ಕರ್ನಾಟಕ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಗ್ರೇಡ್ 6 ಡಿಸೆಂಬರ್ ಚಟುವಟಿಕೆ – ಅಣಕು ಪಂಚಾಯತ್-ಮುನ್ಸಿಪಾಲಿಟಿ
ಉದ್ದೇಶಗಳು
- ಅಣಕು ಪಂಚಾಯತ್‌ನಲ್ಲಿ ಭಾಗವಹಿಸಿ ಸ್ಥಳೀಯ ಆಡಳಿತಕ್ಕೆ ಸ್ಥಳೀಯ ಸಮಸ್ಯೆಗಳನ್ನು ಹೇಳುವುದು/ಹಂಚಿಕೊಳ್ಳುವುದರ ಅನುಭವ ಪಡೆಯುವುದು.
ಕೌಶಲ್ಯಗಳು
ಸಂವಹನ, ಸಮಸ್ಯೆ ಪರಿಹಾರ.
ಮೌಲ್ಯಗಳು
ನಾಗರಿಕ ಜವಾಬ್ದಾರಿ, ಪರಾನುಭೂತಿ
ಬೇಕಾದ ಸಾಮಗ್ರಿಗಳು
ನೋಟ್‌ಬುಕ್ ಗಳು, ಪೆನ್ ಗಳು
ಚಟುವಟಿಕೆ-ಪೂರ್ವ ಸಿದ್ಧತೆ
- ಚಟುವಟಿಕೆಯಲ್ಲಿ ಪಂಚಾಯತ್ ಸದಸ್ಯರಾಗಲು ಪದಾಧಿಕಾರಿಗಳ ಜೊತೆಗೆ ಶಿಕ್ಷಕರು ಇತರ ಮೂರು ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಪಂಚಾಯತ್ ಸದಸ್ಯರಿಗೆ ಮಾರ್ಗದರ್ಶಿ ಅಂಶಗಳನ್ನು ಅನುಬಂಧ 1 ರಲ್ಲಿ ನೀಡಲಾಗಿದೆ.
- ನಂತರ ಶಿಕ್ಷಕರು ಉಳಿದ ವಿದ್ಯಾರ್ಥಿಗಳನ್ನು 5 ಗುಂಪುಗಳಾಗಿ ವಿಂಗಡಿಸಿ ಒಬ್ಬ ನಾಯಕನನ್ನು ಆರಿಸಲು ಅವರಿಗೆ ಸೂಚಿಸುತ್ತಾರೆ. ಪ್ರತಿ ಗುಂಪಿಗೆ ಒಂದು ಸಮಸ್ಯೆಯನ್ನು ನಿಯೋಜಿಸಲಾಗುತ್ತದೆ. ಮುಂದಿನ ತರಗತಿಯಲ್ಲಿ ಅಣಕು ಪಂಚಾಯತ್ ಸಮಸ್ಯೆಯನ್ನು ಹಂಚಿಕೊಳ್ಳಲು ಗುಂಪುಗಳಿಗೆ ದೃಶ್ಯ/2-3 ಸಾಲುಗಳ ಸಂಭಾಷಣೆಯನ್ನು ಸಿದ್ಧಪಡಿಸಿಕೊಳ್ಳುವ ಕುರಿತು ವಿವರಿಸಿ. (ವಿದ್ಯಾರ್ಥಿಗಳು ಸಂಭಾಷಣೆಗಳನ್ನು ಮಾಡುವಾಗ ತರಗತಿಯ ಗೌರವಕ್ಕೆ ಧಕ್ಕೆ ಬಾರದಂತೆ ಸ್ಥಳೀಯ ಭಾಷೆಯನ್ನು ಬಳಸಿ ಹಾಸ್ಯದ ಸನ್ನಿವೇಶಗಳನ್ನು ತರಬಹುದು)
- ಶಿಕ್ಷಕರು ಸಮಸ್ಯೆಯನ್ನು ನಾಯಕರಿಗೆ ಯಾದೃಚ್ಛಿಕವಾಗಿ ನಿಯೋಜಿಸಬಹುದು ಅಥವಾ ಅನುಬಂಧ 2 ರಲ್ಲಿ ನೀಡಿದಂತೆ ಅವರು ಆಯ್ಕೆ ಮಾಡಬಹುದು. (ವಿದ್ಯಾರ್ಥಿಗಳು ಇತರ ಸಮಸ್ಯೆನ್ನು ಆಯ್ಕೆ ಮಾಡಲು ಬಯಸಿದರೆ, ಅವರು ಶಿಕ್ಷಕರೊಂದಿಗೆ ಚರ್ಚಿಸಿ ಅಂತಿಮಗೊಳಿಸಬಹುದು)
- ಮುಕ್ತಾಯ ಚಟುವಟಿಕೆಗೆ ಪದಾಧಿಕಾರಿಗಳು ಹೇಳಿಕೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕಾಗುತ್ತದೆ.
