

ಕರ್ನಾಟಕ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಗ್ರೇಡ್ 6 ಫೆಬ್ರವರಿ ಚಟುವಟಿಕೆ – ಡ್ಯೂಟಿ ಬಾಂಡ್
ಉದ್ದೇಶಗಳು
- ಸಾರ್ವಜನಿಕ ಸ್ಥಳಗಳ ಕುರಿತು ಕಾಳಜಿ ವಹಿಸಲು ನಾಗರಿಕರಾಗಿ ತಮ್ಮ ಕರ್ತವ್ಯದ ಬಗ್ಗೆ ಜಾಗೃತರಾಗುವುದು.
- ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿರಿಸಲು ಮಾಡಬೇಕಾದ ಸಣ್ಣ ಸಣ್ಣ ಕೆಲಸಗಳನ್ನು ಗುರುತಿಸುವುದು.
ಕೌಶಲ್ಯಗಳು
ಸಮಸ್ಯೆ ಪರಿಹರಿಸುವುದು, ಸಂವಹನ.
ಮೌಲ್ಯಗಳು
ಕಾರ್ಯದ ಹೊಣೆಗಾರಿಕೆ (ಜವಾಬ್ದಾರಿಯುತ), ನಾಗರಿಕ ಕರ್ತವ್ಯ
ಬೇಕಾದ ಸಾಮಗ್ರಿಗಳು
ಪೇಪರ್ ಮತ್ತು ಪೆನ್ನುಗಳು
ಮುಖ್ಯ ಚಟುವಟಿಕೆ
ಚಟುವಟಿಕೆಯ ಪರಿಚಯ ಮತ್ತು ವಿವರಣೆ – 15 ನಿಮಿಷಗಳು
- ಶಿಕ್ಷಕರು ತರಗತಿಯ ಗಾತ್ರಕ್ಕೆ ತಕ್ಕಂತೆ 6-8 ವಿದ್ಯಾರ್ಥಿಗಳ ಕನಿಷ್ಠ 4 ಗುಂಪುಗಳಾಗಿ ತರಗತಿಯನ್ನು ವಿಂಗಡಿಸುತ್ತಾರೆ. ದೊಡ್ಡ ತರಗತಿಗೆ ಹೆಚ್ಚು ಗುಂಪುಗಳನ್ನು ರಚಿಸಬಹುದು.
- ಬೋರ್ಡ್ ಮೇಲೆ ಸಾರ್ವಜನಿಕ ಸ್ಥಳಗಳ ಪಟ್ಟಿ ಮಾಡಿ ಗುಂಪುಗಳಿಗೆ ತಾವು ಬಯಸಿದಂತೆ 1 ಸ್ಥಳವನ್ನು ಆರಿಸಿಕೊಳ್ಳಲು ಹೇಳಿ
- ಸಾರ್ವಜನಿಕ ಪಾರ್ಕ್/ಹೂದೋಟಗಳು/ಮಕ್ಕಳ ಪಾರ್ಕ್
- ತರಕಾರಿ ಮಾರುಕಟ್ಟೆ
- ಬಸ್ ನಿಲ್ದಾಣ
- ಹಳ್ಳಿಯ ರಸ್ತೆ/ಶಾಲೆಯಿಂದ ಮನೆಗೆ ಹೋಗುವ ರಸ್ತೆ.
