KLE ಕನ್ನಡ ಗ್ರೇಡ್ 7 ಜನವರಿ ಚಟುವಟಿಕೆ-ನನ್ನ ಕನಸಿನ ದೇಶ
ಉದ್ದೇಶಗಳು
- ಕಾಲ್ಪನಿಕ ದೇಶಕ್ಕಾಗಿ ನಿಯಮಗಳನ್ನು ರಚಿಸುವ ಮೂಲಕ ಸಂವಿಧಾನದ ಅರ್ಥವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು.
ಕೌಶಲಗಳು
ಸಂವಹನ, ಸೃಜನಶೀಲತೆ
ಮೌಲ್ಯಗಳು
ಜವಾಬ್ದಾರಿ
ಹೋಮ್‌ವರ್ಕ್ ಟಾಸ್ಕ್ಗಾಗಿ ಸೂಚನೆಗಳು
ಬೇಕಾದ ಅಂದಾಜು ಸಮಯ: 10 ನಿಮಿಷಗಳು.
- ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳುತ್ತಾರೆ:
- ನಾವು ಶಾಲೆಯಲ್ಲಿ ಅನುಸರಿಸುವ ಕೆಲವು ನಿಯಮಗಳು ಯಾವುವು?
- ಇತರ ಯಾವ ಸ್ಥಳಗಳಲ್ಲಿ ನಾವು ಅನುಸರಿಸಬೇಕಾದ ನಿಯಮಗಳನ್ನು ಹೊಂದಿದ್ದೇವೆ? (ಮನೆ, ಆಸ್ಪತ್ರೆಗಳು ಇತ್ಯಾದಿ)
- ನಮಗೆ ಈ ನಿಯಮಗಳು ಏಕೆ ಬೇಕು ಎಂದು ನೀವು ಭಾವಿಸುತ್ತೀರಿ?
- ನಮ್ಮ ದೇಶಕ್ಕಾಗಿ ಇಂತಹ ಯಾವುದೇ ನಿಯಮಗಳನ್ನು ನಾವು ಹೊಂದಿದ್ದೇವೆಯೇ? ಈ ನಿಯಮಗಳನ್ನು ಎಲ್ಲಿ ಬರೆಯಲಾಗಿದೆ?
1-2 ಪ್ರತಿಕ್ರಿಯೆಗಳನ್ನು ತೆಗೆದುಕೊಂಡು ಸಂಕ್ಷೇಪಿಸಿ.
- ಶಿಕ್ಷಕರು, “ನಿಮ್ಮ ಕಣ್ಣುಗಳನ್ನು ಮುಚ್ಚಿ, ನೀವು ಇರಲು ಬಯಸುವ ನಿಮ್ಮದೇ ಕನಸಿನ ದೇಶವನ್ನು ಕಲ್ಪಿಸಿಕೊಳ್ಳಿ ಎಂದು ಹೇಳುತ್ತಾರೆ. ನಿಮ್ಮ ಮನಸ್ಸಿನಲ್ಲಿ ಆಲೋಚಿಸಿ- ನಿಮ್ಮ ದೇಶದ ಹೆಸರೇನು? ಅಲ್ಲಿ ಯಾವ ರೀತಿಯ ಜನರು ವಾಸಿಸುತ್ತಿರುವುದನ್ನು ನೀವು ನೋಡುತ್ತೀರಿ? ಅಲ್ಲಿನ ವಾತಾವರಣ ಹೇಗಿದೆ” ಕೆಲವು ಸೆಕೆಂಡುಗಳ ಕಾಲ ಹಾಗೆಯೇ ಇರಿ, ನಂತರ ಅವರಿಗೆ ಕಣ್ಣು ತೆರೆಯಲು ಹೇಳಿ. ಅವರಿಗೆ ಹೇಳಿ – ನಾವು ಮನೆಯಲ್ಲಿ ಒಂದು ಸಣ್ಣ ಟಾಸ್ಕ್ ಮಾಡೋಣ, ಅಲ್ಲಿ ನಮ್ಮ ಕನಸಿನ ಕಾಲ್ಪನಿಕ ದೇಶಕ್ಕೆ ನಿಯಮಗಳನ್ನು ರಚಿಸೋಣ.
- ಬೋರ್ಡ್‌ನಲ್ಲಿ ಅಂಡರ್‌ಲೈನ್ ಮಾಡಿರುವ ಪದಗಳನ್ನು ಬರೆಯುವ ಮೂಲಕ ಪದಾಧಿಕಾರಿಗಳ ಸಹಾಯದಿಂದ ಹೋಮ್‌ವರ್ಕ್ ಟಾಸ್ಕ್ ಅನ್ನು ವಿವರಿಸಿ.