ಮುಖ್ಯ ಚಟುವಟಿಕೆಗೂ ಮುನ್ನ ಚಟುವಟಿಕೆ ಪೂರ್ವ ಕೆಲಸಗಳನ್ನು ಗುಂಪು ಪೂರ್ಣಗೊಳಿಸಿದೆ ಎಂದು ಖಾತ್ರಿಪಡಿಸಲು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮಾಹಿತಿ ನೀಡಿ.
ಮುಖ್ಯ ಚಟುವಟಿಕೆ – ಅಣಕು ಪಂಚಾಯತ್
ಬೇಕಾದ ಅಂದಾಜು ಸಮಯ– 30 ನಿಮಿಷಗಳು
- ಶಿಕ್ಷಕರು ವಿದ್ಯಾರ್ಥಿಗಳಿಗೆ ನಮ್ಮ ತರಗತಿಯಲ್ಲಿ ನಾವು ಪಂಚಾಯತ್ ಜನ- ಧ್ವನಿ ಚಟುವಟಿಕೆ ಮಾಡೋಣ ಎಂದು ಹೇಳುತ್ತಾರೆ (ಜನರು ಬಂದು ಪಂಚಾಯತ್ ಸದಸ್ಯರೊಂದಿಗೆ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ದಿನ). ಗ್ರಾಮ ಪಂಚಾಯತಿ ಅಧ್ಯಕ್ಷರು (ಸರಪಂಚ್) ಪಾತ್ರವನ್ನು , ಮತ್ತು ತ ರಗತಿಯ ಇತರ ಮೂವರು ವಿದ್ಯಾರ್ಥಿಗಳು ಪಂಚ ಸದಸ್ಯರಾಗಿರುತ್ತಾರೆ.
- ಇತರ ವಿದ್ಯಾರ್ಥಿಗಳು ಅಣಕು ಪಂಚಾಯತ್ ಅನ್ನು ವೀಕ್ಷಿಸುವ ಮತ್ತು ಕೇಳಿದಾಗ ಪರಿಹಾರಗಳನ್ನು ಸೂಚಿಸುವ ಸಮುದಾಯವನ್ನು ಪ್ರತಿನಿಧಿಸುತ್ತಾರೆ.
- ಗ್ರಾಮ ಪಂಚಾಯತಿ ಅಧ್ಯಕ್ಷರು (ಸರಪಂಚ್) ಮತ್ತು ಪಂಚಾಯತ್‌ನ ಇತರ ಸದಸ್ಯರು ತಮಗೆ ನೀಡಲಾದ ಮಾರ್ಗದರ್ಶಿ ಅಂಶಗಳ ಪ್ರಕಾರ ತಿಳಿದುಕೊಳ್ಳಲು ಸಮಸ್ಯೆಯನ್ನು ತಂದಂತಹ ಗುಂಪಿನ ನಾಯಕನೊಂದಿಗೆ ಪ್ರತಿ ಸಮಸ್ಯೆಯನ್ನು ಚರ್ಚಿಸುತ್ತಾರೆ. (ಶಿಕ್ಷಕರು ಫೆಸಿಲಿಟೇಟರ್ ಪಾತ್ರ ವಹಿಸಿ ಪಂಚಾಯತ್ ಅಗತ್ಯಕ್ಕೆ ತಕ್ಕಂತೆ ಪಂಚ ಸದಸ್ಯರು ಮತ್ತು ಗುಂಪುಗಳಿಗೆ ಮಾರ್ಗದರ್ಶನ ನೀಡುತ್ತಾರೆ). ವಿದ್ಯಾರ್ಥಿಗಳು ಸಮಸ್ಯೆಗಳನ್ನು ನಿಭಾಯಿಸಲು ಆತ್ಮವಿಶ್ವಾಸ ಹೊಂದಿಲ್ಲ ಎಂದು ಶಿಕ್ಷಕರಿಗೆ ಅನಿಸಿದರೆ, ಶಿಕ್ಷಕರೇ ಈ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು (ಸರಪಂಚ್) ಅಥವಾ ಅವರನ್ನು ನಿರ್ದೇಶಿಸುವ ಕಾರ್ಯದರ್ಶಿಯಾಗಬಹುದು)
- ಎಲ್ಲಾ ಐದು ಸಮಸ್ಯೆಗಳನ್ನು ಈ ರೀತಿಯಲ್ಲಿ ತೆಗೆದುಕೊಂಡು ಪ್ರತಿ ಗುಂಪಿಗೆ 4-5 ನಿಮಿಷಗಳನ್ನು ನೀಡಿ.