- ಸ್ಮಾರಕಗಳು (ಅಥವಾ ಕೋಟೆಗಳು/ ಪರಂಪರೆ/ಧಾರ್ಮಿಕ ಸ್ಥಳಗಳ ಕಟ್ಟಡಗಳು)
(ಗಮನಿಸಿ: ಹೆಚ್ಚು ಗುಂಪುಗಳಿದ್ದರೆ, ಹೆಚ್ಚುವರಿ ಸ್ಥಳಗಳಿಗಾಗಿ ಶಿಕ್ಷಕರ ಆಯ್ಕೆಯ ಯಾವುದೇ ಇತರ ಸಾರ್ವಜನಿಕ ಸ್ಥಳ)
- ಚಟುವಟಿಕೆಯನ್ನು ಎಲ್ಲಾ ಗುಂಪುಗಳಿಗೆ ವಿವರಿಸಲು ಪದಾಧಿಕಾರಿಗಳಿಗೆ ಈ ಕೆಳಗಿನಂತೆ ಬೋರ್ಡ್ ಮೇಲೆ ಟೇಬಲ್ ಅನ್ನು ಚಿತ್ರಿಸಲು ಹೇಳಿ
ಗುಂಪಿನ ನಾಯಕನ ಹೆಸರು –___________________________
ಗುಂಪಿನ ಸದಸ್ಯರ ಹೆಸರು –_______________________________________
ಸಮಸ್ಯೆಗಳ ಬಗ್ಗೆ ಮತ್ತು ಸಣ್ಣ ಸಣ್ಣ ಕೆಲಸಗಳ ಮೂಲಕ ತಾವು ಅಥವಾ ಯಾವುದೇ ನಾಗರಿಕರು ಸಮಸ್ಯೆಯನ್ನು ಪರಿಹರಿಸಲು ತೆಗೆದೊಳ್ಳಬಹುದಾದ ಅವಶ್ಯ ಕಾರ್ಯಗಳ ಕುರಿತು ಆಲೋಚಿಸಲು ಗುಂಪುಗಳಿಗೆ 10 ನಿಮಿಷಗಳನ್ನು ನೀಡುವುದು.
ಪ್ರಸ್ತುತಿ – 15 ನಿಮಿಷಗಳು
- ಶಿಕ್ಷಕರು, ಪ್ರತಿ ಗುಂಪು ತಮಗೆ ನಿಯೋಜಿಸಲಾದ ಸಾರ್ವಜನಿಕ ಸ್ಥಳಗಳ 2 ಸಮಸ್ಯೆಗಳು ಮತ್ತು 2 ಕಾರ್ಯ ಯೋಜನೆಗಳನ್ನು ಪ್ರಸ್ತುತಪಡಿಸಲು ಆಹ್ವಾನಿಸುವ ಮೂಲಕ ಪ್ರಾರಂಭಿಸುತ್ತಾರೆ.
- ಪ್ರತಿ ಗುಂಪಿಗೆ ಪ್ರಸ್ತುತಪಡಿಸಲು 2-3 ನಿಮಿಷಗಳು ದೊರೆಯುತ್ತದೆ.
- ಪ್ರತಿ ಪ್ರಸ್ತುತಿಯ ನಂತರ, ಇತರ ವಿದ್ಯಾರ್ಥಿಗಳು ಸಲಹೆಗಳನ್ನು ನೀಡುತ್ತಾರೆ ಮತ್ತು ಶಿಕ್ಷಕರು ಅಗತ್ಯಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುತ್ತಾರೆ.
ಡ್ಯೂಟಿ ಬಾಂಡ್ ರಚನೆ – (ಆ ಸಮಯದಲ್ಲಿ (Period) ಪೂರ್ಣಗೊಳಿಸಲು ಶಿಕ್ಷಕರಿಗೆ ಸಾಧ್ಯವಾಗದಿದ್ದರೆ, ಪದಾಧಿಕಾರಿಗಳ ನೆರವಿನೊಂದಿಗೆ ಅವರು ಡ್ಯೂಟಿ ಬಾಂಡ್‌ನ ಫಾರ್ಮ್ಯಾಟ್ ಅನ್ನು ವಿದ್ಯಾರ್ಥಿಗಳಿಗೆ ಹಂಚಬಹುದು. (ಬ್ಲ್ಯಾಕ್ ಬೋರ್ಡ್ ಮೇಲೆ ಚಿತ್ರಿಸಿ).
- ತರಗತಿಯಲ್ಲಿ ಸಮಯದ ಅಭಾವವಿದ್ದರೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಗುಂಪಿನ ಸ್ಥಳಕ್ಕೆ ತಕ್ಕಂತೆ ತಮ್ಮ ನೋಟ್ ಬುಕ್ ಹಾಳೆಯಲ್ಲಿ ಡ್ಯೂಟಿ ಬಾಂಡ್ ಅನ್ನು ರಚಿಸಲು ಹೇಳುತ್ತಾರೆ.
ಪದಾಧಿಕಾರಿಗಳು ತರಗತಿಯ ಕೊನೆಯಲ್ಲಿ ಗುಂಪಿನ ಡ್ಯೂಟಿ ಬಾಂಡ್ ಅನ್ನು ದೇಶ್ ಅಪ್ನಾಯೇ ಫಲಕದಲ್ಲಿ (DA ಗೋಡೆ) ಪ್ರದರ್ಶಿಸುತ್ತಾರೆ.