- ಅವರ ಕನಸಿನ ದೇಶಕ್ಕೆ ಹೆಸರು ನೀಡಿ.
- ನಿಮ್ಮ ದೇಶದ ಆಕಾರ, ಧ್ವಜ, ವಿಶ್ವ ಭೂಪಟದಲ್ಲಿ ಅದರ ಸ್ಥಾನವನ್ನು ಚಿತ್ರಿಸಿ ಮತ್ತು ವಿನ್ಯಾಸಗೊಳಿಸಿ ಮತ್ತು ಅದರ ಸಾಮಾನ್ಯ ಪರಿಸ್ಥಿತಿ/ಹವಾಮಾನವನ್ನು ವಿವರಿಸಿ. (ಗಮನಿಸಿ: ಯಾವುದೇ ಇತರ ದೇಶದ ಈಗಾಗಲೇ ಇರುವ ಧ್ವಜ ನಕಲನ್ನು ತಡೆಗಟ್ಟಲು ವಿಶಿಷ್ಟವಾದ ಧ್ವಜ/ಚಿಹ್ನೆಗಳನ್ನು ಮಾಡಿ.)
- ಆ ದೇಶದ ಜನರ ಬಗ್ಗೆ ಬರೆಯಿರಿ (ಎಷ್ಟು ಜನ, ಲಿಂಗದ ವಿಷಯದಲ್ಲಿ ಸಂಯೋಜನೆ- ಪುರುಷ/ಸ್ತ್ರೀ, ಯಾವ ರೀತಿಯ ಜನ, ಅವರು ಹೇಗೆ ವರ್ತಿಸುತ್ತಾರೆ, ಭಾವಿಸುತ್ತಾರೆ, ಅಂದರೆ ವಯಸ್ಸಾದವರು, ಕಿರಿಯರು, ಖುಷಿ, ಸಿಟ್ಟು ಇತ್ಯಾದಿ)ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿ ಅನುಸರಿಸಬೇಕಾದ ಕನಿಷ್ಠ 3 ನಿಯಮಗಳನ್ನು ಬರೆಯಿರಿ. ಉದಾಹರಣೆಗೆ – ಎಲ್ಲರೊಂದಿಗೂ ಗೌರವ ಮತ್ತು ದಯೆಯಿಂದ ವರ್ತಿಸಿ
ಹೋಮ್‌ವರ್ಕ್ ಟಾಸ್ಕ್
ವಿದ್ಯಾರ್ಥಿಗಳು ಗಮನಿಸಬೇಕಾದ ವಿಷಯಗಳು:
- ಲಭ್ಯವಿರುವ ಹಾಳೆ/ನೋಟ್‌ಬುಕ್ ಹಾಳೆಯನ್ನು ಬಳಸಿ.
- ಹೋಮ್‌ವರ್ಕ್ ಟಾಸ್ಕ್‌ಗಳಲ್ಲಿ ನೀಡಲಾದ ಎಲ್ಲಾ ಅಂಶಗಳನ್ನು ಸೇರಿಸಿಕೊಳ್ಳಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಅವುಗಳೆಂದರೆ– ದೇಶದ ಹೆಸರು, ದೇಶದ ಆಕಾರ, ಧ್ವಜ, ಹವಾಮಾನ, ಜನಸಂಖ್ಯೆ, ಮತ್ತು 3 ನಿಯಮಗಳು.
ಪದಾಧಿಕಾರಿಗಳು ಪ್ರತಿಯೊಬ್ಬರ ಪ್ರತಿಕ್ರಿಯೆಯನ್ನು ಪರಸ್ಪರ ನೋಡಲು ಕನಸಿನ ದೇಶ ಒನ್ ಪೇಜರ್ ಅನ್ನು ಆವರ್ತನ ಆಧಾರದಲ್ಲಿ ದೇಶ್ ಅಪ್ನಾಯೇ ಫಲಕದಲ್ಲಿ ಪ್ರದರ್ಶಿಸಬಹುದು. ವಿದ್ಯಾರ್ಥಿಗಳು ಪೂರ್ಣಗೊಳಿಸಿದ ಹೋಮ್‌ವರ್ಕ್ ಅನ್ನು ತರಲು ಅವರಿಗೆ ರಿಕ್ಯಾಪ್ ದಿನವನ್ನು ಮೊದಲೇ ತಿಳಿಸಿ.