ಗಮನಿಸಿ – ನಿಮ್ಮ ಸ್ಥಳೀಯ ಪ್ರದೇಶದಲ್ಲಿ, ಮುನ್ಸಿಪಾಲಿಟಿ ಅನ್ವಯವಾಗುತ್ತಿದ್ದರೆ, ನಿಮ್ಮ ವಿದ್ಯಾರ್ಥಿಗಳಿಗೆ ಅಣಕು-ಮುನ್ಸಿಪಾಲಿಟಿ ಅನುಭವ ನೀಡಿ, ಶಿಕ್ಷಕರು ಇದನ್ನು ನಿರ್ಧರಿಸಬಹುದು.
ಚಟುವಟಿಕೆಯನ್ನು ಮುಕ್ತಾಯಗೊಳಿಸಿ
ಗಮನಿಸಿ - ಸಮಯವಿದ್ದರೆ, ಶಿಕ್ಷಕರು ಪದಾಧಿಕಾರಿಗಳಿಗೆ ಕೆಳಗೆ ಉಲ್ಲೇಖಿಸಿದಂತೆ ಚಟುವಟಿಕೆಯನ್ನು ಮುಕ್ತಾಯಗೊಳಿಸುವ ಅವಕಾಶ ನೀಡಬಹುದು. ಒಂದು ವೇಳೆ ಸಮಯದ ಅಭಾವವಿದ್ದರೆ, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ- ಅವರು ಈ ಚಟುವಟಿಕೆಯಿಂದ ಏನು ಕಲಿತುಕೊಂಡರು ಎಂಬುದನ್ನು ಪ್ರಶ್ನಿಸಲು ಆಹ್ವಾನಿಸಿ.
ಪದಾಧಿಕಾರಿಗಳು ಆಟವನ್ನು ಆಡಬಹುದು. ಯಾವ ಸಮಸ್ಯೆಗೆ ನಾವು ಸ್ಥಳೀಯ ಆಡಳಿತವನ್ನು ಸಂಪರ್ಕಿಸುತ್ತೇವೆ. ಹೌದು ಎಂದಾದರೆ ವಿದ್ಯಾರ್ಥಿಗಳು ಎದ್ದು ನಿಲ್ಲಬಹುದು ಅಥವಾ ಇಲ್ಲ ಎಂದಾದರೆ ಕೈಯೆತ್ತಬಹುದು.
- ವಿದ್ಯಾರ್ಥಿಗಳು ಶಾಲೆಯ ಸಮವಸ್ತ್ರವನ್ನು ಬದಲಾಯಿಸುವ ಇಚ್ಛೆ ವ್ಯಕ್ತಪಡಿಸುತ್ತಾರೆ .
- ಮನೆಯಲ್ಲಿ ಸ್ನಾನ ಮಾಡಲು ನೀರಿಲ್ಲ
- ಶಾಲೆಯ ನೀರಿನ ನಲ್ಲಿ ತುಂಡಾಗಿದೆ
- ರಸ್ತೆಗಳಲ್ಲಿ ಗುಂಡಿಗಳು
- ರಸ್ತೆಯಲ್ಲಿ ವಿದ್ಯುತ್ ತಂತಿಗಳು ನೇತಾಡುತ್ತಿವೆ
- ನನ್ನ ಸಾಕು ನಾಯಿಯ ಎಡಕಾಲು ಮುರಿದಿದೆ.