ಗುಂಪಿನ ಇತರ ಸದಸ್ಯರಿಗೆ ಪರಸ್ಪರ ಡ್ಯೂಟಿ ಬಾಂಡ್ ಅನ್ನು ಸಹಿ ಮಾಡಲು ಹೇಳಿ, ಇದು ಅವರಿಗೆ ಅನುಸರಿಸಲು ಜವಾಬ್ದಾರಿಯ ಮನೋಭಾವವನ್ನು ನೀಡುತ್ತದೆ. (ಐಚ್ಛಿಕ)
ಚಟುವಟಿಕೆಯನ್ನು ಮುಕ್ತಾಯಗೊಳಿಸಿ
ಗಮನಿಸಿ - ಸಮಯವಿದ್ದರೆ, ಶಿಕ್ಷಕರು ಪದಾಧಿಕಾರಿಗಳಿಗೆ ಕೆಳಗೆ ಉಲ್ಲೇಖಿಸಿದಂತೆ ಚಟುವಟಿಕೆಯನ್ನು ಮುಕ್ತಾಯಗೊಳಿಸುವ ಅವಕಾಶ ನೀಡಬಹುದು. ಒಂದು ವೇಳೆ ಸಮಯದ ಅಭಾವವಿದ್ದರೆ, ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ- ಅವರು ಈ ಚಟುವಟಿಕೆಯಿಂದ ಏನು ಕಲಿತುಕೊಂಡರು ಎಂಬುದನ್ನು ಪ್ರಶ್ನಿಸಲು ಆಹ್ವಾನಿಸಿ.
ಪದಾಧಿಕಾರಿಗಳು ಅದೇ ಗುಂಪುಗಳಲ್ಲಿನ ವಿದ್ಯಾರ್ಥಿಗಳಿಗೆ ತಮ್ಮ ಡ್ಯೂಟಿ ಬಾಂಡ್‌ಗೆ ಹೊಂದಿಕೆಯಾಗುವಂತಹ ಸೃಜನಾತ್ಮಕ ಸ್ಲೋಗನ್/ಕೋಟ್ ಅನ್ನು ರಚಿಸಲು ಹೇಳುತ್ತಾರೆ. ಅವರು ತಮ್ಮದೇ ಆದ ಸ್ಲೋಗನ್/ಕೋಟ್ ಅನ್ನು ರಚಿಸಬಹುದು ಅಥವಾ ತಮಗೆ ತಿಳಿದಿರುವ ಚಾಲ್ತಿಯಲ್ಲಿರುವುದನ್ನು ಬಳಸಬಹುದು. (ಉದಾ – ಸ್ವಚ್ಛ ಪರಿಸರ – ಆರೋಗ್ಯಕರ ಪರಿಸರ.) ಅಲ್ಲದೇ ಅವರು ಸ್ಥಳೀಯ ಭಾಷೆಯಲ್ಲೂ ಅಥವಾ ಯಾವುದೇ ಜಿಂಗಲ್ ಅನ್ನು ರಚಿಸಬಹುದು ಮತ್ತು ಅದನ್ನು ತಮ್ಮ ತರಗತಿಯ ದೇಶ್ ಅಪ್ನಾಯೇ ಫಲಕದಲ್ಲಿ (DA ಗೋಡೆ)ಹಾಕಬಹುದು.
ಪದಾಧಿಕಾರಿಗಳೂ ಯಾವುದಾದರೂ ಗುಂಪಿನ ಭಾಗವಾಗಿ ಅದರಲ್ಲಿ ಭಾಗವಹಿಸಬಹುದು.
ಚರ್ಚೆಯನ್ನು ಆಧರಿಸಿ ಶಿಕ್ಷಕರು ಸಂಕ್ಷೇಪಿಸುತ್ತಾರೆ ಮತ್ತು ಈ ಕೆಳಗಿನವುಗಳೊಂದಿಗೆ ಮುಕ್ತಾಯಗೊಳಿಸುತ್ತಾರೆ-
- ಎಲ್ಲರ ಪ್ರಸ್ತುತಿಯಿಂದ ಪ್ರಮುಖ ವಿಷಯಗಳನ್ನು ಒಳಗೊಂಡಿರಬೇಕು. ಜವಾಬ್ದಾರಿಯುತ ಬಳಕೆ, ಅದನ್ನು ಸ್ವಚ್ಛವಾಗಿರಿಸುವುದು, ಯಾವುದೇ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸದಿರುವುದು ಇತ್ಯಾದಿ ಸಾಮಾನ್ಯ ಥೀಮ್‌ಗಳನ್ನು ಒತ್ತಿ ಹೇಳಿ.