ಚಟುವಟಿಕೆಯನ್ನು ಮುಕ್ತಾಯಗೊಳಿಸಿ
ಬೇಕಾದ ಅಂದಾಜು ಸಮಯ: 15 ನಿಮಿಷಗಳು
ಪದಾಧಿಕಾರಿಯು 2-3 ವಿದ್ಯಾರ್ಥಿಗಳಿಗೆ ತಮ್ಮ ಕನಸಿನ ದೇಶವನ್ನು ಪ್ರಸ್ತುತಪಡಿಸಲು ಸಿದ್ಧವಿರಲು ಹೇಳುತ್ತಾರೆ. ಅವರು ಸ್ವಯಂಪ್ರೇರಿತರಾಗಿ ಮುಂದೆ ಬರುವಂತೆ ಹೇಳಬಹುದು, ಯಾರೂ ಮುಂದಕ್ಕೆ ಬಾರದಿದ್ದರೆ, ವಿದ್ಯಾರ್ಥಿಗಳನ್ನು ಅವರೇ ಆರಿಸಿ ಮೊದಲೇ ಸೂಚಿಸಬಹುದು. ಇದು ಪ್ರತಿ ವ್ಯಕ್ತಿಗೆ 2-3 ನಿಮಿಷಗಳ ಪ್ರಸ್ತುತಿಯಾಗಿರುತ್ತದೆ.) ಕನಿಷ್ಠ ಒಬ್ಬ ಪದಾಧಿಕಾರಿಯಾದರೂ ಇರಬೇಕು.
1-2 ವಿದ್ಯಾರ್ಥಿಗಳಿಗೆ ಹಂಚಿಕೊಳ್ಳಲು ಹೇಳಿ – (ನಿಮಗೆ ನೆನಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ನೀವು ಚೀಟಿಗಳನ್ನು ತಯಾರಿಸಬಹುದು.)
- ನಿಮ್ಮ ದೇಶಕ್ಕೆ ನಿಯಮಗಳನ್ನು ರಚಿಸುವ ಅನುಭವ ಹೇಗಿತ್ತು?
- ದೇಶಕ್ಕೆ ನಿಯಮಗಳನ್ನು ರಚಿಸುವುದು ಮುಖ್ಯ ಎಂದುರ ನೀವು ಯಾಕೆ ಭಾವಿಸುತ್ತೀರಿ?
- ನಿಯಮ ಪುಸ್ತಕದ (ಸಂವಿಧಾನ) ಉದ್ದೇಶ ಏನು ಎಂಬುದು ನಿಮ್ಮ ಅಭಿಪ್ರಾಯ? (ವಿದ್ಯಾರ್ಥಿಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ ಶಿಕ್ಷಕರು ಸಾರಾಂಶದಲ್ಲಿ ಉತ್ತರಿಸಬಹುದು)
ಶಿಕ್ಷಕರು ಚಟುವಟಿಕೆಗಾಗಿ ಪ್ರಮುಖ ಕಲಿಕಾ ವಿಷಯಗಳನ್ನು ಸಂಕ್ಷೇಪಿಸುತ್ತಾರೆ –
- ನಿಯಮಗಳನ್ನು ರಚಿಸುವ ಅನುಭದಿಂದ, ಅವುಗಳನ್ನು ರಚಿಸುವುದು ಸುಲಭವಲ್ಲ ಎಂಬುದು ನಮಗೆ ತಿಳಿಯಿತು ಮಾತ್ರವಲ್ಲದೇ ಇದು ನಮಗೆ ಮಾಲೀಕತ್ವದ ಭಾವನೆಯನ್ನು ನೀಡಿತು.
- ನಿಯಮಗಳು ನಮಗೆ ದೇಶದಲ್ಲಿ ಕ್ರಮವನ್ನು ಮತ್ತು ಶಿಸ್ತನ್ನು ಪಾಲಿಸಲು ಮತ್ತು ಎಲ್ಲರನ್ನೂ ರಕ್ಷಿಸಲು ನೆರವಾಗುತ್ತದೆ.
- ದೇಶದ ನಿಯಮಗಳು ಮತ್ತು ಕಾನೂನನ್ನು ಬರೆಯಲಾದ ಪುಸ್ತಕಕ್ಕೆ ಸಂವಿಧಾನ ಎಂದು ಹೆಸರು. ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಅನ್ವಯಿಸುವುದರಿಂದ ಪ್ರತಿಯೊಬ್ಬರನ್ನು ಸಮಾನವಾಗಿ ಪರಿಗಣಿಸಲಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಲು ಇದು ನೆರವಾಗುತ್ತದೆ.
ದೇಶ್ ಅಪ್ನಾಯೇ ಫಲಕ
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು.