- ಇವತ್ತು ನನ್ನ ಸಹೋದರಿಗೆ ಅನ್ನ ತಿನ್ನಲು ಇಷ್ಟವಿಲ್ಲ
- ಕಸವನ್ನು ಸಂಗ್ರಹಿಸಲು ಯಾರೂ ಬರುತ್ತಿಲ್ಲ.
(ಈ ರೀತಿಯಾಗಿ ಕನಿಷ್ಠ 4-5 ವಾಕ್ಯಗಳನ್ನು ತೆಗೆದುಕೊಳ್ಳಬೇಕು.)
ಈ ವಿಭಾಗವನ್ನು ಮುಕ್ತಾಯಗೊಳಿಸಲು ಅನುಕೂಲವಾಗುವಂತೆ ಪದಾಧಿಕಾರಿಗಳನ್ನು ಶಿಕ್ಷಕರು ಬೆಂಬಲಿಸಬಹುದು ಅಥವಾ ತಾವೇ ಮುಕ್ತಾಯಗೊಳಿಸಬಹುದು.
ಶಿಕ್ಷಕರು ಪ್ರಮುಖ ಕಲಿಕೆಗಳನ್ನು ಸಂಕ್ಷೇಪಿಸುತ್ತಾರೆ-
ನಿಮಗೆ ಅತ್ಯಂತ ಹತ್ತಿರದ ಆಡಳಿತವು ಸ್ಥಳೀಯ ಆಡಳಿತವಾಗಿದೆ ಮತ್ತು ನಮ್ಮ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಅದನ್ನು ಸಂಪರ್ಕಿಸಬಹುದು. ನಾವು ಸರಿಯಾದ ರೀತಿಯಲ್ಲಿ ಸೂಕ್ತ ಸಮಸ್ಯೆಯೊಂದಿಗೆ ಹೋದರೆ ಅವುಗಳು ಸುಲಭ ಲಭ್ಯ ಮತ್ತು ನಮಗೆ ಸಹಾಯಕವಾಗಬಲ್ಲವು.
ದೇಶ್ ಅಪ್ನಾಯೇ ಫಲಕ (DA ಗೋಡೆ)
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು.
- ವಿದ್ಯಾರ್ಥಿಗಳು ಪಂಚಾಯತ್‌ಗೆ ತಂದಂತಹ ಸ್ಥಳೀಯ ಸಮಸ್ಯೆಗಳನ್ನು ಅಂಟಿಸಲು ಹೇಳಿ
- ವಿದ್ಯಾರ್ಥಿಗಳಿಗೆ, ತಮ್ಮ ಅನುಭವದ ಆಧಾರದ ಮೇಲೆ ಪ್ರಮುಖ ಕಲಿಕಾ ಅಂಶಗಳನ್ನು ಬರೆಯಲು ಅಥವಾ ಯಾರಾದರೂ ಪಂಚಾಯತಿಗೆ ಭೇಟಿ ನೀಡಿದ್ದರೆ, ತಮ್ಮ ಅನುಭವವನ್ನು ಹಂಚಿಕೊಳ್ಳಲು ಉತ್ತೇಜಿಸಿ. (ಕನಿಷ್ಠ 2 ವಿದ್ಯಾರ್ಥಿಗಳನ್ನು ಬರೆಯುವುದಕ್ಕೆ ಉತ್ತೇಜಿಸಿ)
ಗಮನಿಸಬೇಕಾದ ಅಂಶಗಳು
- ಚಟುವಟಿಕೆಯ ಸಂದರ್ಭದಲ್ಲಿ ಸ್ಥಳೀಯ ಆಡಳಿತಕ್ಕೆ ಯಾವುದೇ ಕ್ಷೇತ್ರ ಭೇಟಿ ಇರುವುದಿಲ್ಲ. ಇದು ಚಟುವಟಿಕೆಯಲ್ಲಿ ಒಳಗೊಂಡಿರುವುದಿಲ್ಲ.