- ಹೇಗೆ ಮನೆಯಲ್ಲಿ ಜವಾಬ್ದಾರಿಯನ್ನು ಹಂಚಿಕೊಳ್ಳುವುದು ನಮ್ಮ ಕರ್ತವ್ಯವೋ ಅದೇ ರೀತಿಯಾಗಿ ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮ ದೊಡ್ಡ ಮನೆಯಾಗಿದ್ದು, ಈ ಸಾರ್ವಜನಿಕ ಸ್ಥಳಗಳನ್ನು ಕಾಪಾಡಿಕೊಳ್ಳುವುದು ಕೂಡಾ ನಮ್ಮ ಕರ್ತವ್ಯವಾಗಿದೆ.
ದೇಶ್ ಅಪ್ನಾಯೇ ಫಲಕ (DA ಗೋಡೆ)
ಈ ಚಟುವಟಿಕೆಗೆ, ಫಲಕದಲ್ಲಿನ ಪದಾಧಿಕಾರಿಗಳು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು.
- ಗುಂಪಿನ ಡ್ಯೂಟಿ ಬಾಂಡ್
- ಪದಾಧಿಕಾರಿಗಳ ಮುಕ್ತಾಯಗೊಳಿಸುವಿಕೆ – ರಚಿಸಿದ ಸ್ಲೋಗನ್‌ಗಳು/ಕೋಟ್‌ಗಳು/ಜಿಂಗಲ್
ಗಮನಿಸಬೇಕಾದ ಅಂಶಗಳು
- ಡ್ಯೂಟಿ ಬಾಂಡ್ ಮಾಡಲು ಲಭ್ಯವಿರುವ ಹಾಳೆಗಳನ್ನು ಬಳಸಿ
- ಗುಂಪಿನ ಕಾರ್ಯವನ್ನು ಅಂದಗೊಳಿಸಲು (Decoreations iteams) ಸಂಪನ್ಮೂಲಗಳಿಗೆ ಖರ್ಚುಮಾಡದಿರಿ, ಇಲ್ಲಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದಕ್ಕಾಗಿ ಡ್ಯೂಟಿ ಬಾಂಡ್ ರಚಿಸಲು ಕಲಿಯುವುದು ಉದ್ದೇಶವಾಗಿದೆ.
- ಈ ಸ್ಥಳಗಳಿಗೆ ಹೋಗಿ ಸ್ವಚ್ಛತಾ ಕಾರ್ಯಗಳನ್ನು ಮಾಡಬೇಡಿ. ಡ್ಯೂಟಿ ಬಾಂಡ್ ಮಾತ್ರ ರಚಿಸಬೇಕು.
ಚಟುವಟಿಕೆ ಫೋಟೋಗಳನ್ನು ಹಂಚಿಕೊಳ್ಳುವುದು
- ಎಂಗೇಜ್‌ಮೆಂಟ್ ಆಫೀಸರ್‌ಗಳೊಂದಿಗೆ ಹಂಚಿಕೊಳ್ಳಬೇಕಿರುವ ಚಟುವಟಿಕೆ ಚಿತ್ರಗಳಿಗಾಗಿ ದಯವಿಟ್ಟು (2-3) ಇವುಗಳ ಸ್ಪಷ್ಟ ಚಿತ್ರಗಳನ್ನು ಹಂಚಿಕೊಳ್ಳಿ
- ತಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸುತ್ತಿರುವ ಗುಂಪು (2 ಗುಂಪುಗಳ ಫೋಟೋಗಳು)
- ಸೆಶನ್ ಅನ್ನು ಮುಕ್ತಾಯಗೊಳಿಸುತ್ತಿರುವ ಪದಾಧಿಕಾರಿಗಳು/(2 ಗುಂಪುಗಳ ಫೋಟೋಗಳು)
- ದೇಶ್ ಅಪ್ನಾಯೇ ಫಲಕ(DA ಗೋಡೆ) (2 ಗುಂಪುಗಳ ಫೋಟೋಗಳು)