿಗೆ ಒಂದು ಮತಪತ್ರದಂತೆ ಪ್ರಿಂಟ್ ಔಟ್ ತೆಗೆಯುವ ಮೂಲಕ ಅಥವಾ ಹಾಳೆ ಮತ್ತು ಪೆನ್ನು ಬಳಸಿ ಕೈಯಿಂದಲೇ  ಸಿದ್ಧಪಡಿಸಬಹುದು. ಪರ್ಯಾಯವಾಗಿ ಪ್ರತಿ ವಿದ್ಯಾರ್ಥಿಗೆ ಒಂದು ಮತಪತ್ರವನ್ನು ನಿಯೋಜಿಸಬೇಕು. ಚುನಾಯಿತರಾಗಲು ನಾಮನಿರ್ದೇಶಿತ ವಿದ್ಯಾರ್ಥಿಗಳ ಹೆಸರನ್ನು ದಯವಿಟ್ಟು ಒದಗಿಸಿ. 

ಮಾದರಿಯೊಂದನ್ನು ಈ ಕೆಳಗೆ ನೀಡಲಾಗಿದೆ:

 B. ಮಾದರಿ ಮತದಾರರ ನೋಂದಣಿ ಕಾರ್ಡ್

ಪ್ರತಿ ವಿದ್ಯಾರ್ಥಿಗೆ ಸಣ್ಣ ಕಾಗದದ ತುಂಡನ್ನು ಬಳಸಿಕೊಂಡು ಮತದಾರರ ನೋಂದಣಿ ಕಾರ್ಡ್ಅನ್ನು ಸಿದ್ಧಪಡಿಸಲು/ಪ್ರಿಂಟ್ ಮಾಡಲು ಹೇಳಿ. ಮತವನ್ನು ನೋಂದಣಿ ಮಾಡಲು, ಪ್ರತಿ ಮಗುವು ಅಣಕು ಮತದಾರರ ನೋಂದಣಿ ಕಾರ್ಡ್ ಅನ್ನು ಭರ್ತಿ ಮಾಡಬೇಕು, ಇದರಲ್ಲಿ ಅವರು ತಮ್ಮ ಹೆಸರು, ತರಗತಿ, ಗ್ರೇಡ್, ಮತ್ತು ನೀವು ಬಯಸುವ ಇತರ ಮಾಹಿತಿಯನ್ನು ಭರ್ತಿ ಮಾಡಬೇಕು. ಈ ಪ್ರಕ್ರಿಯೆಯು ಚುನಾವಣೆ ದಿನಕ್ಕೂ ತುಂಬಾ ಮೊದಲೇ ವಯಸ್ಕರು ಯಾಕೆ ಅಧಿಕೃತವಾಗಿ ನೋಂದಣಿ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ.

 ಮಾದರಿಯೊಂದನ್ನು ಈ ಕೆಳಗೆ ನೀಡಲಾಗಿದೆ:

C. ಮತದಾರರ ಪಟ್ಟಿ

ಶಿಕ್ಷಕರು ಮತದಾರರ ಎಲ್ಲಾ ನೋಂದಣಿ ಕಾರ್ಡ್‌ಗಳನ್ನು ಸಂಗ್ರಹಿಸಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ಪ್ರತಿ ವಿದ್ಯಾರ್ಥಿಯ ಹೆಸರಿನ ಎದುರು ಅವರಿಗೆ ಮತಪತ್ರ ನೀಡುವ ಮೊದಲು ಸಹಿ ಹಾಕುವುದಕ್ಕೆ ಸ್ಥಳ ಬಿಡಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಈ ಪ್ರಕ್ರಿಯೆಯು ಒಂದು ಚುನಾವಣಾ ಅವೃತ್ತಿಯಲ್ಲಿ ಜನರು ಕೇವಲ ಒಂದು ಬಾರಿ ಮಾತ್ರವೇ ಮತದಾನ ಮಾಡಬಹುದು ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲಿ. ವಿದ್ಯಾರ್ಥಿಗಳು ಸಹಿಮಾಡಲು ಸ್ಥಳಾವಕಾಶ ಇರುವಂತೆ ಹಾಜರಾತಿ ಪಟ್ಟಿಯ ನಕಲನ್ನು ಶಿಕ್ಷಕರು ಬಳಸಬಹುದು.

ಮಾದರಿಯೊಂದನ್ನು ಈ ಕೆಳಗೆ ನೀಡಲಾಗಿದೆ:

D. ಮತ ಪೆಟ್ಟಿಗೆ

ವಿದ್ಯಾರ್ಥಿಗಳು /ಶಿಕ್ಷಕರ ಗುಂಪು ಶೂಬಾಕ್ಸ್ ಅಥವಾ ರಟ್ಟಿನ ಪೆಟ್ಟಿಗೆಯ ಮೇಲೆ  ಸಣ್ಣ ಸೀಳೊಂದನ್ನು ಮಾಡಿ ಮತಪೆಟ್ಟಿಗೆ ತಯಾರಿಸಲು ಬಳಸಬಹುದು. ಅವರು ಬಯಸಿದರೆ ಅದನ್ನು ಬಣ್ಣದ ಹಾಳೆಯಲ್ಲಿ ಮುಚ್ಚಿ "ಬ್ಯಾಲೆಟ್ ಬಾಕ್ಸ್ BOX - ACTiZENS’ ಕ್ಲಬ್ ಎಂದು ಲೇಬಲ್ ಮಾಡಬಹುದು.

ಅನುಬಂಧ 4 –ಪದಾಧಿಕಾರಿಗಳ ಪ್ರಮಾಣವಚನs

(ಶಿಕ್ಷಕರು ಪ್ರಮಾಣವಚನದ ನಕಲು ಮಾಡಬಹುದು ಅಥವಾ ವಿದ್ಯಾರ್ಥಿಗೆ ಮಾಡಲು ಹೇಳಬಹುದು)

Related Articles

Disclaimer


The Desh Apnayen Sahayog Foundation website has been translated for your convenience using translation software powered by Google Translate. Reasonable efforts have been made to provide an accurate translation. However, no automated translation is perfect or intended to replace human translators. Translations are provided as a service to the Desh Apnayen Sahayog Foundation website users and are provided "as is." No warranty of any kind, either expressed or implied, is made as to the accuracy, reliability, or correctness of any translations made from the English Language into any other language. Some content (such as images, videos, Flash, etc.) may need to be accurately translated due to the limitations of the translation software.

This will close in 5 seconds

You cannot copy content of this page