- ಚಟುವಟಿಕೆಯ ಸಂದರ್ಭದಲ್ಲಿ ಪರಿಹಾರವನ್ನು ಘೋಷಿಸುವಾಗ ಚಪ್ಪಾಳೆ ತಟ್ಟದಿರಿ ಯಾಕೆಂದರೆ, ಇದು ಇತರ ವಿದ್ಯಾರ್ಥಿಗಳಿಗೆ ತೊಂದರೆ ಉಂಟುಮಾಡುತ್ತದೆ.
- ಯಾವುದೇ ಸಮಸ್ಯೆಗಳ ಕುರಿತು ಚಾರ್ಟ್‌ಗಳು/ಪೋಸ್ಟರ್‌ಗಳನ್ನು ಮಾಡುವುದಿಲ್ಲ
ಚಟುವಟಿಕೆಯ ಫೋಟೋಗಳನ್ನು ಹಂಚಿಕೊಳ್ಳುವುದು
ಎಂಗೇಜ್‌ಮೆಂಟ್ ಆಫೀಸರ್‌ಗಳೊಂದಿಗೆ ಹಂಚಿಕೊಳ್ಳಬೇಕಿರುವ ಚಟುವಟಿಕೆ ಚಿತ್ರಗಳಿಗಾಗಿ ದಯವಿಟ್ಟು ಇವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ
- ಮುಖ್ಯ ಚಟುವಟಿಕೆಯ ಚಿತ್ರಗಳು, ಕನಿಷ್ಠ ಮೂರು ವಿವಿಧ ಗುಂಪುಗಳು ಪಂಚಾಯತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡುವ ಫೋಟೋಗಳು. (2 ಫೋಟೋಗಳು)
- ಪುನರ್ಮನನ ಸೆಶನ್ ಅನ್ನು ಮುನ್ನಡೆಸುವ ಪದಾಧಿಕಾರಿಗಳು. ಶಿಕ್ಷಕರು (2 ಫೋಟೋಗಳು)
- ದೇಶ್ ಅಪ್ನಾಯೇ ಫಲಕ (DA ಗೋಡೆ) (2 ಫೋಟೋಗಳು)
ಅನುಬಂಧಗಳು
ಅನುಬಂಧ 1 – ಪಂಚಾಯತ್ ಸದಸ್ಯರಿಗೆ ಮಾರ್ಗದರ್ಶಿ ಅಂಶಗಳು
ಮಾರ್ಗದರ್ಶಿ ಅಂಶಗಳು:
- ಸಮುದಾಯ ಸದಸ್ಯರು ಪ್ರಸ್ತುತಪಡಿಸುತ್ತಿರುವ ಸಮಸ್ಯೆಯನ್ನು ಗಮನವಿಟ್ಟು ಕೇಳಿ.
- ಸಮಸ್ಯೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅರ್ಥ ಮಾಡಿಕೊಳ್ಳಲು ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಳ್ಳಿ.
- ಸಮಸ್ಯೆಗಳಿಗೆ ಸ್ಪಂದಿಸಲು ಪರಸ್ಪರ ಸಹಯೋಗದಿಂದ ಮಾತುಕತೆ ನಡೆಸಿ, ಎಲ್ಲಾ ಪಂಚ ಸದಸ್ಯರಿಗೂ ಮಾತನಾಡಲು ಅವಕಾಶ ದೊರೆಯಬೇಕು, ಅದೇರೀತಿ ಸಮಸ್ಯೆಯನ್ನು ಸೂಕ್ತವಾಗಿ ಪರಿಹರಿಸಬೇಕು.
- ಪ್ರಶ್ನೆಗಳಿಗೆ ನೀವು ಹಾಸ್ಯಮಯವಾಗಿ ಉತ್ತರಿಸಬಹುದಾದರೂ ಪ್ರತಿಯೊಬ್ಬರನ್ನೂ ಗೌರವದಿಂದ ಕಾಣಬೇಕು (ಉದಾಹರಣೆಗೆ – ಪ್ರತಿಸ್ಪಂದಿಸುವಾಗ ಸ್ನೇಹಮಯ ಭಾಷೆ ಬಳಸಿ, ಹಾಸ್ಯಮಯ ಸಂದರ್ಭಗಳು/ ನೀವು ಕೇಳಿರುವ ಘಟನೆಗಳು ಇತ್ಯಾದಿಗಳ್ನು ಒಳಗೊಂಡಿರಲಿ.)