- ನನ್ನ ಕನಸಿನ ದೇಶ – ಒನ್ ಪೇಜರ್. ಯಾರು ಸ್ವಯಂಪ್ರೇರಿತರಾಗಿ ಹಂಚಿಕೊಳ್ಳಲು ಬಯಸುತ್ತಾರೆ ಅಥವಾ ದೈನಂದಿನ ಆವರ್ತನ ಆಧಾರದ ಮೇಲೆ ಸಾಧ್ಯವಾದಷ್ಟು ಯಾರು ಮಾಡುತ್ತಾರೆ ಎಂದು ಪದಾಧಿಕಾರಿಗಳು ಕೇಳಬಹುದು.
ಗಮನಿಸಬೇಕಾದ ಅಂಶಗಳು
- ವಿದ್ಯಾರ್ಥಿಗಳು ಅದನ್ನು ಹೋಮ್‌ವರ್ಕ್ ಆಗಿ ಮಾಡಬೇಕಾಗಿರುವುದರಿಂದ ದಯವಿಟ್ಟು ಅವರು ಎಲ್ಲಾ ವಿಷಯಗಳನ್ನು ಬರೆದಿಟ್ಟುಕೊಂಡಿದ್ದಾರೆ ಎಂದು ಖಾತ್ರಿಪಡಿಸಿ.
- ಕನಸಿನ ದೇಶ ಹೋಮ್‌ವರ್ಕ್‌ಗಾಗಿ ವಿದ್ಯಾರ್ಥಿಗಳು ಅದರ ಅಲಂಕಾರಕ್ಕಾಗಿ ಫ್ಯಾನ್ಸಿ ವಸ್ತುಗಳನ್ನು ಖರೀದಿಸಲು ಹಣ ಖರ್ಚು ಮಾಡಬಾರದು ಎಂದು ಹೇಳಿ.
- ಅನುಬಂಧ 1 ತೋರಿಸಬಹುದು ಅಥವಾ ವಿದ್ಯಾರ್ಥಿಗಳಿಗೆ ನೀಡಬಹುದು. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಗೆ ತಕ್ಕಂತೆ ಪ್ರಸ್ತುತಪಡಿಸಲು ಮುಕ್ತರಾಗಿದ್ದಾರೆ
ಚಟುವಟಿಕೆ ಫೋಟೋಗಳನ್ನು ಹಂಚಿಕೊಳ್ಳುವುದು
- ಚಟುವಟಿಕೆ ಫೋಟೋಗಳಿಗಾಗಿ, ದಯವಿಟ್ಟು ಇವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ-
- ಮನೆ-ಸೂಚನೆಗಳ ಸೆಶನ್ ಚಿತ್ರ (2 ಚಿತ್ರಗಳು)
- ವಿದ್ಯಾರ್ಥಿಗಳು ಪ್ರಸ್ತುತಪಡಿಸುತ್ತಿರುವ ಪದಾಧಿಕಾರಿಯ ರಿಕ್ಯಾಪ್ ಸೆಶನ್. (2 ಫೋಟೋಗಳು)
- ದೇಶ್ ಅಪ್ನಾಯೇ ಫಲಕ (2 ಫೋಟೋಗಳು)
ಅನುಬಂಧ
ಅನುಬಂಧ 1 – ಉಲ್ಲೇಖ ವಸ್ತುಗಳು
ಗಮನಿಸಿ: ಇದೊಂದು ಮಾರ್ಗದರ್ಶಿ ಟೆಂಪ್ಲೇಟ್ ಆಗಿದ್ದು ವಿದ್ಯಾರ್ಥಿಗಳು ಮೇಲಿನ ಮಾಹಿತಿಯನ್ನು ತಮ್ಮ ಸೃಜನಶೀಲತೆಗೆ ತಕ್ಕಂತೆ ಪ್ರಸ್ತುತಪಡಿಸಲು ಮುಕ್ತರಾಗಿದ್ದಾರೆ. ಗುಂಪು ಟಾಸ್ಕ್‌ಗೆ ಉಲ್ಲೇಖಿಸಿದ ಎಲ್ಲಾ ವಿಷಯಗಳೂ ಒಳಗೊಂಡಿರುವಂತೆ ಎಚ್ಚರವಹಿಸಬೇಕು.
ಉಲ್ಲೇಖಕ್ಕಾಗಿ ವಿಶ್ವ ಭೂಪಟದ ಚಿತ್ರ:
ಚಿತ್ರದ ಮೂಲ: https://www.123rf.com/photo_36235529_cartoon-world-map.html