- ಸಮಸ್ಯೆಗಳಿಗೆ ಪ್ರತಿಸ್ಪಂದಿಸುವಾಗ ಸೃಜನಾತ್ಮಕವಾಗಿ ಆಲೋಚಿಸಿ. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಹೇಳಿ.
- ನ್ಯಾಯಯುತವಾಗಿರಿ ಮತ್ತು ಪ್ರತಿ ಸಮಸ್ಯೆಯನ್ನು ವಸ್ತುನಿಷ್ಠವಾಗಿ ಪ್ರಸ್ತಾಪಿಸಿ.
ಅನುಬಂಧ 2 – ಸ್ಥಳೀಯ ಸಮಸ್ಯೆಗಳು
- ರಸ್ತೆಗಳ ಕಳಪೆ ಸ್ಥಿತಿಗಳು- ರಸ್ತೆಗಳಲ್ಲಿ ಗುಂಡಿಗಳು, ನೀರು ನಿಲ್ಲುವಿಕೆ, ಸಮತಟ್ಟಾಗಿರದ ರಸ್ತೆಗಳು ಇತ್ಯಾದಿಗಳಿಂದಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಕಷ್ಟಕರವಾಗಿರುವುದು.
- ಸ್ಥಳೀಯ ಬಸ್ ನಿಲ್ದಾಣದಲ್ಲಿ ಕಸವನ್ನು ರಾಶಿ ಹಾಕಿರುವುದು- ಕಸದ ರಾಶಿಯಿಂದ ದುರ್ವಾಸನೆ ಬರುತ್ತಿರುವುದು ಮತ್ತು ಅಲ್ಲಿ ಹಾದುಹೋಗುವ ಜನರಿಗೆ ಅನೈರ್ಮಲ್ಯ ಮತ್ತು ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು.
- ಶುದ್ಧ ಕುಡಿಯುವ ನೀರಿನ ಕೊರತೆ - ಕೊಳಕು (ಕಲುಷಿತ) ನೀರಿನ ಸೇವನೆಯಿಂದಾಗಿ ಅಸ್ವಸ್ಥಗೊಂಡು ಅನೇಕ ಜನರು ಆಸ್ಪತ್ರೆಗೆ ಸೇರಿದ್ದಾರೆ .
- ಬೀದಿ ಪ್ರಾಣಿಗಳ ಹಾವಳಿ ಮತ್ತು ರಸ್ತೆಗಳ ಅವುಗಳ ಮಲ ಹೆಚ್ಚಾಗಿರುವುದು- ಅನೇಕ ಬೀದಿ ಪ್ರಾಣಿಗಳು ರಸ್ತೆಗಳ ಮೇಲೆ ಸಂಚರಿಸಿ ರಸ್ತೆಯನ್ನು ಕೊಳಕು ಮಾಡಿರುವುದರಿಂದ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. (ಸೆಗಣಿಯಿಂದಾಗಿ ದ್ವಿಚಕ್ರ ಸವಾರನೊಬ್ಬ ಜಾರಿ ಬಿದ್ದಿದ್ದಾನೆ.)
- ತೆರೆದ ಚರಂಡಿ– ಹಳ್ಳಿಯ ಪ್ರಮುಖ ಚರಂಡಿಯೊಂದರ ಮುಚ್ಚಳವು ಕಾಣೆಯಾಗಿದೆ, ಮಕ್ಕಳು ವಯಸ್ಕರು ಅದರೊಳಗೆ ಬೀಳಬಹುದು, ದುರ್ವಾಸನೆ, ಜನರಿಗೆ ಅನಾರೋಗ್ಯ ಉಂಟುಮಾಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಬಹುದು.
ಗಮನಿಸಿ: ಇವುಗಳಲ್ಲದೇ ತಾವು ಕಾಣುವ ಯಾವುದೇ ಇತರ ಸ್ಥಳೀಯ ಸಮಸ್ಯೆಗಳಿದ್ದರೆ, ಶಿಕ್ಷಕರು ಅವುಗಳನ್ನೂ ಸೇರಿಸಬಹುದು. ಮಕ್ಕಳಿಗೆ ಅರ್ಥವಾಗುವ ಭಾಷೆಗೆ ಇದನ್ನು ಅನುವಾದಿಸಬಹುದು.